ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್​​ನಿಂದ ಆರ್​.ಅಶ್ವಿನ್ ಕೈಬಿಟ್ಟಿದ್ದಕ್ಕೆ ಆಕ್ರೋಶ: ​ಯಾರು, ಏನಂದ್ರು? ಇಲ್ಲಿದೆ ನೋಡಿ.. - 4ನೇ ಟೆಸ್ಟ್‌ ಪಂದ್ಯ

ನೀವು ಐದು ಮಂದಿ ಬೆಸ್ಟ್ ಬೌಲರ್​ಗಳನ್ನು ಪಟ್ಟಿ ಮಾಡಿದರೆ ಮೊದಲನೇ ಅಥವಾ ಎರಡನೇ ಸ್ಥಾನದಲ್ಲಿ ಆರ್. ಅಶ್ವಿನ್ ಇರುತ್ತಾರೆ. ಸೋಲುವುದಕ್ಕಾಗಿಯೇ ಅಶ್ವಿನ್ ಮತ್ತು ಮೊಹಮ್ಮದ್ ಶಮಿ ಅವರನ್ನು ಕೈಬಿಡಲಾಗಿದೆ ಎಂದು ಶಶಿ ತರೂರ್ ವ್ಯಂಗ್ಯವಾಡಿದ್ದಾರೆ.

"Madness": Former Cricketers On Ravichandran Ashwin's Non-Inclusion In 4th Test
'ಮ್ಯಾಡ್ನೆಸ್​..' : ಟೆಸ್ಟ್​​ನಿಂದ ಆರ್​.ಅಶ್ಚಿನ್ ಕೈಬಿಟ್ಟಿದ್ದಕ್ಕೆ ​ಯಾರು, ಏನಂದ್ರು ಗೊತ್ತಾ?

By

Published : Sep 2, 2021, 7:30 PM IST

ಕೆನ್ನಿಂಗ್ಟನ್‌ ಓವಲ್(ಇಂಗ್ಲೆಂಡ್)​:ಭಾರತ ಮತ್ತು ಇಂಗ್ಲೆಂಡ್​ ನಡುವಿನ ಟೆಸ್ಟ್ ಸರಣಿ ನಡೆಯುತ್ತಿದೆ. ಟೀಂ ಇಂಡಿಯಾದ ಸ್ಟಾರ್ ಆಟಗಾರ ರವಿಚಂದ್ರನ್ ಅಶ್ವಿನ್​ಗೆ ನಾಲ್ಕನೇ ಟೆಸ್ಟ್ ಪಂದ್ಯದ 11ರ ಬಳಗದಲ್ಲಿ ಅವಕಾಶ ನೀಡದಿರುವುದಕ್ಕೆ ಸಾಕಷ್ಟು ಆಕ್ಷೇಪಗಳು ಕೇಳಿಬರುತ್ತಿವೆ.

ಹೆಡಿಂಗ್ಲೆಯಲ್ಲಿ ನಡೆದ ಮೂರನೇ ಟೆಸ್ಟ್​ ಪಂದ್ಯದಲ್ಲಿ 76 ರನ್​​ಗಳ ಅಂತರದಿಂದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿದ ಮೇಲೆ ಅಶ್ವಿನ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂಬ ಅಭಿಪ್ರಾಯಗಳು ಕ್ರಿಕೆಟ್​ ತಜ್ಞರ ವಲಯದಲ್ಲಿ ವ್ಯಕ್ತವಾಗುತ್ತಿದ್ದವು.

ಆದರೆ, ನಾಲ್ಕನೇ ಟೆಸ್ಟ್​ ಪಂದ್ಯಕ್ಕೂ ಕೂಡಾ ಅಶ್ವಿನ್ ಅವರನ್ನು 11ರ ಬಳಗದಲ್ಲಿ ಪರಿಗಣಿಸದ ಕಾರಣದಿಂದಾಗಿ ಕೆಲವರು ಕ್ರಿಕೆಟಿಗರು, ಶಶಿ ತರೂರ್ ಸೇರಿದಂತೆ ರಾಜಕಾರಣಿಗಳು ಟ್ವಿಟರ್​ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರವಿಚಂದ್ರನ್ ಅಶ್ವಿನ್ ಅವರನ್ನು ಇಂಗ್ಲೆಂಡ್​ನ ಟೆಸ್ಟ್​ ಪಂದ್ಯಗಳಿಗೆ ಆಯ್ಕೆ ಮಾಡದೇ ಇರುವುದು, ಅತಿ ದೊಡ್ಡ ದುರಂತ ಎಂಬ ಅರ್ಥದಲ್ಲಿ ಇಂಗ್ಲೆಂಡ್​ ಕ್ರಿಕೆಟ್​​ನ ಮಾಜಿ ನಾಯಕ ಮಿಚೆಲ್ ವಾನ್ ಟ್ವೀಟ್​ ಮಾಡಿದ್ದು, ಇದೊಂದು ಹುಚ್ಚುತನ ಎಂಬ ಹ್ಯಾಷ್ ಟ್ಯಾಗ್ ಬಳಸಿದ್ದಾರೆ.

ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸ್ಪಿನ್ ಬೌಲರ್​ಗಳ ಸ್ನೇಹಿಯಾದ ಇಂಗ್ಲೆಂಡ್ ಗ್ರೌಂಡ್​​ನಲ್ಲಿ ಅಶ್ವಿನ್ ಅವರನ್ನು ಮತ್ತೆ ತಂಡದಿಂದ ಹೊರಗಿಟ್ಟಿದ್ದಾರೆ ಎಂದು ನಂಬಲಾಗುತ್ತಿಲ್ಲ. ನೀವು ಐದು ಮಂದಿ ಬೆಸ್ಟ್ ಬೌಲರ್​ಗಳನ್ನು ಪಟ್ಟಿ ಮಾಡಿದರೆ ಮೊದಲನೇ ಅಥವಾ ಎರಡನೇ ಸ್ಥಾನದಲ್ಲಿ ಆರ್. ಅಶ್ವಿನ್ ಇರುತ್ತಾರೆ. ಸೋಲುವುದಕ್ಕಾಗಿಯೇ ಅಶ್ವಿನ್ ಮತ್ತು ಮೊಹಮ್ಮದ್ ಶಮಿ ಅವರನ್ನು ಕೈಬಿಡಲಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್​ನ ಲೀಸಾ ಸ್ತಾಲೇಕರ್ ಕೂಡಾ ಟ್ವಿಟರ್​ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಅಶ್ವಿನ್ ಅವರನ್ನು ಟೆಸ್ಟ್​ನಿಂದ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ ಎಂದಿದ್ದಾರೆ.

ಇಂಡಿಯನ್ ಕ್ರಿಕೆಟ್​ ಕಮೆಂಟರ್ ಮತ್ತು ಪತ್ರಿಕೋದ್ಯಮಿ ಹರ್ಷಾ ಬೋಗ್ಲೆ ಟ್ವೀಟ್ ಮಾಡಿದ್ದು, ಈ ನಿರ್ಧಾರ ನನ್ನನ್ನು ಚಕಿತಗೊಳ್ಳುವಂತೆ ಮಾಡಿದೆ ಎಂದಿದ್ದಾರೆ.

11ರ ಬಳಗದಲ್ಲಿ ಅಶ್ವಿನ್ ಇಲ್ಲದೇ ಇರುವುದು ಆಶ್ಚರ್ಯವಾಗಿದೆ. ಟೀಂ ಇಂಡಿಯಾದಲ್ಲಿ ಸ್ಪಿನ್ನರ್‌ಗಳು ಮತ್ತು 3 ಸ್ಪೆಷಲಿಸ್ಟ್‌ಗಳನ್ನು ತ್ವರಿತವಾಗಿ ಆಡಲು ಸಾಕಷ್ಟು ಅವಕಾಶವಿದೆ. ಅಶ್ವಿನ್ ಇಲ್ಲದ ಈ ಆಟವನ್ನು ಜೋ ರೂಟ್ ಬಳಗ ಇಷ್ಟಪಡುತ್ತದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಟ್ವೀಟಿಸಿದ್ದಾರೆ.

ಇದನ್ನೂ ಓದಿ:23 ಸಾವಿರ ರನ್ ಗಳಿಸಿದ ವಿರಾಟ್ ಕೊಹ್ಲಿ.. ಅತಿ ವೇಗದ ರನ್ ಗಳಿಕೆಯಲ್ಲಿ ದಾಖಲೆ

ABOUT THE AUTHOR

...view details