ಹೈದರಾಬಾದ್ :ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಎಬಿ ಡಿ ವಿಲಿಯರ್ಸ್ ಶುಕ್ರವಾರ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. 10 ವರ್ಷಗಳಿಂದ ಫ್ರಾಂಚೈಸಿ ಪರ ಆಡಿದ್ದ ಎಬಿಡಿ ನಿವೃತ್ತಿಗೆ ಗೌರವ ಸಚಿಸಿರುವ ಆರ್ಸಿಬಿ ಸರಣಿ ಟ್ವೀಟ್ಗಳ ಮೂಲಕ ಧನ್ಯವಾದ ಅರ್ಪಿಸಿದೆ.
ಎಬಿ ಡಿ ವಿಲಿಯರ್ಸ್ ಆರ್ಸಿಬಿ ಪರ 156 ಪಂದ್ಯಗಳನ್ನಾಡಿದ್ದು,4,491 ರನ್ಗಳಸಿದ್ದಾರೆ. ಆರ್ಸಿಬಿ ಪರ ವಿರಾಟ್ ಕೊಹ್ಲಿ ನಂತರ ಹೆಚ್ಚು ರನ್ಗಳಿಸಿದ 2ನೇ ಬ್ಯಾಟರ್ ಎನಿಸಿದ್ದಾರೆ.
ನಿವೃತ್ತಿ ಘೋಷಿಸಿದ ಬಳಿಕ ಆರ್ಸಿಬಿ ಬಗ್ಗೆ ಮಾತನಾಡಿದ್ದ ವಿಲಿಯರ್ಸ್, ಸತತ 11 ವರ್ಷಗಳ ಕಾಲ ಆರ್ಸಿಬಿಯಲ್ಲಿ ಆಡಿದ್ದು, ಇದೀಗ ಬಿಟ್ಟು ಹೋಗುವುದು ನಿಜಕ್ಕೂ ತುಂಬಾ ಕಷ್ಟವಾಗುತ್ತಿದೆ. ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸುದೀರ್ಘ ಚಿಂತನೆ ಮಾಡಿದ್ದೇನೆ.
ನನ್ನ ಮುಂದಿನ ಸಮಯವನ್ನು ಕುಟುಂಬದ ಜೊತೆ ಕಳೆಯಲು ಬಯಸಿದ್ದೇನೆ. ಇಷ್ಟು ವರ್ಷಗಳ ಕಾಲ ನನ್ನ ಮೇಲೆ ನಂಬಿಕೆಯಿಟ್ಟು ವಿಶ್ವಾಸ ತೋರಿಸಿದ ಆರ್ಸಿಬಿ ಮ್ಯಾನೇಜ್ಮೆಂಟ್ ಮತ್ತು ನನ್ನ ಗೆಳೆಯ ವಿರಾಟ್ ಕೊಹ್ಲಿ ಮತ್ತು ಸಿಬ್ಬಂದಿ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ವಿಲಿಯರ್ಸ್ ಆರ್ಸಿಬಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವಿಡಿಯೋದಲ್ಲಿ ಭಾವುಕರಾಗಿ ನುಡಿದಿದ್ದರು.
ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡ ಎಬಿಡಿ ಅವರ 11 ವರ್ಷಗಳ ಕೆಲವು ಅವಿಸ್ಮರಣೀಯ ಕ್ಷಣಗಳನ್ನು ಸರಣಿ ಟ್ವೀಟ್ಗಳ ಮೂಲಕ ಹಂಚಕೊಂಡಿದೆ. 2 ನಿಮಿಷ 20 ಸೆಕೆಂಡ್ಗಳ ವಿಡಿಯೋದಲ್ಲಿ ಎಬಿಡಿ ಅವರ ಬ್ಯಾಟಿಂಗ್, ಕೊಹ್ಲಿ ಜೊತೆಗಿನ ಸಂದರ್ಶನ, ಎಬಿಡಿ ಜನ್ಮದಿನ ಆಚರಣೆ ಸೇರಿದಂತೆ ಪ್ರಮುಖ ಕ್ಷಣಗಳು ಸೇರಿವೆ.
ಮತ್ತೊಂದು ಟ್ವೀಟ್ನಲ್ಲಿ " ನಮ್ಮ ಪಾಲಿನ ಆಪದ್ಬಾಂಧವ!, ನಾವು ಯಾವಾಗಲೂ ನಿಮಗೆ ಚಿರಋಣಿ. ಧನ್ಯವಾದಗಳು! ಎಂದು ಬರೆದುಕೊಂಡಿದೆ. ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಎಬಿಡಿ ಅದ್ಭುತವಾದ ಕ್ಷಣಗಳು ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ:'ನಾನು ಅರ್ಧ ಭಾರತೀಯ, ಅದು ನನ್ನ ಹೃದಯದಲ್ಲಿದೆ' ಭಾರತದ ಬಗ್ಗೆ ಎಬಿಡಿ ವಿಶೇಷ ಮಾತು ಕೇಳಿ!