ಪಾರ್ಲ್(ದಕ್ಷಿಣ ಆಫ್ರಿಕಾ):ಆಲ್ರೌಂಡರ್ ಹೆಸರಿನಲ್ಲಿ ಸೂರ್ಯಕುಮಾರ್ ಯಾದವ್ರನ್ನು ಹೊರಗಿಟ್ಟು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವಕಾಶ ಪಡೆದಿದ್ದ ವೆಂಕಟೇಶ್ ಅಯ್ಯರ್ಗೆ ಏಕೆ ಬೌಲಿಂಗ್ ನೀಡಲಿಲ್ಲ ಎನ್ನುವುದು ಕ್ರಿಕೆಟ್ ತಜ್ಞರ ಸಹಿತ ಸಾಕಷ್ಟು ಭಾರತೀಯ ಅಭಿಮಾನಿಗಳಲ್ಲಿ ಗೊಂದಲವನ್ನುಂಟು ಮಾಡಿತ್ತು. ಇದೀಗ ಆರಂಭಿಕ ಬ್ಯಾಟರ್ ಶಿಖರ್ ಧವನ್ ಕಾರಣ ಬಿಚ್ಚಿಟ್ಟಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ವ್ಯಾನ್ ಡರ್ ಡಸೆನ್ ಮತ್ತು ಟೆಂಬ ಬವೂಮ ಅವರ ಶತಕದ ನೆರವಿನಿಂದ 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 296 ರನ್ಗಳಿಸಿತ್ತು. 297 ರನ್ಗಳ ಗುರಿ ಬೆನ್ನಟ್ಟಿದ ಭಾರತ ನಿಗಧಿತ ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 265 ರನ್ಗಳಿಸಲಷ್ಟೇ ಶಕ್ತವಾಗಿ 31 ರನ್ಗಳಿಂದ ಸೋಲನುಭವಿಸಿತು.
ಆದರೆ ಈ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಆಲ್ರೌಂಡರ್ ಎಂದು ಆಯ್ಕೆ ಮಾಡಲಾಗಿತ್ತು. ಆದರೆ ಬವೂಮ ಮತ್ತು ಡಸೆನ್ ಜೋಡಿ ಭಾರತೀಯ ಖಾಯಂ ಬೌಲರ್ಗಳನ್ನ ಬೆಂಡೆತ್ತುತ್ತಿದ್ದರೂ ಟೀಮ್ ಇಂಡಿಯಾ ಮಾತ್ರ ಬೌಲಿಂಗ್ ಬದಲಾವಣೆಗಾದರೂ ಅಯ್ಯರ್ಗೆ ಒಂದೆರಡು ಓವರ್ ನೀಡಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ನಾಯಕ ರಾಹುಲ್ 5 ಬೌಲರ್ಗಳಿಂದಲೇ ಪೂರ್ಣ ಓವರ್ ಮಾಡಿಸಿದರು. ಇದು ವೆಂಕಟೇಶ್ರನ್ನು ಆಯ್ಕೆಮಾಡಿಕೊಂಡಿದ್ದಾದರೂ ಏಕೆ? ಎನ್ನುವ ಪ್ರಶ್ನೆ ಉದ್ಭವಕ್ಕೆ ಕಾರಣವಾಗಿತ್ತು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ