ಕರ್ನಾಟಕ

karnataka

ETV Bharat / sports

ಪೃಥ್ವಿ ಶಾ ನೋಡಿದ್ರೇ ನನ್ನ ವೃತ್ತಿ ಜೀವನವೇ ನನ್ಗೆ ನೆನ್ಪಾಗುತ್ತೆ.. ಆತ ಭಾರತಕ್ಕಾಗಿ 100 ಟೆಸ್ಟ್​ ಪಂದ್ಯ ಆಡಬಲ್ಲ: ಪಾಂಟಿಂಗ್ ಭವಿಷ್ಯ

2018ರ ಅಂಡರ್ ವಿಶ್ವಕಪ್​ ವಿಜೇತ ತಂಡದ ನಾಯಕನಾಗಿದ್ದ ಶಾ ಅದೇ ವರ್ಷ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸೇರಿಕೊಂಡಿದ್ದರು. 2022ರಲ್ಲಿ ಅವರನ್ನು ಡೆಲ್ಲಿ ಫ್ರಾಂಚೈಸಿ 7.50 ಕೋಟಿ ರೂ. ನೀಡಿ ಖರೀದಿಸಿತ್ತು..

Ricky Ponting on Prithvi Shaw
ಪೃಥ್ವಿ ಶಾ ರಿಕಿ ಪಾಂಟಿಂಗ್

By

Published : Apr 12, 2022, 4:30 PM IST

ಮುಂಬೈ :ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್​ ರಿಕಿ ಪಾಂಟಿಂಗ್ ಯುವ ಆರಂಭಿಕ ಬ್ಯಾಟರ್​ ಪೃಥ್ವಿ ಶಾ ಭಾರತಕ್ಕಾಗಿ 100 ಟೆಸ್ಟ್ ಆಡಲಿದ್ದಾರೆ ಎಂದು ಹೇಳಿದ್ದಾರೆ. ಐಪಿಎಲ್​ 15ರಲ್ಲಿ ಆರಂಭಿಕನಾಗಿ ಅಬ್ಬರಿಸುತ್ತಿರುವ 22 ವರ್ಷದ ಯುವ ಬ್ಯಾಟರ್​ ಸತತ 2 ಅರ್ಧಶತಕ ಸಹಿತ 4 ಪಂದ್ಯಗಳಲ್ಲಿ 160 ರನ್​ಗಳಿಸಿದ್ದಾರೆ.

ಕಳೆದ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಕೇವಲ 29 ಎಸೆತಗಳಲ್ಲಿ 51 ರನ್​ ಸಿಡಿಸಿ ಡೆಲ್ಲಿ ಕ್ಯಾಪಿಟಲ್ಸ್ 44 ರನ್​ಗಳ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಳೆದ ಮೂರು ನಾಲ್ಕು ವರ್ಷಗಳಿಂದ ಪೃಥ್ವಿ ಶಾರನ್ನು ತುಂಬಾ ಹತ್ತಿರದಿಂದ ನೋಡುತ್ತಿರುವ ಆಸೀಸ್​ ದಿಗ್ಗಜ, ಯುವ ಬ್ಯಾಟರ್​​ ಆಟವನ್ನು ನೋಡಿದಾಗಲೆಲ್ಲಾ ನನಗೆ ನನ್ನ ವೃತ್ತಿ ಜೀವನದ ಒಳ್ಳೆಯ ದಿನಗಳು ನೆನಪಿಗೆ ಬರುತ್ತವೆ. ಆತನ ಖಂಡಿತ ಭಾರತ ತಂಡದಲ್ಲಿ ಅವಿಭಾಜ್ಯ ಅಂಗವಾಗಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಪೋಡ್​ಕಾಸ್ಟ್​ನಲ್ಲಿ ತಿಳಿಸಿದ್ದಾರೆ.

"ಪೃಥ್ವಿ ಶಾ ಆಟವನ್ನು ನೋಡಿದರೆ ನಾನು ನನ್ನ ದಿನಗಳಲ್ಲಿ ಹೊಂದಿದ್ದ ಪ್ರತಿಭೆಯನ್ನು ಅವರು ಪಡೆದಿದ್ದಾರೆ ಎಂದು ಭಾವಿಸುತ್ತೇನೆ. ಅವರು ಭಾರತಕ್ಕಾಗಿ 100ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡುವ ಮತ್ತು ಅವರ ದೇಶವನ್ನು ಸಾಧ್ಯವಾದಷ್ಟು ಪ್ರತಿನಿಧಿಸುವ ಆಟಗಾರನನ್ನಾಗಿ ನೋಡಲು ನಾನು ಬಯಸುತ್ತೇನೆ "ಎಂದು ಯುವ ಕ್ರಿಕೆಟಿಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2018ರ ಅಂಡರ್ ವಿಶ್ವಕಪ್​ ವಿಜೇತ ತಂಡದ ನಾಯಕನಾಗಿದ್ದ ಶಾ ಅದೇ ವರ್ಷ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸೇರಿಕೊಂಡಿದ್ದರು. 2022ರಲ್ಲಿ ಅವರನ್ನು ಡೆಲ್ಲಿ ಫ್ರಾಂಚೈಸಿ 7.50 ಕೋಟಿ ರೂ. ನೀಡಿ ಖರೀದಿಸಿತ್ತು.

ಇದನ್ನೂ ಓದಿ:ಚೆನ್ನೈಗೆ ಗಾಯದ ಮೇಲೆ ಬರೆ: ಪ್ರಸಕ್ತ ಐಪಿಎಲ್​ನಿಂದ ಹೊರಬಿದ್ದ ₹14 ಕೋಟಿ ಬೌಲರ್!​

ABOUT THE AUTHOR

...view details