ರಾಜ್ಕೋಟ್:ರಣಜಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಗುಜರಾತ್ನ ರಾಜ್ಕೋಟ್ ಕ್ರಿಕೆಟಿಗ ಸಮರ್ಥ್ ವ್ಯಾಸ್ ನಿನ್ನೆ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಬಿಕರಿಯಾಗಿದ್ದಾರೆ. 20 ಲಕ್ಷ ರೂಪಾಯಿ ನೀಡಿ ವ್ಯಾಸ್ರನ್ನು ಸನ್ರೈಸರ್ಸ್ ಹೈದರಾಬಾದ್ ತಂಡ ಖರೀದಿ ಮಾಡಿದೆ. ಸಮರ್ಥ್ ಅನ್ಕ್ಯಾಪ್ಡ್ ಪ್ಲೇಯರ್ ಆಗಿದ್ದರೂ ಲಕ್ಷಗಳಿಗೆ ಮಾರಾಟವಾಗಿದ್ದಾರೆ.
ಹರಾಜಿನಲ್ಲಿ ಬಿಕರಿಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಸಮರ್ಥ್, ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಧನ್ಯವಾದ ಹೇಳಿದ್ದಾರೆ. ಕನಸು ನನಸಾಯಿತು. ಐಪಿಎಲ್ನಂತಹ ದೊಡ್ಡ ವೇದಿಕೆಯಲ್ಲಿ ಆಡುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಅಲ್ಲದೇ ನನ್ನ ಕನಸು ಕೂಡ ಆಗಿತ್ತು. ಉತ್ತಮ ಪ್ರದರ್ಶನ ನೀಡಿ ಭವಿಷ್ಯದಲ್ಲಿ ಉತ್ತಮ ಕ್ರಿಕೆಟರ್ ಆಗಿ ಮುಂದುವರಿಯುತ್ತೇನೆ ಎಂದು ಹೇಳಿದರು.