ಕರ್ನಾಟಕ

karnataka

ETV Bharat / sports

'ನನಗೂ ಕ್ರಿಕೆಟ್‌ಗೂ ಯಾವುದೇ ಸಂಬಂಧವಿಲ್ಲ': ರತನ್​ ಟಾಟಾ ಹೀಗೆ ಹೇಳಲು ಕಾರಣವೇನು? - ETV Bharath Karnataka

ದೇಶದ ಪ್ರಸಿದ್ಧ ಉದ್ಯಮಿ ರತನ್ ವೈರಲ್​ ಕುರಿತಾದ ಸುದ್ದಿಯೊಂದು ಇತ್ತೀಚೆಗೆ ವೈರಲ್ ಆಗಿತ್ತು.

Ratan Tata
Ratan Tata

By ANI

Published : Oct 30, 2023, 8:08 PM IST

ಹೈದರಾಬಾದ್​:ಇತ್ತೀಚೆಗೆ ಉದ್ಯಮಿ ರತನ್ ಟಾಟಾ ಅವರು ಅಫ್ಘಾನಿಸ್ತಾನ ಕ್ರಿಕೆಟ್‌ ತಂಡದ ಪ್ರಮುಖ ಆಟಗಾರ ರಶೀದ್ ಖಾನ್‌ ಅವರಿಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿತ್ತು. ಈ ವಿಚಾರವನ್ನು ರತನ್ ಟಾಟಾ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. "ನಾನು ಯಾವುದೇ ಕ್ರಿಕೆಟಿಗನ ಪರವಾಗಿ ಮಾತನಾಡಿಲ್ಲ. ಅಂತಹ ಫಾರ್ವರ್ಡ್ ಸಂದೇಶಗಳನ್ನು ನಂಬಬೇಡಿ" ಎಂದು ಮನವಿ ಮಾಡಿದ್ದಾರೆ.

ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇತ್ತೀಚೆಗೆ ಅಫ್ಘಾನಿಸ್ತಾನವು ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದೆ. ಸತತ 7 ಏಕದಿನ ಪಂದ್ಯಗಳ ಸೋಲಿನ ನಂತರ ಅಫ್ಘಾನಿಸ್ತಾನ 8ನೇ ಮುಖಾಮುಖಿಯಲ್ಲಿ ರೋಚಕ ಜಯ ಸಾಧಿಸಿತ್ತು. ಈ ಜಯದ ನಂತರ ಅಫ್ಘಾನಿಸ್ತಾನದ ಸಂಭ್ರಮಾಚರಣೆಯಲ್ಲಿ ಕ್ರಿಕೆಟಿಗ ರಶೀದ್ ಖಾನ್ ಭಾರತದ ಧ್ವಜ ಹಿಡಿದಿದ್ದರು ಎನ್ನಲಾದ ಚಿತ್ರಗಳು ಕೆಲವು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಐಸಿಸಿ ರಶೀದ್ ಖಾನ್‌ಗೆ 55 ಲಕ್ಷ ರೂಪಾಯಿ ದಂಡ ವಿಧಿಸಿದೆ ಎಂದು ಹೇಳಲಾಗಿತ್ತು. ಈ ವಿಷಯ ತಿಳಿದ ರತನ್ ಟಾಟಾ, ರಶೀದ್ ಖಾನ್​ಗೆ 10 ಕೋಟಿ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ ಎಂಬ ಸುದ್ದಿಯೂ ವೈರಲ್ ಆಗಿದೆ.

ಈ ಸಂಗತಿ ಹರಿದಾಡುತ್ತಿದ್ದಂತೆ ರತನ್ ಟಾಟಾ ಪ್ರತಿಕ್ರಿಯಿಸಿದ್ದಾರೆ. 'ಯಾವುದೇ ಆಟಗಾರನ ದಂಡದ ಬಗ್ಗೆ ನಾನು ಐಸಿಸಿ ಅಥವಾ ಇತರ ಯಾವುದೇ ಕ್ರಿಕೆಟ್ ಸಂಸ್ಥೆಗೆ ಯಾವುದೇ ಸಲಹೆ ನೀಡಿಲ್ಲ. ಯಾವುದೇ ಆಟಗಾರನಿಗೆ ಯಾವುದೇ ಬಹುಮಾನವನ್ನೂ ಘೋಷಿಸಿಲ್ಲ. ನನಗೂ ಕ್ರಿಕೆಟ್‌ಗೂ ಯಾವುದೇ ಸಂಬಂಧವಿಲ್ಲ. ವಾಟ್ಸ್‌ಆ್ಯಪ್ ಫಾರ್ವರ್ಡ್ ಸಂದೇಶಗಳು ಮತ್ತು ಸುಳ್ಳು ವಿಡಿಯೋಗಳನ್ನು ಅಧಿಕೃತ ಮಾಹಿತಿ ಇಲ್ಲದೇ ಹಂಚಿಕೊಳ್ಳಬೇಡಿ' ಎಂದು ತಮ್ಮ ಎಕ್ಸ್​​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ಅಕ್ಟೋಬರ್​ 23ರಂದು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿ ಆಗಿದ್ದವು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನದ ಅಬ್ದುಲ್ಲಾ ಶಫೀಕ್​, ಬಾಬರ್​ ಅಜಮ್​ ಅವರ ಅರ್ಧಶತಕ ಮತ್ತು ಶಾಬಾದ್​ ಖಾನ್​, ಇಫ್ತಿಕರ್​ ಅಹಮದ್​ ಅವರ 40 ರನ್‌ಗಳ ಇನ್ನಿಂಗ್ಸ್​ ನೆರವಿನಿಂದ 7 ವಿಕೆಟ್​ ಕಳೆದುಕೊಂಡು 282 ರನ್​ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ​ ತಂಡದ ರಮಾನುಲ್ಲಾ ಗುರ್ಬಾಜ್​ (65), ಇಬ್ರಾಹಿಂ ಜದ್ರಾನ್​ (87), ರಹಮತ್​ ಶಾ (77) ಮತ್ತು ಹಶ್ಮತುಲ್ಲಾ ಶಾಹಿದಿ (48) ಇನ್ನಿಂಗ್ಸ್​ನ ನೆರವಿನಿಂದ 1 ಓವರ್​ ಉಳಿಸಿಕೊಂಡು 8 ವಿಕೆಟ್​ಗಳ ಜಯ ದಾಖಲಿಸಿತು.

ಇದನ್ನೂ ಓದಿ:ವಿಶ್ವಕಪ್​ ಕ್ರಿಕೆಟ್​: ಅಲುಗಾಡುತ್ತಿದೆ ಅಯ್ಯರ್​ ಸ್ಥಾನ.. ಹಾರ್ದಿಕ್​ ಮರಳಿದರೆ ಶ್ರೇಯಸ್​ಗೆ ಕೊಕ್​?

ABOUT THE AUTHOR

...view details