ಕೋಲ್ಕತ್ತಾ: ಯುವ ಬೌಲರ್ ರವಿ ಬಿಷ್ಣೋಯ್ ಸೇರಿದಂತೆ ಬೌಲರ್ಗಳ ಅದ್ಭುತ ಪ್ರದರ್ಶನದಿಂದ ರೋಹಿತ ಪಡೆ ಬಲಿಷ್ಠ ಬ್ಯಾಟಿಂಗ್ ಬಳಗವನ್ನು ಹೊಂದಿರುವ ವೆಸ್ಟ್ ಇಂಡೀಸ್ ತಂಡವನ್ನು 157 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.
3 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ತಮ್ಮ ಮೊದಲ ಓವರ್ನಲ್ಲೇ ಬ್ರೆಂಡನ್ ಕಿಂಗ್ ವಿಕೆಟ್ ಪಡೆದು ವಿಂಡೀಸ್ಗೆ ಆಘಾತ ನೀಡಿದರು.
ಆದರೆ, 2ನೇ ವಿಕೆಟ್ಗೆ ಒಂದಾದ ಕೈಲ್ ಮೇಯರ್ಸ್ ಮತ್ತು ನಿಕೋಲಸ್ ಪೂರನ್ 30 ಎಸೆತಗಳಲ್ಲಿ 47 ರನ್ಗಳ ಜೊತೆಯಾಟ ನೀಡಿದರು. ಮೇಯರ್ಸ್ 24 ಎಸೆತಗಳಲ್ಲಿ 31 ರನ್ಗಳಿಸಿದ್ದ ವೇಳೆ ಯುಜ್ವೇಂದ್ರ ಚಹಲ್ಗೆ ವಿಕೆಟ್ ಒಪ್ಪಿಸಿದರು.
ಇನ್ನು ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ರವಿ ಬಿಷ್ಣೋಯ್ ಒದೇ ಓವರ್ನಲ್ಲಿ ರಾಸ್ಟನ್ ಚೇಸ್(4) ಮತ್ತು ರೊವ್ಮನ್ ಪೊವೆಲ್(2) ವಿಕೆಟ್ ಪಡೆದ ವಿಂಡೀಸ್ ತಂಡಕ್ಕೆ ಮರ್ಮಾಘಾತ ನೀಡಿದರು. ನಂತರ ಬಡ್ತಿ ಪಡೆದು ಬಂದ ಅಕೀಲ್ ಹೊಸೈನ್ 10 ರನ್ಗಳಿಸಿ ದೀಪಕ್ ಚಹಾರ್ಗೆ ವಿಕೆಟ್ ಒಪ್ಪಿಸಿದರು.
90ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸುತ್ತಿದ್ದ ವಿಂಡೀಸ್ಗೆ ನಾಯಕ ಪೊಲಾರ್ಡ್ ಮತ್ತು ಉಪನಾಯಕ ಪೂರನ್ 6ನೇ ವಿಕೆಟ್ಗೆ 45 ರನ್ ಸೇರಿಸಿ ಚೇತರಿಕೆ ನೀಡಿದರು. ಪೂರನ್ 43 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 61 ರನ್ಗಳಿಸಿದರೆ, ಪೊಲಾರ್ಡ್ 19 ಎಸತಗಳಲ್ಲಿ ಅಜೇಯ 24 ರನ್ಗಳಿಸಿ 158 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಭಾರತದ ಪರ ಪದಾರ್ಪಣೆ ಬೌಲರ್ ರವಿ ಬಿಷ್ಣೋಯ್ 4 ಓವರ್ಗಳಲ್ಲಿ 17 ರನ್ ನೀಡಿ 2 ವಿಕೆಟ್ ಪಡೆದೆ, ಹರ್ಷಲ್ ಪಟೇಲ್ 37ಕ್ಕೆ 2 ವಿಕೆಟ್ ಪಡೆದರು, ಉಳಿದಂತೆ ಭುವನೇಶ್ವರ್ 31ಕ್ಕೆ1, ದೀಪಕ್ ಚಾಹರ್ 28ಕ್ಕೆ1, ಚಹಲ್ 34ಕ್ಕೆ 1 ವಿಕೆಟ್ ಪಡೆದರು.
ಇದನ್ನೂ ಓದಿ:IPL 2022: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ಶ್ರೇಯಸ್ ಅಯ್ಯರ್ ನೇಮಕ