ಅಬುಧಾಬಿ: ಪ್ಲೇ ಆಪ್ ಪ್ರವೇಶಿಸುವ ಕೊನೆಯ ಅವಕಾಶವಾಗಿರುವ ಸಿಎಸ್ಕೆ ವಿರುದ್ಧ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸಾಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಪ್ರಮುಖ ಬದಲಾವಣೆ ಮಾಡಿಕೊಂಡಿದೆ. ಕ್ರಿಸ್ ಮೋರಿಸ್, ಮಹಿಪಾಲ್ ಲಾಮ್ರೋರ್ ರಿಯಾನ್ ಪರಾಗ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ಬದಲಿಗೆ, ಡೇವಿಡ್ ಮಿಲ್ಲರ್, ಗ್ಲೇನ್ ಫಿಲಿಫ್ಸ್, ಅಕಾಶ್ ಸಿಂಗ್ ಮತ್ತು ಶಿವಂ ದುಬೆಗೆ ಅವಕಾಶ ನೀಡಿದೆ.
ಇತ್ತ ಸಿಎಸ್ಕೆ ಡ್ವೇನ್ ಬ್ರಾವೋ ಬದಲಿಗೆ ಸ್ಯಾಮ್ ಕರ್ರನ್ ಮತ್ತು ದೀಪಕ್ ಚಹರ್ ಬದಲಿಗೆ ಕೆಎಂ ಆಸಿಫ್ಗೆ ಅವಕಾಶ ನೀಡಿದೆ.
ಮೂರು ಬಾರಿ ಐಪಿಎಲ್ ಚಾಂಪಿಯನ್ ಸಿಎಸ್ಕೆ ಆಡಿರುವ 11 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್ ಪ್ರವೇಶಿಸಿದೆ. ನಂತರದ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(16) ಇದೆ. ಒಂದು ವೇಳೆ ಈ ಪಂದ್ಯವನ್ನು ಗೆದ್ದರೆ ಚೆನ್ನೈ ತಂಡ ಅಗ್ರ ಎರಡು ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.
ಆದರೆ ರಾಜಸ್ಥಾನ್ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಅವರು 11 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಮತ್ತು 7ರಲ್ಲಿ ಸೋಲು ಕಂಡಿದ್ದು ಕೊನೆಯಿಂದ 2ನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದರೆ 10 ಅಂಕವನ್ನು ಗಳಿಸಿಕೊಳ್ಳಲಿದ್ದು, ಕೆಕೆಆರ್ ಮತ್ತು ಪಂಜಾಬ್ ತಂಡದೊಂದಿಗೆ ಪೈಪೋಟಿಗೆ ಬರಲಿದೆ. ಒಂದು ವೇಳೆ ಈ ಪಂದ್ಯವನ್ನು ರಾಜಸ್ಥಾನ್ ಗೆದ್ದರೆ 2021ರ ಲೀಗ್ ಕೊನೆಯ ಪಂದ್ಯದವರೆಗೂ ರೋಚಕವಾಗಿರಲಿದೆ.
ಚೆನ್ನೈ ಸೂಪರ್ ಕಿಂಗ್ಸ್ : ರುತುರಾಜ್ ಗಾಯಕವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ/ವಿಕೀ), ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ಶಾರ್ದೂಲ್ ಠಾಕೂರ್, ಕೆಎಂ ಆಸಿಫ್, ಜೋಶ್ ಹೆಜಲ್‌ವುಡ್
ರಾಜಸ್ಥಾನ ರಾಯಲ್ಸ್ : ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ/ವಿ.ಕೀ), ಶಿವಂ ದುಬೆ, ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಆಕಾಶ್ ಸಿಂಗ್, ಮಯಾಂಕ್ ಮಾರ್ಕಂಡೆ, ಚೇತನ್ ಸಕಾರಿಯಾ, ಮುಸ್ತಫಿಜುರ್ ರೆಹಮಾನ್