ಕೇಪ್ಟೌನ್:ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ಅಜೇಯ ಶತಕದ ಹೊರತಾಗಿಯೂ ಭಾರತ ತಂಡ 3ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ 212 ರನ್ಗಳ ಸಾಧಾರಣ ಗುರಿ ನೀಡಿತು.
3ನೇ ದಿನ 2ನೇ ಇನ್ನಿಂಗ್ಸ್ನಲ್ಲಿ ಭಾರತ ತಂಡ ಹರಿಣಗಳ ವೇಗಿಗಳ ದಾಳಿಗೆ ತತ್ತರಿಸಿ ಕೇವಲ 198 ರನ್ಗಳಿಗೆ ಆಲೌಟ್ ಆಯಿತು. ರಿಷಭ್ ಪಂತ್ ಏಕಾಂಗಿ ಹೋರಾಟ ನಡೆಸಿ 139 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ಗಳ ನೆರವಿನಿಂದ 100 ರನ್ಗಳಿಸಿ ಅಜೇಯರಾಗಿ ಉಳಿದುಕೊಂಡರು.
ಇವರನ್ನು ಹೊರೆತುಪಡಿಸಿದರೆ ನಾಯಕ ವಿರಾಟ್ ಕೊಹ್ಲಿ 143 ಎಸೆತಗಳಲ್ಲಿ 29 ರನ್ಗಳಿಸಿದ್ದೇ ತಂಡದ 2ನೇ ಗರಿಷ್ಠ ಸ್ಕೋರ್ ಆಗಿತ್ತು. ಉಳಿದ ಯಾವೊಬ್ಬ ಬ್ಯಾಟರ್ 10ರ ಗಡಿದಾಟುವಲ್ಲಿ ವಿಫಲರಾದರು.
ಕೆಎಲ್ ರಾಹುಲ್ 10, ಮಯಾಂಕ್ ಅಗರ್ವಾಲ್ 7, ಪೂಜಾರ 9, ರಹಾನೆ 1, ರವಿಚಂದ್ರನ್ ಅಶ್ವಿನ್ 7, ಶಾರ್ದೂಲ್ ಠಾಕೂರ್ 5, ಬುಮ್ರಾ 2, ಉಮೇಶ್ ಯಾದವ್ ಮತ್ತು ಶಮಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ದಕ್ಷಿಣ ಅಫ್ರಿಕಾ ಪರ ಮಾರ್ಕೊ ಜಾನ್ಸನ್ 36ಕ್ಕೆ 4, ಕಗಿಸೊ ರಬಾಡ 53ಕ್ಕೆ3, ಲುಂಗಿ ಎಂಗಿಡಿ 21ಕ್ಕೆ 3 ವಿಕೆಟ್ ಪಡೆದು ಭಾರತ ತಂಡವನ್ನು 200ರ ಗಡಿಯೊಳಗೆ ನಿಯಂತ್ರಿಸಿದರು.