ಕರ್ನಾಟಕ

karnataka

ETV Bharat / sports

ಅಫ್ಘಾನಿಸ್ತಾನ ಬೌಲಿಂಗ್ ಕೋಚ್​ ಆಗಿ ಆಸ್ಟ್ರೇಲಿಯಾದ ವೇಗಿ ಶಾನ್​ ಟೈಟ್​ ನೇಮಕ

ಅಫ್ಘಾನಿಸ್ತಾನ ಬೌಲಿಂಗ್ ಕೋಚ್​ ಆಗಿ ಆಸ್ಟ್ರೇಲಿಯಾದ ವೇಗಿ ಶಾನ್​ ಟೈಟ್​ ಅವರನ್ನು ನೇಮಕ ಮಾಡಲಾಗಿದೆ. ಶಾನ್​ ಟೈಟ್​ ಆಸ್ಟ್ರೇಲಿಯಾ ಪರ 2005ರಿಂದ 2016ರವರೆಗೆ 35 ಏಕದಿನ ಪಂದ್ಯ, 21 ಟಿ20 ಮತ್ತು 3 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. ಒಟ್ಟು 95 ಅಂತಾರಾಷ್ಟ್ರೀಯ ವಿಕೆಟ್​ ಪಡೆದಿದ್ದಾರೆ.

Shaun Tait
ಸ್ಟ್ರೇಲಿಯಾದ ವೇಗಿ ಶಾನ್​ ಟೈಟ್​

By

Published : Aug 9, 2021, 7:55 PM IST

ನವದೆಹಲಿ: ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್​ ಶಾನ್ ಟೈಟ್​ ಅಫ್ಘಾನಿಸ್ತಾನದ ನೂತನ ಕೋಚ್​ ಆಗಿ ನೇಮಕಗೊಂಡಿದ್ದಾರೆ. ಈ ವಿಚಾರವನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.

ಶಾನ್​ ಟೈಟ್​ ಆಸ್ಟ್ರೇಲಿಯಾ ಪರ 2005ರಿಂದ 2016ರವರೆಗೆ 35 ಏಕದಿನ ಪಂದ್ಯ, 21 ಟಿ20 ಮತ್ತು 3 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. ಒಟ್ಟು 95 ಅಂತಾರಾಷ್ಟ್ರೀಯ ವಿಕೆಟ್​ ಪಡೆದಿದ್ದಾರೆ.

ತಮ್ಮ ವಿಚಿತ್ರ ಶೈಲಿಯ ಆ್ಯಕ್ಷನ್​ ಮೂಲಕ ದ ವೈಲ್ಡ್​ ಥಿಂಗ್ ಎಂದು ಅಡ್ಡ ಹೆಸರಿನಿಂದ ಖ್ಯಾತರಾಗಿದ್ದ ಟೈಟ್​ 2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಈ ಹಿಂದೆ ಅವರು ಬಿಬಿಎಲ್​ನಲ್ಲಿ ಮೆಲ್ಬೋರ್ನ್​ ರೆನಿಗೇಡ್ಸ್​ ತಂಡದಲ್ಲಿ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆ ಟಿ10 ಮತ್ತು ಕೌಂಟಿ ತಂಡವಾದ ದುರ್ಹಾಮ್​ ತಂಡದ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದರು.

ನವೆಂಬರ್​ನಲ್ಲಿ ಅಫ್ಘಾನಿಸ್ತಾನ ಏಕದಿನ ಸೂಪರ್​ ಲೀಗ್​ ಭಾಗವಾಗಿ ಪಾಕಿಸ್ತಾನದ ವಿರುದ್ಧ ಶ್ರೀಲಂಕಾದಲ್ಲಿ 3 ಪಂದ್ಯಗಳನ್ನಾಡಲಿದೆ. ಅಲ್ಲದೆ ಟಿ20 ವಿಶ್ವಕಪ್​ಗೂ ಮುನ್ನ ಹೋಬರ್ಟ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧವೂ ಏಕೈಕ ಟೆಸ್ಟ್​ ಪಂದ್ಯವನ್ನಾಡಲಿದೆ. ಈ ಸರಣಿಗಳಲ್ಲಿ ಟೈಟ್​ ಅಫ್ಘಾನ್ ತಂಡದ ಭಾಗವಾಗಲಿದ್ದಾರೆ.

ಇದನ್ನು ಓದಿ:ಜೂನಿಯರ್ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಶ್ರೀದರನ್ ಶರತ್ ನೇಮಕ

ABOUT THE AUTHOR

...view details