ಕರ್ನಾಟಕ

karnataka

ETV Bharat / sports

ಕೋವಿಡ್​ ಲಸಿಕೆಯ ಮೊದಲ ಡೋಸ್​​ ಪಡೆದ​ ರಿಷಭ್ ಪಂತ್ - ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​

ಇಂಗ್ಲೆಂಡ್​ನಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ಹಾಗೂ ಆಂಗ್ಲರ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಗೆ ಟೀಮ್​ ಇಂಡಿಯಾಗೆ ಆಯ್ಕೆಯಾಗಿರುವ ರಿಷಭ್ ಪಂತ್ ವ್ಯಾಕ್ಸಿನ್ ಪಡೆದುಕೊಳ್ಳುತ್ತಿರುವ ಫೋಟೋವನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ರಿಷಭ್ ಪಂತ್ ಕೋವಿಡ್ ಲಸಿಕೆ
ರಿಷಭ್ ಪಂತ್ ಕೋವಿಡ್ ಲಸಿಕೆ

By

Published : May 13, 2021, 4:48 PM IST

ನವದೆಹಲಿ: ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ ಗುರುವಾರ ಕೋವಿಡ್​ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ.

ಇಂಗ್ಲೆಂಡ್​ನಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ಹಾಗೂ ಆಂಗ್ಲರ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಗೆ ಟೀಮ್​ ಇಂಡಿಯಾಗೆ ಆಯ್ಕೆಯಾಗಿರುವ ರಿಷಭ್ ಪಂತ್ ವ್ಯಾಕ್ಸಿನ್ ಪಡೆದುಕೊಳ್ಳುತ್ತಿರುವ ಫೋಟೋವನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಇಂದು ನನ್ನ ಮೊದಲ ಡೋಸ್​ ಪಡೆದುಕೊಂಡಿದ್ದೇನೆ. ನೀವು ಅರ್ಹರಾಗಿದ್ದರೆ ದಯವಿಟ್ಟು ನೀವಾಗಿಯೇ ಮುಂದೆ ಬಂದು ವ್ಯಾಕ್ಸಿನ್ ಪಡೆದುಕೊಳ್ಳಿ. ಎಷ್ಟು ಬೇಗ ನಾವು ಲಸಿಕೆ ಪಡೆದುಕೊಳ್ಳುತ್ತೇವೋ ಅಷ್ಟು ಬೇಗ ನಾವು ವೈರಸ್​ ಮಣಿಸಬಹುದು ಎಂದು ತಮ್ಮ ಟ್ವಿಟರ್​ನಲ್ಲಿ ಲಸಿಕೆ ಪಡೆದುಕೊಳ್ಳುತ್ತಿರುವ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.

ಪಂತ್ ದೀರ್ಘ ಮಾದರಿಯ ಕ್ರಿಕೆಟ್​ನಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಅವರು ಇತ್ತೀಚೆಗೆ ಭಾರತ ಗೆದ್ದ ಪ್ರಮುಖ 2 ಟೆಸ್ಟ್​ ಸರಣಿಗಳ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಟೆಸ್ಟ್​ ಶ್ರೇಯಾಂಕದಲ್ಲೂ ಅಗ್ರ 10ರೊಳಗೆ ಪ್ರವೇಶಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ.

ಇನ್ನು ಪಂತ್​ಗಿಂತ ಮುಂಚೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ವೇಗಿಗಳಾದ ಉಮೇಶ್ ಯಾದವ್, ಇಶಾಂತ್ ಶರ್ಮಾ, ದೀಪಕ್ ಚಹರ್, ಜಸ್ಪ್ರೀತ್ ಬುಮ್ರಾ ಕೂಡ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.

ಇದನ್ನು ಓದಿ:2021ರ ಐಪಿಎಲ್ ಪುನಾರಂಭವಾದರೂ ನಾನು ಆಡುವುದಿಲ್ಲ: ಬೆನ್​ ಸ್ಟೋಕ್ಸ್​

ABOUT THE AUTHOR

...view details