ಕರ್ನಾಟಕ

karnataka

ETV Bharat / sports

'Friends the Reunion':ಅಭಿಮಾನಿಗಳಿಗೋಸ್ಕರ ವಿಶೇಷ ಪೋಸ್ಟ್ ಮಾಡಿದ ರೋಹಿತ್

ಕಳೆದ ಒಂದು ವರ್ಷದಿಂದ ಕೋವಿಡ್ ಕಾರಣದಿಂದ ಮೈದಾನದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡುತ್ತಿಲ್ಲ. ಆಸ್ಟ್ರೇಲಿಯಾ, ಇಂಗ್ಲೆಂಡ್​ ರಾಷ್ಟ್ರಗಳಲ್ಲಿ ಶೇ 25, 30 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುತ್ತಿದ್ದಾರೆ. ಆದರೆ, ಐಪಿಎಲ್​ನಲ್ಲಿ ಪ್ರೇಕ್ಷಕರ ರಹಿತವಾಗಿ ಖಾಲಿ ಮೈದಾನದಲ್ಲಿ ಪಂದ್ಯಾವಳಿ ನಡೆಸಲಾಗಿತ್ತು.

ರೋಹಿತ್ ಶರ್ಮಾ
ರೋಹಿತ್ ಶರ್ಮಾ

By

Published : May 27, 2021, 9:35 PM IST

ಮುಂಬೈ: ವಿಶ್ವಪ್ರಸಿದ್ಧ 'ಫ್ರೆಂಡ್ಸ್​: ದಿ ರಿಯೂನಿಯನ್' ವೆಬ್ ಸಿರೀಸ್​ ಇದೀಗ ಹೊಸ ಸೀಸನ್ ಆರಂಭಿಸಿದ್ದು, ಇಂಟರ್​ನೆಟ್​ ತುಂಬಾ ಸದ್ದು ಮಾಡುತ್ತಿದೆ. ಇನ್ನು ಶೀಘ್ರದಲ್ಲೇ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತೀಯ ಕ್ರಿಕೆಟಿಗರು ಇದನ್ನು ಕ್ವಾರಂಟೈನ್‌ ಅವಧಿಯಲ್ಲಿ ಸಮಯ ಕಳೆಯಲು ಈ ಸಿರೀಸ್​ ವೀಕ್ಷಿಸುತ್ತಿದ್ದಾರೆ.

ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ "ಲವ್ ದಿ ಫ್ರೆಂಡ್ಸ್ ರಿಯೂನಿಯನ್" ಎಂದು ಪೋಸ್ಟ್ ಮಾಡಿದ್ದಾರೆ. ಆದರೆ, ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಹಿಟ್​ಮ್ಯಾನ್ ರೋಹಿತ್ ಶರ್ಮಾ " ಫ್ರೆಂಡ್ಸ್​, ನಾನು ಎದುರು ನೋಡುತ್ತಿರುವ ರಿ ಯೂನಿಯನ್​ ಇದು" ಎಂದು ಶತಕ ಸಿಡಿಸಿ ಅಭಿಮಾನಿಗಳ ಮುಂದೆ ಬ್ಯಾಟ್​ ಎತ್ತಿ ಸಂಭ್ರಮಿಸುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಕಳೆದ ಒಂದು ವರ್ಷದಿಂದ ಕೋವಿಡ್ ಕಾರಣದಿಂದ ಮೈದಾನದಲ್ಲಿ ಪ್ರೇಕ್ಷಕರಿಗೆ ಅವಕಾಶ ನಿಡುತ್ತಿಲ್ಲ. ಆಸ್ಟ್ರೇಲಿಯಾ, ಇಂಗ್ಲೆಂಡ್​ ರಾಷ್ಟ್ರಗಳಲ್ಲಿ ಶೇ 25, 30 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುತ್ತಿದ್ದಾರೆ. ಆದರೆ, ಐಪಿಎಲ್​ನಲ್ಲಿ ಪ್ರೇಕ್ಷಕರ ರಹಿತವಾಗಿ ಖಾಲಿ ಮೈದಾನದಲ್ಲಿ ಪಂದ್ಯಾವಳಿ ನಡೆಸಲಾಗಿತ್ತು.

ಆದರೆ, ಇಂಗ್ಲೆಂಡ್ ಪ್ರವಾಸ ಕೈಗೊಳ್ಳುತ್ತಿರುವ ಭಾರತ ತಂಡಕ್ಕೆ ಅಲ್ಲಿ ಪ್ರೇಕ್ಷಕರ ಎದುರು ಆಡುವ ಅವಕಾಶ ಸಿಕ್ಕಿದೆ. ಯಾವುದೇ ಕ್ರಿಕೆಟಿಗ ಅಭಿಮಾನಿಗಳ ಮುಂದೆ ಕ್ರಿಕೆಟ್ ಆಡುವುದನ್ನ ಆನಂದಿಸುತ್ತಾರೆ. ಹಾಗೆಯೇ ರೋಹಿತ್ ಶರ್ಮಾ ಕೂಡ ಅಭಿಮಾನಿಗಳನ್ನು ಕಾಣುವುದಕ್ಕೆ ಎದುರು ನೋಡುತ್ತಿರುವುದಾಗಿ ಪೋಸ್ಟ್​ ಮೂಲಕ ಹೇಳಿದ್ದಾರೆ.

ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯಕ್ಕೆ ಈಗಾಗಲೇ 4000 ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್​ ಸರಣಿಯ ವೇಳೆ ಕೂಡ ಅವಕಾಶ ನೀಡುವುದಾಗಿ ಇಸಿಬಿ ತಿಳಿಸಿದೆ.

ಇದನ್ನು ಓದಿ:ಐಪಿಎಲ್​ನ ದ್ವಿತೀಯಾರ್ಧದಲ್ಲಿ ಆಡಲು ನಮ್ಮ ಆಟಗಾರರಿಗೆ ಅವಕಾಶ ಕೊಡಲ್ಲ: ಇಸಿಬಿ ಸ್ಪಷ್ಟನೆ

ABOUT THE AUTHOR

...view details