ಮೊಹಾಲಿ (ಪಂಜಾಬ್): ಆಸ್ಪ್ರೇಲಿಯಾದ ಖ್ಯಾತ ಕ್ರಿಕೆಟರ್, ಸ್ಪೀನ್ ಮಾಂತ್ರಿಕ ಶೇನ್ ವಾರ್ನ್ ಹಠಾತ್ ಅಗಲಿಕೆಯಿಂದ ನನಗೆ ವೈಯಕ್ತಿಕ ನಷ್ಟ ಉಂಟಾಗಿದೆ. ಕ್ರಿಕೆಟ್ ಆಡುವವರೆಗೂ ಶೇನ್ ವಾರ್ನ್ ಹೆಸರು ಅಚ್ಚಳಿಯದೇ ಉಳಿಯಲಿದೆ ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಶೇನ್ ವಾರ್ನ್ ಎದುರು ನಾನು ಕ್ರಿಕೆಟ್ ಆಡಿರುವುದೇ ನನಗೆ ಹೆಮ್ಮೆ. ಅವರನ್ನು ವೈಯಕ್ತಿಕವಾಗಿ ತಿಳಿದುಕೊಂಡಿರುವುದು ಮತ್ತು ಸುದೀರ್ಘ ಕಾಲ ಅವರ ಸಹಪಾಠಿಯಾಗಿರುವುದು ನನ್ನ ಭಾಗ್ಯ. ನನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ವಾರ್ನ್ ಪ್ರಮುಖ ವ್ಯಕ್ತಿ ಆಗಿದ್ದರು ಎಂದೇ ನಾನು ಭಾವಿಸಿದ್ದೇನೆ ಎಂದು ದ್ರಾವಿಡ್ ಕಂಬನಿ ಮಿಡಿದಿದ್ದಾರೆ.