ಅಹಮದಾಬಾದ್ (ಗುಜರಾತ್):ಮೊದಲ ಮೂವರು ಬ್ಯಾಟರ್ಗಳ ವೈಫಲ್ಯ ಭಾರತದ ಟಿ20 ತಂಡಕ್ಕೆ ಕಂಟಕವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿಯ ಅನುಪಸ್ಥಿತಿ ಭಾರತಕ್ಕೆ ಕಾಡುತ್ತಿದೆ. ನಾಳೆ ನಡೆಯಲಿರುವ ಸರಣಿಯ ಅಂತಿಮ ಪಂದ್ಯದಲ್ಲಿ ಹಾರ್ದಿಕ್ ನಾಯಕತ್ವ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಸಹ ಕುತೂಹಲವಾಗಿದೆ.
ಎರಡನೇ ಪಂದ್ಯದಲ್ಲಿ ಕಿವೀಸ್ನ್ನು ಬೌಲರ್ಗಳು ಅದ್ಭುತವಾಗಿ ಕಟ್ಟಿಹಾಕಿದ್ದರು. 99 ರನ್ಗೆ ನ್ಯೂಜಿಲೆಂಡ್ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತ್ತು. 100 ರನ್ನ ಗುರಿಯನ್ನು ಮುಟ್ಟಲು ಭಾರತ 19.5 ಬಾಲ್ಗಳನ್ನು ಎದುರಿಸಿತ್ತು. ಅಲ್ಲದೇ ಬ್ಯಾಟರ್ 4 ವಿಕೆಟ್ ಸಹ ಕಳೆದುಕೊಂಡಿತು. ಉಪನಾಯಕ ಸೂರ್ಯಕುಮಾರ್ ಯಾದವ್ ಮತ್ತು ನಾಯಕ ಹಾರ್ದಿಕ್ ಅವರ ಆಟಕ್ಕೆ ತಂಡ ದಡ ಸೇರಿತು.
ಬಾಂಗ್ಲ ಎದುರಿನ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಗಳಿಸಿದ ಇಶನ್ ಕಿಶನ್ ಮತ್ತು ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನದಲ್ಲಿ ದ್ವಿಶತಕ ಗಳಿಸಿದ ಶುಭಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದು ಟಿ20 ಫಾರ್ಮೆಟ್ನಲ್ಲಿ ವಿಫಲರಾಗುತ್ತಿದ್ದಾರೆ. ವಿರಾಟ್ ಕೊಹ್ಲಿಯ ಜಾಗಕ್ಕೆ ರಾಹುಲ್ ತ್ರಿಪಾಠಿ ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಎರಡನೇ ಟಿ20 ಚುಟುಕು ಸಮರದಲ್ಲಿ ಸಿಕ್ಸರ್ ಕಾಣದೇ ಪಂದ್ಯ ಅಂತ್ಯವಾಗಿದ್ದಲ್ಲದೇ ನಿರಸವಾಗಿತ್ತು. ಅತೀ ಹೆಚ್ಚು ಬಾಲ್ಗಳನ್ನು ಎದುರಿಸಿ ಸಿಕ್ಸ್ ದಾಖಲಾಗದ ಪಂದ್ಯ ಎಂಬ ದಾಖಲೆ ಸಹ ಕಳೆದ ಪಂದ್ಯದಲ್ಲಾಗಿದೆ.
ನಾಳೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆಯಲಿರುವ ಪಂದ್ಯ ಎರಡೂ ತಂಡಕ್ಕೆ ಸರಣಿ ಉಳಿಸಿಕೊಳ್ಳುವ ಮ್ಯಾಚ್ ಆಗಿದೆ. ಈ ಪೈನಲ್ ಹಣಾಹಣಿ ಬಾರಿ ಕುತೂಹಲ ಮೂಡಿಸಿದ್ದು 1,10,000 ಜನ ಪ್ರೇಕ್ಷಕರ ಗ್ಯಾಲರಿ ಇರುವ ಸ್ಟೇಡಿಯಂ ತುಂಬುವ ಸಾಧ್ಯತೆ ಇದೆ. ಇದೇ ಕ್ರೀಡಾಂಗಣದಲ್ಲಿ ಐಪಿಎಲ್ ಕಪ್ ಎತ್ತಿದ್ದ ಹಾರ್ದಿಕ್ ಪಾಂಡ್ಯಗೆ ನಾಳೆ ಅಗ್ನಿ ಪರೀಕ್ಷೆಯಂತೂ ಇದೆ. ಮೊದಲ ಪಂದ್ಯದಲ್ಲಿ ಕೊನೆ ದುಬಾರಿ ಓವರ್ ಮತ್ತು ಕಳಪೆ ಬೌಲಿಂಗ್ ಪ್ರದರ್ಶನ ಎಂದು ನಾಯಕ ಹಾರ್ದಿಕ್ ಹೇಳಿಕೊಂಡಿದ್ದರು. ಎರಡನೇ ಪಂದ್ಯದಲ್ಲಿ ಬೌಲಿಂಗ್ ಸುಧಾರಿಸಿದ್ದು, ಬ್ಯಾಟಿಂಗ್ ವೈಫಲ್ಯ ಕಂಡಿದೆ. ಎರಡನ್ನೂ ಮೂರನೇ ಪಂದ್ಯದಲ್ಲಿ ಸಮತೋಲನ ಮಾಡುವ ಅಗತ್ಯ ಇದೆ. ತಂಡದಲ್ಲಿ ಪ್ರಯೋಗ ಕೈಗೊಳ್ಳಲು ಸಾಧ್ಯತೆಗಳು ಕಡಿಮೆ ಇರುವುದರಿಂದ ಅದೇ ತಂಡವನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
ಪೃಥ್ವಿ ಶಾಗೆ ಈ ಪಂದ್ಯದಲ್ಲೂ ಅವಕಾಶ ಅನುಮಾನ:ದೇಶೀಯ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಪೃಥ್ವಿ ಶಾ ಅವರನ್ನು ಟಿ20 ಸ್ವಾಡ್ನಲ್ಲಿ ಸೇರಿಸಲಾಗಿತ್ತು. ಆದರೆ ದ್ವಿಶತಕ ವೀರರಾದ ಗಿಲ್ ಮತ್ತು ಕಿಶನ್ಗೆ ಆರಂಭದ ಜವಾಬ್ದಾರಿ ನೀಡಲಾಗಿತ್ತು. ಇಬ್ಬರೂ ಎರಡು ಪಂದ್ಯಗಳಲ್ಲಿ ವಿಫಲರಾದರೂ ಈ ಪಂದ್ಯದಲ್ಲಿ ಶಾಗೆ ಅವಕಾಶ ಅನುಮಾನವೇ ಇದೆ. ಅದೇ ತಂಡವನ್ನು ಹಾರ್ದಿಕ್ ಮುಂದುವರೆಸುವ ಸಾಧ್ಯತೆ ಇದೆ. ಸ್ವಿನ್ ವಿಭಾಗದಲ್ಲಿ ಒಬ್ಬರನ್ನು ಕೈಬಿಟ್ಟು ಮತ್ತೆ ವೇಗಿ ಉಮ್ರಾನ್ಗೆ ಸ್ಥಾನ ಸಿಗುವ ಸಾಧ್ಯತೆ ಇದೆ.