ಕೊಲಂಬೊ:ಸದಾ ಲವಲವಿಕೆಯಿಂದ ಇರುವ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್, ಮೈದಾನದಲ್ಲಿ ತಮಾಷೆ ಮಾಡುತ್ತಲೇ ಇರುತ್ತಾರೆ. ಲಂಕಾ ವಿರುದ್ಧ ನಡೆದ ಇಂದಿನ ಪಂದ್ಯದಲ್ಲೂ ಅವರು ವಿಭಿನ್ನವಾಗಿ ಸಂಭ್ರಮಿಸಿದರು.
ಲಂಕಾ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಶಿಖರ್ ಧವನ್ ಟೀಂ ಇಂಡಿಯಾ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದು, ಈ ಹಿಂದಿನ ಎರಡು ಪಂದ್ಯಗಳಲ್ಲಿ ಟಾಸ್ ಸೋತಿದ್ದರು. ಆದರೆ ಇಂದಿನ ಪಂದ್ಯದಲ್ಲಿ ಟಾಸ್ ಗೆಲ್ಲುತ್ತಿದ್ದಂತೆ ಕಬಡ್ಡಿ ಶೈಲಿಯಲ್ಲಿ ತೊಡೆತಟ್ಟಿ ಕೈಮೇಲೆತ್ತಿ ಸಂಭ್ರಮಿಸಿದ್ದಾರೆ. ಇದರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.