ಕರ್ನಾಟಕ

karnataka

ETV Bharat / sports

ದಕ್ಷಿಣ ಆಫ್ರಿಕಾ ವಿರುದ್ಧ 18 ವರ್ಷಗಳ ಬಳಿಕ ಟೆಸ್ಟ್​ ಗೆದ್ದ ನ್ಯೂಜಿಲ್ಯಾಂಡ್!

ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್​ ಮತ್ತು 276 ರನ್​ಗಳ ಜಯದೊಂದಿಗೆ ನ್ಯೂಜಿಲ್ಯಾಂಡ್​ 18 ವರ್ಷಗಳ ಬಳಿಕ ಟೆಸ್ಟ್​ ಕ್ರಿಕೆಟ್​​ನಲ್ಲಿ ಜಯ ಕಂಡಿದೆ. ಒಟ್ಟಾರೆ 45 ಟೆಸ್ಟ್​ಗಳ ಮುಖಾಮುಖಿಯಲ್ಲಿ ಕಿವೀಸ್​ ಪಡೆಗೆ ಸಿಕ್ಕ 5ನೇ ಜಯವಾಗಿದೆ..

New Zealand emphatically ends 18-year drought vs South Africa
ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲ್ಯಾಂಡ್​ಗೆ ಜಯ

By

Published : Feb 19, 2022, 9:35 PM IST

ಕ್ರೈಸ್ಟ್​ಚರ್ಚ್ ​:ಭಾರತ ವಿರುದ್ಧ 2-1ರಲ್ಲಿ ಸರಣಿ ಜಯಿಸಿದ್ದ ದಕ್ಷಿಣ ಆಫ್ರಿಕಾ ತಂಡ ಕಿವೀಸ್​ ವಿರುದ್ಧದ ಮೊದಲ ಪಂದ್ಯದಲ್ಲಿ ಪ್ರತಿರೋಧವಿಲ್ಲದೆ ಹೀನಾಯ ಸೋಲುಂಡಿದೆ.

ಇನ್ನು ಇನ್ನಿಂಗ್ಸ್​ ಮತ್ತು 276 ರನ್​ಗಳ ಜಯದೊಂದಿಗೆ ಹರಿಣಗಳ ವಿರುದ್ಧ ನ್ಯೂಜಿಲ್ಯಾಂಡ್​ 18 ವರ್ಷಗಳ ಬಳಿಕ ಟೆಸ್ಟ್​ ಕ್ರಿಕೆಟ್​​ನಲ್ಲಿ ಜಯ ಕಂಡಿದೆ. ಒಟ್ಟಾರೆ 45 ಟೆಸ್ಟ್​ಗಳ ಮುಖಾಮುಖಿಯಲ್ಲಿ ಕಿವೀಸ್​ ಪಡೆಗೆ ಸಿಕ್ಕ 5ನೇ ಜಯವಾಗಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ದಕ್ಷಿಣ ಆಫ್ರಿಕಾ ಕೇವಲ 95 ರನ್​ಗಳಿಗೆ ಆಲೌಟ್​ ಆಗಿತ್ತು. ಮ್ಯಾಟ್​ ಹೆನ್ರಿ 23 ರನ್​ಗಳಿಗೆ 7 ವಿಕೆಟ್ ಪಡೆದು ಮಿಂಚಿದ್ದರು. ಇದಕ್ಕುತ್ತರವಾಗಿ ನ್ಯೂಜಿಲ್ಯಾಂಡ್​ ಮೊದಲ ಇನ್ನಿಂಗ್ಸ್​ನಲ್ಲಿ 482 ರನ್​ಗಳಿಸಿತ್ತು.

ಹೆನ್ರಿ ನಿಕೋಲ್ಸ್​ 105, ಟಾಮ್ ಬ್ಲಂಡೆಲ್ 96, ಮ್ಯಾಟ್ ಹೆನ್ರಿ ಅಜೇಯ 58, ಡಿ ಗ್ರ್ಯಾಂಡ್​ಹೋಮ್​ 45, ವ್ಯಾಗ್ನರ್​ 49 ರನ್​ಗಳಿಸಿ ಬೃಹತ್​ ಮೊತ್ತ ದಾಖಲಿಸಲು ಕಿವೀಸ್​ಗೆ ನೆರವಾಗಿದ್ದರು.

ದಕ್ಷಿಣ ಆಫ್ರಿಕಾ ಪರ ರಬಾಡ 113ಕ್ಕೆ 2, ಗ್ಲೆಂಟನ್​ ಸ್ಟರ್ಮನ್​ 124ಕ್ಕೆ1, ಮಾರ್ಕೊ ಜಾನ್ಸನ್​ 96ಕ್ಕೆ 2, ಡುವಾನ್ನೆ ಒಲಿವಿಯರ್ 100ಕ್ಕೆ 3 ವಿಕೆಟ್​ ಪಡೆದಿದ್ದರು.

387ರನ್​ಗಳ ಮೊದಲ ಇನ್ನಿಂಗ್ಸ್​ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ, ಕೇವಲ 111 ರನ್​ಗಳಿಗೆ ಸರ್ವಪತನ ಕಂಡು ಇನ್ನಿಂಗ್ಸ್​ ಸೋಲಿಗೆ ತುತ್ತಾಯಿತು. ಟೆಂಬ ಬವುಮಾ 41,ಕೈಲ್ ವೀರೆನ್ನೆ 30 ಮಾತ್ರ 20ರ ಗಡಿ ದಾಟಿದರು.

ಸರೆಲ್ ಇರ್ವಿನ್​ ಮತ್ತು ನಾಯಕ ಎಲ್ಗರ್​ ಶೂನ್ಯ ಸುತ್ತಿದರೆ, ಮಾರ್ಕ್ರಮ್​ 2, ಡಸೆನ್ 9, ಜುಬೇರ್ ಹಮ್ಜಾ 6, ಮಾರ್ಕೊ ಜಾನ್ಸನ್ 10, ರಬಾಡ 0, ಸ್ಟರ್ಮನ್​ 11 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಕಿವೀಸ್​ ಪರ ಅನುಭವಿ ಬೌಲರ್ ಟಿಮ್ ಸೌಥಿ 35ಕ್ಕೆ 5, ಮ್ಯಾಟ್ ಹೆನ್ರಿ 32ಕ್ಕೆ 2, ನೀಲ್ ವ್ಯಾಗ್ನರ್​ 2 ಮತ್ತು ಜೇಮಿಸನ್ 1 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.

9 ವಿಕೆಟ್ ಮತ್ತು 58 ರನ್​ಗಳಿಸಿ ಆಲ್​ರೌಂಡ್ ಪ್ರದರ್ಶನ ತೋರಿದ ಮ್ಯಾಟ್ ಹೆನ್ರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಫೆಬ್ರವರಿ 25ರಿಂದ ಇದೇ ಮೈದಾನದಲ್ಲಿ 2ನೇ ಟೆಸ್ಟ್​ ನಡೆಯಲಿದೆ.

ಇದನ್ನೂ ಓದಿ:ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿ: ಪೂಜಾರ, ರಹಾನೆ ಸಹಿತ ನಾಲ್ವರನ್ನು ತಂಡದಿಂದ ಕೈಬಿಟ್ಟ ಆಯ್ಕೆ ಸಮಿತಿ

ABOUT THE AUTHOR

...view details