ಕರ್ನಾಟಕ

karnataka

ETV Bharat / sports

ಲಂಕಾ ಪ್ರವಾಸಕ್ಕೆ ರಾಹುಲ್ ದ್ರಾವಿಡ್ ಹೆಡ್​ ಕೋಚ್: ದಾದಾ ಅಧಿಕೃತ ಘೋಷಣೆ

ಶ್ರೀಲಂಕಾ ಪ್ರವಾಸಕ್ಕೆ ವೇಳಾಪಟ್ಟಿ ಘೋಷಣೆಯಾಗುತ್ತಿದ್ದಂತೆ ಎನ್​ಸಿಎ ಮುಖ್ಯಸ್ಥರಾಗಿರುವ ದ್ರಾವಿಡ್​ ಭಾರತ ತಂಡದೊಂದಿಗೆ ಲಂಕಾ ಪ್ರವಾಸಕ್ಕೆ ತೆರಳಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಇದರ ಬಗ್ಗೆ ಆದಿಕೃತ ಘೋಷಣೆಯಾಗಿರಲಿಲ್ಲ. ಇದೀಗ ದಾದಾ ಈ ಎಲ್ಲ ಅಂತೆ ಕಂತೆಗಳಿಗೆ ತೆರೆ ಎಳೆದಿದ್ದಾರೆ.

ರಾಹುಲ್ ದ್ರಾವಿಡ್​ ಸೌರವ್ ಗಂಗೂಲಿ
ರಾಹುಲ್ ದ್ರಾವಿಡ್​ ಸೌರವ್ ಗಂಗೂಲಿ

By

Published : Jun 15, 2021, 5:34 PM IST

ಮುಂಬೈ: ಮುಂಬರುವ ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಘೋಷಿಸಿರುವ ಭಾರತ ತಂಡಕ್ಕೆ ಕನ್ನಡಿಗ ರಾಹುಲ್ ದ್ರಾವಿಡ್​ ಮುಖ್ಯ ಕೋಚ್ ಆಗಿ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಹಾಗೂ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅಧಿಕೃತವಾಗಿ ಘೋಷಿಸಿದ್ದಾರೆ.

ಪ್ರಸ್ತುತ ಭಾರತ ಟಾಪ್ ಆಟಗಾರರ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದೆ. ಇದೇ ತಂಡದ ಜೊತೆಯಲ್ಲಿ ಹಾಲಿ ಮುಖ್ಯ ಕೋಚ್ ರವಿ ಶಾಸ್ತ್ರಿ ಕೂಡ ತಂಡದ ಜೊತೆಯಲ್ಲಿದ್ದಾರೆ. ಹಾಗಾಗಿ ಶ್ರೀಲಂಕಾ ಪ್ರವಾಸಕ್ಕೆ ತೆರಳಲಿರುವ ಯುವ ತಂಡಕ್ಕೆ ದ್ರಾವಿಡ್​ ಮಾರ್ಗದರ್ಶಕರಾಗಲಿದ್ದಾರೆ.

ಶ್ರೀಲಂಕಾ ಪ್ರವಾಸಕ್ಕೆ ವೇಳಾಪಟ್ಟಿ ಘೋಷಣೆಯಾಗುತ್ತಿದ್ದಂತೆ ಎನ್​ಸಿಎ ಮುಖ್ಯಸ್ಥರಾಗಿರುವ ದ್ರಾವಿಡ್​ ಭಾರತ ತಂಡದೊಂದಿಗೆ ಲಂಕಾ ಪ್ರವಾಸಕ್ಕೆ ತೆರಳಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಇದರ ಬಗ್ಗೆ ಆದಿಕೃತ ಘೋಷಣೆಯಾಗಿರಲಿಲ್ಲ.

ಇದೀಗ ಬಿಸಿಸಿಐ ಬಾಸ್​ ಊಹಾಪೋಹಗಳಿಗೆ ಪೂರ್ಣ ವಿರಾಮ ಹಾಕಿದ್ದು, ದ್ರಾವಿಡ್ ಕೋಚ್​ ಎಂದು ಖಚಿತಪಡಿಸಿದ್ದಾರೆ. ರಾಹುಲ್ ದ್ರಾವಿಡ್​ ಶ್ರೀಲಂಕಾ ಪ್ರವಾಸ ಕೈಗೊಳ್ಳುವ ಭಾರತ ತಂಡಕ್ಕೆ ಮುಖ್ಯ ಕೋಚ್​ ಎಂದು ದಾದಾ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಭಾರತ ತಂಡದ ಬೆಂಚ್​ ಬಲ ಹೆಚ್ಚಿಸಲು ಪ್ರಮುಖ ಕಾರಣವಾಗಿರುವ ದ್ರಾವಿಡ್​ ಈ ಹಿಂದೆ ಅಂಡರ್ 19 ಮತ್ತು ಇಂಡಿಯಾ ಎ ತಂಡಗಳಿಗೆ ಕೋಚ್​ ಆಗಿ ಕಾರ್ಯ ನಿರ್ವಹಿಸಿದ್ದರು. ಹನುಮ ವಿಹಾರಿ, ರಿಷಭ್ ಪಂತ್, ಶುಬ್ಮನ್ ಗಿಲ್, ಪೃಥ್ವಿ ಶಾ, ಸಿರಾಜ್, ರಾಹುಲ್ , ಮಯಾಂಕ್ ಅಗರ್​ವಾಲ್ ಸೇರಿದಂತೆ ಟಾಪ್ ಆಟಗಾರರಿಗೆ ದ್ರಾವಿಡ್​ ಗುರುಗಳಾಗಿದ್ದಾರೆ.

ಜುಲೈ 13, 16 ಹಾಗೂ 18ರಂದು ಏಕದಿನ ಪಂದ್ಯಗಳು ಹಾಗೂ ಜುಲೈ 21, 23 ಹಾಗೂ 25ರಂದು ಟಿ-20 ಪಂದ್ಯಗಳು ನಡೆಯಲಿದೆ. ಕೊರೊನಾ ಕಾರಣದಿಂದ ಶ್ರೀಲಂಕಾದ ಪ್ರೇಮದಾಸ​ ಕ್ರೀಡಾಂಗಣದಲ್ಲಿಯೇ ಎಲ್ಲ ಪಂದ್ಯಗಳಿವೆ.

ತಂಡ ಇಂತಿದೆ:

ಶಿಖರ್ ಧವನ್ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಪೃಥ್ವಿ ಶಾ, ದೇವದತ್ತ್​​ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್​, ಸೂರ್ಯಕುಮಾರ್ ಯಾದವ್, ಮನೀಶ್​ ಪಾಂಡೆ, ಹಾರ್ದಿಕ್​ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಯಜುವೇಂದ್ರ ಚಹಲ್, ರಾಹುಲ್​ ಚಹರ್, ಕೃಷ್ಣಪ್ಪ ಗೌತಮ್, ಕೃನಾಲ್​ ಪಾಂಡ್ಯ, ಕುಲದೀಪ್ ಯಾದವ್, ವರುಣ್​​ ಚಕ್ರವರ್ತಿ, ದೀಪಕ್​​ ಚಹರ್, ನವದೀಪ್​ ಸೈನಿ, ಚೇತನ್​​ ಸಕಾರಿಯಾ

ಇದನ್ನು ಓದಿ: ಪೂಜಾರರ ಅರ್ಧದಷ್ಟು ಸಾಧನೆ ಮಾಡದವರೂ ಆತನ ಬ್ಯಾಟಿಂಗ್ ಟೀಕಿಸುತ್ತಿದ್ದಾರೆ : ಸಚಿನ್ ಕಿಡಿ

ABOUT THE AUTHOR

...view details