ಅಬುಧಾಬಿ: ಟಿ20 ವಿಶ್ವಕಪ್ನ ಸೂಪರ್ 12ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಟಿ20 ಕ್ರಿಕೆಟ್ನಲ್ಲಿ 400 ವಿಕೆಟ್ ಪೂರ್ಣಗೊಳಿಸಿದ್ದಾರೆ.
23 ವರ್ಷದ ಸ್ಪಿನ್ನರ್ ಮಾರ್ಟಿನ್ ಗಪ್ಟಿಲ್ ವಿಕೆಟ್ ಪಡೆಯುವ ಮೂಲಕ ಚುಟುಕು ಕ್ರಿಕೆಟ್ನಲ್ಲಿ 289 ಪಂದ್ಯಗಳಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ವೆಸ್ಟ್ ಇಂಡೀಸ್ನ ಡ್ವೇನ್ ಬ್ರಾವೋ ಈ ಮೈಲುಗಲ್ಲು ಸ್ಥಾಪಿಸಲು 364 ಪಂದ್ಯಗಳನ್ನು ತೆಗೆದುಕೊಂಡಿದ್ದರು. ಆದರೂ ಬ್ರಾವೋ ಟಿ20 ಪಂದ್ಯಗಳಲ್ಲಿ 500 ವಿಕೆಟ್ ಪಡೆದಿರುವ ವಿಶ್ವದ ಏಕೈಕ ಬೌಲರ್ ಆಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಶನಿವಾರ ನಿವೃತ್ತಿ ಘೋಷಿಸಿದ ಬ್ರಾವೋ 512 ಪಂದ್ಯಗಳಿಂದ 553 ವಿಕೆಟ್ ಪಡೆದಿದ್ದಾರೆ.