ಮುಂಬೈ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಅವರು ನೀಡಿರುವ ಹೇಳಿಕೆ ನೋಡಿದರೆ 2022ರ ಲೀಗ್ನಲ್ಲಿ ತಮ್ಮ ತವರು ಫ್ರಾಂಚೈಸಿ ಸೇರುವುದು ಖಚಿತವೆನಿಸುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಜೊತೆ ನನಗೆ ಅವಿನಾಭಾವ ಸಂಬಂಧವಿದೆ. ಚೆನ್ನೈ ತಂಡ ನನಗೆ ಮೊದಲ ಶಾಲೆಯಿದ್ದಂತೆ. ನಾನು ಅಲ್ಲಿ ಕ್ರಿಕೆಟ್ ವರ್ಣಮಾಲೆ ಕಲಿತಿದ್ದೇನೆ. ಎಲ್ಕೆಜಿ,ಯುಕೆಜಿಯಿಂದ 10ನೇ ತರಗತಿಯವರೆಗೆ ನಾನು ಇಲ್ಲೇ ಓದಿದ್ದೇನೆ. ನಂತರ ಉನ್ನತ ವ್ಯಾಸಂಗಕ್ಕೆ ಬೇರೆ ಹೊರಗಡೆ ಹೋಗಿದ್ದೆ.
ಓದಿದ್ದೆಲ್ಲಾ ಮುಗಿದ ಮೇಲೆ ಯಾರೇ ಆದರೂ ಮತ್ತೆ ಮನೆಗೆ ಬರಲೇಬೇಕು. ನಾನು ಕೂಡ ನನ್ನ ಸ್ವಂತ ಮನೆಗೆ(ಚೆನ್ನೈ)ಬರಬೇಕೆಂದುಕೊಂಡಿದ್ದೇನೆ. ಆದರೆ, ಇದೆಲ್ಲಾ ಶೀಘ್ರದಲ್ಲಿ ನಡೆಯುವ ಐಪಿಎಲ್ ಹರಾಜಿನ ಮೇಲೆ ಆಧಾರವಾಗಿದೆ. ಅಲ್ಲಿ ಏನಾಗುತ್ತದೆ ಎಂಬುದರ ಪರಿಣಾಮಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.