ಕೊಲಂಬೊ :ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಹಾಗೂ ಹಂಗಾಮಿ ನಾಯಕ ಶಿಖರ್ ಧವನ್ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಕ್ರಿಕೆಟ್ನಲ್ಲಿ 6000 ರನ್ ಪೂರೈಸಿದ್ದು, ಈ ಮೈಲುಗಲ್ಲನ್ನು ವೇಗವಾಗಿ ತಲುಪಿದ ಭಾರತದ 2ನೇ ಮತ್ತು ವಿಶ್ವದ 4ನೇ ಬ್ಯಾಟ್ಸ್ಮನ್ ಎಂಬ ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ.
ಭಾನುವಾರ 263 ರನ್‌ಗಳ ಗುರಿ ಬೆನ್ನುತ್ತುವಾಗ 17 ರನ್ಗಳಿಸಿದ್ದ ವೇಳೆ ಏಕದಿನ ಕ್ರಿಕೆಟ್ನಲ್ಲಿ 6 ಸಾವಿರ ರನ್‌ಗಳ ಮೈಲುಗಲ್ಲು ತಲುಪಿದರು. ಅಲ್ಲದೆ ಭಾರತ ತಂಡದ ನಾಯಕ ಸೌರವ್ ಗಂಗೂಲಿ(147), ರೋಹಿತ್ ಶರ್ಮಾ(162), ಧೋನಿ(166),ತೆಂಡೂಲ್ಕರ್(170) ಗಿಂತ ವೇಗವಾಗಿ ಈ ಸಾಧನೆ ಮಾಡಿದ ಕೀರ್ತಿಗೆ ಭಾಜನರಾದರು.
ಭಾರತದ ವಿರಾಟ್ ಕೊಹ್ಲಿ 136 ಇನ್ನಿಂಗ್ಸ್ಗಳಲ್ಲಿ 6 ಸಾವಿರ ರನ್ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಹಾಸಿಮ್ ಆಮ್ಲಾ ವೇಗವಾಗಿ 6 ಸಾವಿರ ರನ್ ಬಾರಿಸಿದ ವಿಶ್ವ ದಾಖಲೆ ಹೊಂದಿದ್ದು, ಅವರು ಕೇವಲ123 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ ಬ್ಯಾಟ್ಸ್ಮನ್ ಎನಿಸಿಕೊಂಡರು.