ಡೆಹ್ರಾಡೂನ್(ಉತ್ತರಾಖಂಡ): ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ನಡೆಸಲಾಗುವ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್- 2022 ಎರಡನೇ ಚರಣ ಸೆಪ್ಟೆಂಬರ್ 10 ರಿಂದ ಆರಂಭವಾಗಲಿದೆ. ಇಂಡಿಯಾ ಲೆಜೆಂಡ್ಸ್ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಲೆಜೆಂಡ್ಸ್ ಅನ್ನು ಸೆಪ್ಟೆಂಬರ್ 21 ರನ್ನು ಎದುರಿಸಲಿದೆ.
ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ನ ವೇಳಾಪಟ್ಟಿ:ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 2ನೇ ಅವತರಣಿಕೆಯು 4 ಕ್ರೀಡಾಂಗಣಗಳಲ್ಲಿ ನಡೆಸಲಾಗುತ್ತದೆ. 22 ದಿನಗಳ ಪಂದ್ಯಾವಳಿಯನ್ನು ಕಾನ್ಪುರ, ರಾಯ್ಪುರ, ಇಂದೋರ್, ಡೆಹ್ರಾಡೂನ್‌ನಲ್ಲಿ ಆಯೋಜಿಸಲಾಗಿದೆ. ಸೆಪ್ಟೆಂಬರ್ 10ರಿಂದ ಸೆಪ್ಟೆಂಬರ್ 15 ರವರೆಗೆ ಕಾನ್ಪುರದಲ್ಲಿ ಪಂದ್ಯಗಳು ನಡೆದರೆ, ಇಂದೋರ್‌ನಲ್ಲಿ ಸೆಪ್ಟೆಂಬರ್ 17 ರಿಂದ 19 ರವರೆಗೆ ನಡೆಯಲಿವೆ.
ಸೆಪ್ಟೆಂಬರ್ 21 ರಿಂದ 25 ರವರೆಗೆ 5 ಪಂದ್ಯಗಳು ಡೆಹ್ರಾಡೂನ್‌ನಲ್ಲಿ ಆಯೋಜಿಸಲಾಗಿದೆ. ಇನ್ನು ಸಿರೀಸ್ನ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳು ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆಯಲಿವೆ. ಈ ಬಾರಿಯ ಟೂರ್ನಿಯಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿದ್ದು, ಇದಕ್ಕಾಗಿ ತಂಡಗಳನ್ನು ಪ್ರಕಟಿಸಲಾಗಿದೆ.
ಭಾರತೀಯ ಲೆಜೆಂಡ್ಸ್ ತಂಡ:ಸಚಿನ್ ತೆಂಡೂಲ್ಕರ್ (ನಾಯಕ), ಹರ್ಭಜನ್ ಸಿಂಗ್, ಮುನಾಫ್ ಪಟೇಲ್, ಪ್ರಗ್ಯಾನ್ ಓಜಾ, ಮನ್‌ಪ್ರೀತ್ ಗೋನಿ, ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ರಾಹುಲ್ ಶರ್ಮಾ, ವಿನಯ್ ಕುಮಾರ್, ಎಸ್. ಬದ್ರಿನಾಥ್, ನಮನ್ ಓಜಾ, ಸ್ಟುವರ್ಟ್ ಬಿನ್ನಿ, ಅಭಿಮನ್ಯು ಮಿಥುನ್ ಪವಾರ್.
ನ್ಯೂಜಿಲ್ಯಾಂಡ್ ಲೆಜೆಂಡ್ಸ್:ರಾಸ್ ಟೇಲರ್ (ನಾಯಕ), ಜೇಕಬ್ ಓರಮ್, ಜೇಮಿ ಹೌ, ಜೇಸನ್ ಸ್ಪೈಸ್, ಕೈಲ್ ಮಿಲ್ಸ್, ಸ್ಕಾಟ್ ಸ್ಟೈರಿಸ್, ಶೇನ್ ಬಾಂಡ್, ಡೀನ್ ಬ್ರೌನ್ಲೀ, ಬ್ರೂಸ್ ಮಾರ್ಟಿನ್, ನೀಲ್ ಬ್ರೂಮ್, ಆರನ್ ರೆಡ್ಮಂಡ್, ಆಂಟನ್ ಡೆವ್ಸಿಚ್, ಕ್ರೇಗ್ ಮೆಕ್‌ಮಿಲನ್, ಹ್ಯಾಮ್‌ಮಿಲನ್, ಹ್ಯಾಮ್‌ಮಿಲನ್, ಬೆನೆಟ್.
ಆಸ್ಟ್ರೇಲಿಯಾದ ಲೆಜೆಂಡ್ಸ್:ಶೇನ್ ವ್ಯಾಟ್ಸನ್ (ನಾಯಕ), ಅಲೆಕ್ಸ್ ಡೂಲನ್, ಬೆನ್ ಡಂಕ್, ಬ್ರಾಡ್ ಹಾಡ್ಜ್, ಬ್ರಾಡ್ ಹ್ಯಾಡಿನ್, ಸ್ಟುವರ್ಟ್ ಕ್ಲಾರ್ಕ್, ಬ್ರೆಟ್ ಲೀ, ಬ್ರೈಸ್ ಮೆಕ್‌ಗೇನ್, ಕ್ಯಾಲಮ್ ಫರ್ಗುಸನ್, ಕ್ಯಾಮೆರಾನ್ ವೈಟ್, ಜಾರ್ಜ್ ಹಾರ್ಲಿನ್, ಜೇಸನ್ ಕ್ರೆಜಾ, ಜಾನ್ ಹೇಸ್ಟಿಂಗ್ಸ್, ಡಿರ್ಕ್ ನ್ಯಾನೆಸ್, ನಾಥನ್ ರೀರ್ಡನ್ ಮತ್ತು ಚಾಡ್ ಸೇಯರ್ಸ್.