ಮೆಲ್ಬೋರ್ನ್(ಆಸ್ಟ್ರೇಲಿಯಾ):ಟಿ20 ವಿಶ್ವಕಪ್ನಲ್ಲಿ ಮನಮೋಹಕ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ಗೆ ನಾಯಕ ರೋಹಿತ್ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಸೂರ್ಯ ಮೈದಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರೆ, ತಂಡ ನಿರಾಳವಾಗಿರುತ್ತದೆ" ಎಂದು ಹೇಳಿದ್ದಾರೆ.
ಜಿಂಬಾಬ್ವೆ ವಿರುದ್ಧ 71 ರನ್ಗಳ ಗೆಲುವು ಸಾಧಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ನಂ.1 ಬ್ಯಾಟರ್ ಖ್ಯಾತಿಯಂತೆ ಆಟವಾಡುತ್ತಿದ್ದಾರೆ. ಆತ ಮೈದಾನದಲ್ಲಿ ಬ್ಯಾಟ್ ಬೀಸುವವರೆಗೂ ಪೆವಿಲಿಯನ್ನಲ್ಲಿರುವ ತಂಡಕ್ಕೆ ತಲೆನೋವೇ ಇರುವುದಿಲ್ಲ. ರನ್ಗಳು ಖಾತೆ ಸೇರುತ್ತಿರುತ್ತವೆ ಎಂದು ಹೇಳಿದರು.
ಸೂರ್ಯಕುಮಾರ್ ಮೈದಾನಕ್ಕಿಳಿದ ತಕ್ಷಣವೇ ಆಕ್ರಮಣಕಾರಿ ಆಟವಾಡಲು ಶುರು ಮಾಡುತ್ತಾರೆ. ಇದರಿಂದ ಇನ್ನೊಬ್ಬ ಬ್ಯಾಟರ್ಗೆ ಒತ್ತಡ ಕಡಿಮೆಯಾಗುತ್ತದೆ. ಇದು ತಂಡಕ್ಕೂ ಲಾಭವಾಗಲಿದೆ. ಒತ್ತಡವನ್ನು ನಿಭಾಯಿಸುವ ಶಕ್ತಿ ಸೂರ್ಯಕುಮಾರ್ಗೆ ಇದೆ. ಆತನ ಸಾಮರ್ಥ್ಯ ತಂಡಕ್ಕೆ ಗೊತ್ತಿದೆ ಎಂದು ರೋಹಿತ್ ಹೇಳಿದರು.