ಮುಂಬೈ:ಕ್ರಿಕೆಟ್ನ ಅಸಂಖ್ಯ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಭಾರತದ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ ಇಂದಿಗೆ 12 ವರ್ಷಗಳ ಸಂಭ್ರಮ.
ಏಕದಿನ ಕ್ರಿಕೆಟ್ನ ನಾಲ್ಕು ದಶಕಗಳಲ್ಲಿ ಅಸಾಧ್ಯವಾಗಿದ್ದ ದ್ವಿಶತಕವನ್ನು ಕೊನೆಗೂ ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ 2010 ಫೆ.24ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸಿಡಿಸಿ ವಿಶ್ವಕ್ರಿಕೆಟ್ ತಮ್ಮತ್ತ ಒಮ್ಮೆ ತಿರುಗಿ ನೋಡುವಂತೆ ಮಾಡಿದ್ದರು. 150 ಹೊಡೆಯುವುದೇ ದುಸ್ತರವಾಗಿದ್ದ ಕಾಲದಲ್ಲಿ ಅಂದು ವಿಶ್ವದ ಬಲಿಷ್ಠ ಬೌಲಿಂಗ್ ಶಕ್ತಿಯಾಗಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ದ್ವಿಶತಕ ಸಾಧಿಸಿ ತಾವೂಬ್ಬ ಶ್ರೇಷ್ಠ ಕ್ರಿಕೆಟಿಗ ಎನ್ನುವುದನ್ನು ತೋರಿಸಿದ್ದರು.
ಫೆಬ್ರವರಿ 24, 2010 ರಂದು ಗ್ವಾಲಿಯರ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ಏಕದಿನ ಸರಣಿಯ ಎರಡನೇ ಪಂದ್ಯ ನಡೆದಿತ್ತು. ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ಇತಿಹಾಸದ ಪ್ರಪ್ರಥಮ ದ್ವಿಶತಕ ಸಿಡಿಸಿದ್ದರು. 147 ಎಸೆತಗಳನ್ನೆದುರಿಸಿದ್ದ ಸಚಿನ್ ನಲ್ಲಿ ಭರ್ಜರಿ 25 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 200 ರನ್ಗಳಿಸಿ ಔಟಾಗದೇ ಉಳಿದಿದ್ದರು. ಈ ಪಂದ್ಯದಲ್ಲಿ ಭಾರತ 153 ರನ್ಗಳ ಜಯ ಸಾಧಿಸಿತ್ತು.