ನವದೆಹಲಿ: ಭಾರತ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ರಿಷಭ್ ಪಂತ್ ದೇಶ ನಡೆಸುತ್ತಿರುವ ಕೋವಿಡ್ ಹೋರಾಟಕ್ಕೈ ಕೈ ಜೋಡಿಸಿದ್ದಾರೆ.
ಈಗಾಗಲೇ ಸಚಿನ್, ಧವನ್, ವಿರಾಟ್ ಕೊಹ್ಲಿ, ಜಯದೇವ್ ಉನಾದ್ಕಟ್ ಹಾಗೂ ವಿದೇಶಿ ಕ್ರಿಕೆಟಿಗರಾದ ಪ್ಯಾಟ್ ಕಮ್ಮಿನ್ಸ್, ಬ್ರೆಟ್ ಲೀ, ನಿಕೋಲಸ್ ಪೂರನ್ ಭಾರತದ ಕೋವಿಡ್ ಹೋರಾಟಕ್ಕೆ ದೇಣಿಗೆ ನೀಡಿದ್ದಾರೆ.
ಇದೀಗ 23 ವರ್ಷದ ಪಂತ್ ಕೂಡ ಮಾನಿಟರಿ ಡೊನೇಷನ್ ಮೂಲಕ ದೇಶದ ಸೌಲಭ್ಯ ವಂಚಿತ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಿರುವ ಆಕ್ಸಿಜನ್ ಸಿಲಿಂಡರ್ ಸಹಿತ ಬೆಡ್ ಮತ್ತು ಕೋವಿಡ್ ರಿಲೀಫ್ ಕಿಟ್ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಖರೀದಿಸಲು ಹೆಮ್ಕುಂಟ್ ಫೌಂಡೇಶನ್ ಜೊತೆಗೆ ಕೈ ಜೋಡಿಸಿದ್ದಾರೆ.
"ನಾನು ಹೆಮ್ಕುಂಟ್ ಫೌಂಡೇಶನ್‌ನ ವಿತ್ತೀಯ ದೇಣಿಗೆಯ ಮೂಲಕ ಬೆಂಬಲಿಸುತ್ತಿದ್ದೇನೆ. ಈ ಫೌಂಡೇಶನ್ ಆಕ್ಸಿಜನ್ ಸಿಲಿಂಡರ್, ಬೆಡ್‌ಗಳು, ಕೋವಿಡ್-ರಿಲೀಫ್ ಕಿಟ್‌ಗಳು ಮತ್ತು ದೇಶಾದ್ಯಂತದ ಸಾಂಕ್ರಾಮಿಕ ಬಿಕ್ಕಟ್ಟಿನಿಂದ ನೊಂದಿರುವ ಜೀವಗಳಿಗೆ ಸಹಾಯ ಮಾಡುತ್ತದೆ.