ನವದೆಹಲಿ: ಟೆಸ್ಟ್ ಕ್ರಿಕೆಟ್ನಲ್ಲಿ ಸುದೀರ್ಘವಾಗಿ ಚರ್ಚಿತವಾಗುತ್ತಿರುವ ಸ್ಟ್ರೈಕ್ ರೇಟ್ ಸಂಪೂರ್ಣ ಅಸಂಬದ್ಧವಾಗಿದೆ ಎಂದು ಕೆಕೆಆರ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ತಿಳಿಸಿದ್ದು, ಚೇತೇಶ್ವರ್ ಪೂಜಾರ ಈಗಾಗಲೇ ಅದನ್ನು ನಿರೂಪಿಸಿದ್ದಾರೆ ಎಂದು ಹೇಳಿದ್ದಾರೆ.
ಪೂಜಾರಾ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಹೆಚ್ಚು ರನ್ಗಳಿಸಿಲ್ಲ. ಆದರೆ, ಕಾಂಗರೂ ನಾಡಿನಲ್ಲಿ ಭಾರತ ಬಾರ್ಡರ್ ಗವಾಸ್ಕರ್ ಸರಣಿ ಎತ್ತಿ ಹಿಡಿಯುವಲ್ಲಿ ಅವರ ಪಾತ್ರ ಮಹತ್ವವಾಗಿತ್ತು ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಸ್ಟೈಕ್ರೇಟ್ ಎಂಬುದು ಖಂಡಿತ ಅಸಂಬದ್ಧ ಎಂದು ನಾನು ಭಾವಿಸುತ್ತೇನೆ. ನೀವು 4 ದಿನಗಳಲ್ಲಿ ಅಂತ್ಯವಾದ ಟೆಸ್ಟ್ ಪಂದ್ಯಗಳನ್ನು ಗಮನಿಸಿದರೆ ಸುಮಾರು ಶೇ80 ರಿಂದ 82 ಇದೆ. ಆದ್ದರಿಂದ ಸ್ಟ್ರೈಕ್ರೇಟ್ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳಬೇಕು. ಭಾರತಕ್ಕಾಗಿ ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ಸಮರ್ಥನಾಗಿರುವವರೆಗೂ ಆ ವ್ಯಕ್ತಿ ತಾನು ಆಡಲು ಬಯಸುವ ಯಾವುದೇ ಸ್ಟ್ರೈಕ್ ರೇಟ್ನಲ್ಲಿ ಆಡಲಿ ಎಂದು ದಿನೇಶ್ ಕಾರ್ತಿಕ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.