ಮುಂಬೈ: ಭಾರತ ನಾಲ್ಕು ವರ್ಷಗಳ ನಂತರ ಐರ್ಲೆಂಡ್ ಪ್ರವಾಸ ಕೈಗೊಳ್ಳುತ್ತಿದ್ದು, ಟೀಮ್ ಇಂಡಿಯಾ ಅತಿಥೇಯ ತಂಡದ ವಿರುದ್ಧ 2 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ದ್ವಿತೀಯ ದರ್ಜೆಯ ಭಾರತ ತಂಡ ಈ ಪ್ರವಾಸ ಕೈಗೊಳ್ಳಲಿದ್ದು, ಮಲಾಹೈಡ್ನಲ್ಲಿ ಜೂನ್ 26 ಮತ್ತು 28ರಂದು 2 ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ ಎಂದು ಐರ್ಲೆಂಡ್ ಕ್ರಿಕೆಟ್ ಮಂಡಳಿ ಬುಧವಾರ ಖಚಿತಪಡಿಸಿದೆ.
ಆದರೆ ಈ ಸರಣಿಯಲ್ಲಿ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ ಮತ್ತು ಪ್ರಥಮ ಆಯ್ಕೆಯ ವಿಕೆಟ್ ಕೀಪರ್ ರಿಷಭ್ ಪಂತ್ ಹಾಗೂ ಮುಂಚೂಣಿ ವೇಗಿ ಜಸ್ಪ್ರೀತ್ ಬುಮ್ರಾ ಆಡುವ ಸಾಧ್ಯತೆಯಿಲ್ಲ. ಇವರೆಲ್ಲರೂ ಜುಲೈ 1-5ರವರೆಗೆ ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿ ಉಳಿದಿರುವ ಕೊನೆಯ ಟೆಸ್ಟ್ ಪಂದ್ಯವನ್ನಾಡಲಿದೆ.