ಡರ್ಹಮ್ (ಇಂಗ್ಲೆಂಡ್): ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೂ ಮುನ್ನ ಕೌಂಟಿ ಸೆಲೆಕ್ಟ್ ಇಲೆವೆನ್ ತಂಡದ ವಿರುದ್ಧ ಅಭ್ಯಾಸ ಪಂದ್ಯ ಆಡಿದ್ದ ಭಾರತ ಇದೀಗ ಪಂದ್ಯವನ್ನ ಡ್ರಾದಲ್ಲಿ ಅಂತ್ಯಗೊಳಿಸಿದೆ. ಆಲ್ರೌಂಡರ್ ರವೀಂದ್ರ ಜಡೇಜಾರ 2ನೇ ಅರ್ಧಶತಕ ಹಾಗೂ ಹನುಮ ವಿಹಾರಿಯ 43 ರನ್ಗಳ ನೆರವಿನಿಂದ ಮೂರು ದಿನಗಳ ಅಭ್ಯಾಸ ಪಂದ್ಯ ಡ್ರಾದಲ್ಲಿ ಸಮಾಪ್ತಿಗೊಂಡಿದೆ.
ಕೊನೆಯ ದಿನದಾಟದಲ್ಲಿ ಕೌಂಟಿ ಇಲೆವೆನ್ ತಂಡ, ಜಯಗೊಳಿಸಲು 284 ರನ್ ಗಳಿಸಬೇಕಿತ್ತು. ಆದರೆ, ಕೇವಲ 15.5 ಓವರ್ನಲ್ಲಿ 31 ರನ್ ಗಳಿಸಿ ಡ್ರಾದಲ್ಲಿ ಕೊನೆಗೊಂಡಿತು. ಇದಕ್ಕೂ ಮೊದಲೇ ಭಾರತ 3 ವಿಕೆಟ್ ಕಳೆದುಕೊಂಡು 192 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
ದ್ವಿತೀಯ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ಗೆ ಇಳಿದ ಚೇತೇಶ್ವರ ಪೂಜಾರಾ ಹಾಗೂ ಮಾಯಾಂಕ್ ಅಗರ್ವಾಲ್ 87 ರನ್ಗಳ ಜೊತೆಯಾಟ ನೀಡಿದ್ದರು. ಪೂಜಾರ 38 ರನ್ ಸಿಡಿಸಿದರೆ ಇತ್ತ ಮಯಾಂಕ್ 47 ರನ್ ಗಳಿಸಿ ವಿಕೆಟ್ ಒಪ್ಪಿಸಿ ಅರ್ಧ ಶತಕದಿಂದ ವಂಚಿತರಾದರು. ಬಳಿಕ ರವೀಂದ್ರ ಜಡೇಜಾ ಹಾಗೂ ಹನುಮ ವಿಹಾರಿ 84 ರನ್ ಜೊತೆಯಾಟ ನೀಡಿ ತಂತದ ಮೊತ್ತ ಹೆಚ್ಚಿಸಿದರು.
ಇದ್ರಲ್ಲಿ ಜಡೇಜಾ 77 ಬಾಲ್ ಎದುರಿಸಿ 51 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಬಳಿಕ ತಂಡ 192 ರನ್ಗಳಿಸಿ 284 ರನ್ಗಳ ಟಾರ್ಗೆಟ್ ನೀಡಿದಾಗ ಡಿಕ್ಲೇರ್ ಮಾಡಲು ನಿರ್ಧರಿಸಿದ್ದರು. ಅಭ್ಯಾಸ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲೂ ಅರ್ಧ ಶತಕ ದಾಖಲಿಸಿದ್ದ ಜಡೇಜಾ 2ನೇ ಇನ್ನಿಂಗ್ಸ್ನಲ್ಲೂ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
ಓದಿ:IND vs SL ODI: ಮೂರನೇ ಪಂದ್ಯದಲ್ಲಿ ಯುವ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ