ಕರ್ನಾಟಕ

karnataka

ETV Bharat / sports

ಅಫ್ಘಾನಿಸ್ತಾನ ಕ್ರಿಕೆಟ್​ ತಂಡಕ್ಕೆ ದೊಡ್ಡ ಹೊಡೆತ: ಭಾರತದ ವಿರುದ್ಧದ ಟಿ-20 ಸರಣಿಯಿಂದ ಹೊರಗುಳಿದ ರಶೀದ್ ಖಾನ್

ಗುರುವಾರದಿಂದ ಆರಂಭವಾಗಲಿರುವ ಭಾರತ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಿಂದ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಹೊರಗುಳಿದಿದ್ದಾರೆ. ರಶೀದ್ ಖಾನ್ ಅವರನ್ನು ತಂಡದಿಂದ ಹೊರಗಿಟ್ಟಿರುವ ಸುದ್ದಿಯನ್ನು ತಂಡದ ನಾಯಕ ಇಬ್ರಾಹಿಂ ಜದ್ರಾನ್ ಅವರೇ ಖಚಿತಪಡಿಸಿದ್ದಾರೆ.

Afghanistan Cricket Team  Rashid Khan  India Cricket Team  ಅಫ್ಘಾನಿಸ್ತಾನ ತಂಡ  ರಶೀದ್ ಖಾನ್  ಮೂರು ಪಂದ್ಯಗಳ ಟಿ 20 ಸರಣಿ
ಅಫ್ಘಾನಿಸ್ತಾನ ಕ್ರಿಕೆಟ್​ ತಂಡಕ್ಕೆ ದೊಡ್ಡ ಹೊಡೆತ: ಭಾರತ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದ ರಶೀದ್ ಖಾನ್

By ETV Bharat Karnataka Team

Published : Jan 10, 2024, 6:28 PM IST

ನವದೆಹಲಿ:ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಜನವರಿ 11 ರಿಂದ 3 ಟಿ-20 ಪಂದ್ಯಗಳ ಸರಣಿ ನಡೆಯಲಿದೆ. ಇದಕ್ಕೂ ಮುನ್ನ ಅಫ್ಘಾನಿಸ್ತಾನ ಕ್ರಿಕೆಟ್​ ತಂಡವು ಹಿನ್ನಡೆ ಅನುಭವಿಸಿದೆ. ತಂಡದ ಅನುಭವಿ ಹಾಗೂ ಅಪಾಯಕಾರಿ ಲೆಗ್​ ಸ್ಪಿನ್ ಬೌಲರ್ ರಶೀದ್ ಖಾನ್ ಭಾರತ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಿಂದ ಹೊರಗುಳಿದಿದ್ದಾರೆ. ಈ ವಿಷಯವನ್ನು ಸ್ವತಃ ತಂಡದ ನಾಯಕ ಇಬ್ರಾಹಿಂ ಜದ್ರಾನ್ ಖಚಿತಪಡಿಸಿದ್ದಾರೆ.

ಟಿ-20 ಸರಣಿಯಿಂದ ರಶೀದ್ ಖಾನ್ ಔಟ್: ಐಸಿಸಿ ವಿಶ್ವಕಪ್ 2023ರ ನಂತರ, ರಶೀದ್ ಖಾನ್ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದರಿಂದ ಅವರು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇತ್ತೀಚಿನವರೆಗೂ ರಶೀದ್​ ಖಾನ್ ಹೆಸರು ತಂಡದಲ್ಲಿ ಸೇರಿತ್ತು. ಆದರೆ, ಅವರು ಫಿಟ್​ ಇಲ್ಲದ ಕಾರಣಕ್ಕೆ ಮಂಡಳಿಯು ಅವರ ಹೆಸರನ್ನು ಸಸ್ಪೆನ್ಸ್ ಆಗಿ ಇರಿಸಿತ್ತು. ಇದೀಗ ಭಾರತ ವಿರುದ್ಧದ ಸರಣಿಯಿಂದ ರಶೀದ್​ ಖಾನ್ ಸಂಪೂರ್ಣ ಹೊರಗುಳಿದಿದ್ದಾರೆ.

ರಶೀದ್ ಖಾನ್​ ಬಗ್ಗೆ ನಾಯಕ ಝದ್ರಾನ್ ಹೇಳಿದ್ದು ಹೀಗೆ: ಅಫ್ಘಾನಿಸ್ತಾನದ ನಾಯಕ ಇಬ್ರಾಹಿಂ ಜದ್ರಾನ್ ಮಾಧ್ಯಮಗಳೊಂದಿಗೆ ಮಾತನಾಡಿ, ''ರಶೀದ್ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ರಶೀದ್ ಅವರಿಗೆ ವೈದ್ಯರು ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಆದಷ್ಟು ಬೇಗ ಫಿಟ್ ಆಗುತ್ತಾರೆ. ಅವರು ತಂಡಕ್ಕೆ ಹಿಂದಿರುಗುವ ನಿರೀಕ್ಷೆಯಲ್ಲಿದ್ದೇವೆ ಮತ್ತು ಈ ಸರಣಿಯಲ್ಲಿ ರಶೀದ್​ ಖಾನ್ ಅನುಪಸ್ಥಿತಿ ಕಾಡುತ್ತಿದೆ. ರಶೀದ್ (ಖಾನ್) ಅಲ್ಲದೇ, ತಂಡದಲ್ಲಿ ಕೆಲವು ಉತ್ತಮ ಆಟಗಾರರಿದ್ದಾರೆ'' ಎಂದು ಅವರು ತಿಳಿಸಿದ್ದಾರೆ.

"ನಮ್ಮಲ್ಲಿ ಸಾಕಷ್ಟು ಕ್ರಿಕೆಟ್ ಆಡಿರುವ ಮುಜೀಬ್ ಅವರಂತಹ ಅನೇಕ ಆಟಗಾರರಿದ್ದಾರೆ. ನಮಗೆ ಅವರ ಮೇಲೆ ವಿಶ್ವಾಸವಿದೆ. ರಶೀದ್ ಇಲ್ಲದೇ ನಾವು ಹೋರಾಟ ಮಾಡುತ್ತೇವೆ. ಆದರೆ, ಯಾವುದೇ ರೀತಿಯ ಪರಿಸ್ಥಿತಿಗೆ ಸಿದ್ಧರಾಗಿರಬೇಕು" ಎಂದ ಅವರು, ಕಳೆದ ವರ್ಷ ಆಡಿದ ICC ODI ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡವು ಅದ್ಭುತ ಪ್ರದರ್ಶನ ನೀಡಿತ್ತು. ಒಂದು ಹಂತದಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ರೇಸ್‌ನಲ್ಲಿತ್ತು. ಲೀಗ್ ಹಂತದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ನಮ್ಮ ಅಫ್ಘಾನಿಸ್ತಾನ ತಂಡ ಗೆಲುವು ದಾಖಲಿಸಿತ್ತು. ಇದರಿಂದ ದೇಶದ ಜನರ ನಿರೀಕ್ಷೆಗಳು ಹೆಚ್ಚುತ್ತಿವೆ ಎಂದು ತಿಳಿಸಿದರು.

ಝದ್ರಾನ್ ಬ್ಯಾಟಿಂಗ್ ಘಟಕದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ. ಟಿ-20ಐನಲ್ಲಿ ಅವರು 27 ಪಂದ್ಯಗಳಿಂದ 103.18 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅಫ್ಘಾನ್ ನಾಯಕ ಅವರು, ಟಿ-20 ಪಂದ್ಯಗಳ ಸರಣಿಯಲ್ಲಿ ತಮ್ಮ ಸ್ಟ್ರೈಕ್ ರೇಟ್ ಅನ್ನು ಸುಧಾರಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಅಫ್ಘಾನಿಸ್ತಾನ ತಂಡದ ಆಟಗಾರರ ಮಾಹಿತಿ:ಇಬ್ರಾಹಿಂ ಝದ್ರಾನ್ (ನಾಯಕ), ರೆಹಮಾನುಲ್ಲಾ ಗುರ್ಬಾಜ್ (WK), ಇಕ್ರಮ್ ಅಲಿಖಿಲ್ (WK), ಹಜರತುಲ್ಲಾ ಝಜೈ, ರಹಮತ್ ಶಾ, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಂ ಜನತ್, ಅಜ್ಮತುಲ್ಲಾ ಉಮರ್ಜಾಯ್, ಶರಫುದ್ದೀನ್ ಅಶ್ರಫ್, ಮುಜೀಬ್ ಉರ್ ರೆಹಮಾನ್, ಫಮೆದಝ್ ಹಕ್ಮಾನ್, ಫಮೆದಝ್ ಹಕ್ಮಾನ್, ನವೀನ್ ಉಲ್ ಹಕ್, ನೂರ್ ಅಹಮದ್, ಮೊಹಮ್ಮದ್ ಸಲೀಂ, ಖೈಸ್ ಅಹಮದ್, ಗುಲ್ಬದಿನ್ ನೈಬ್ ಅವರು ತಂಡದಲ್ಲಿ ಆಡಲಿದ್ದಾರೆ.

ಇದನ್ನೂ ಓದಿ:ಅಗ್ನಿಪರೀಕ್ಷೆ ಗೆಲ್ತಾರಾ ವಿರಾಟ್ ಕೊಹ್ಲಿ​, ರೋಹಿತ್​ ಶರ್ಮಾ?: ಸಾಮರ್ಥ್ಯ ಸಾಬೀತಿಗೆ ಆಫ್ಘನ್​ ಸರಣಿ ವೇದಿಕೆ

ABOUT THE AUTHOR

...view details