ಕರ್ನಾಟಕ

karnataka

ETV Bharat / sports

T20 world cup:  ಸೆಮಿಫೈನಲ್ ಪ್ರವೇಶಿಸಲು ನ್ಯೂಜಿಲ್ಯಾಂಡ್​​ಗೆ 125 ರನ್​ಗಳ ಗುರಿ​

ನಜೀಬುಲ್ಲಾ ಅವರ ಜವಾಬ್ದಾರಿಯುತ ಅರ್ಧಶತಕದ ಹೊರತಾಗಿಯೂ ಅಫ್ಘಾನಿಸ್ತಾನ ತಂಡ ಕಿವೀಸ್​ಗೆ ಕೇವಲ 125 ರನ್​ಗಳ ಸಾಧಾರಣ ಗುರಿ ನೀಡಿದೆ.

New Zealand vs Afghanistan
New Zealand vs Afghanistan

By

Published : Nov 7, 2021, 5:14 PM IST

ಅಬುಧಾಬಿ: ನಜೀಬುಲ್ಲಾ ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ತಂಡ ಸೆಮಿಫೈನಲ್​ ನಿರ್ಧರಿಸುವ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ರನ್​ಗಳ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ನೀಡಿದೆ.

ಅಬುಧಾಬನಿಯ ಶೇಖ್​ ಜಾಯೇದ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಅಫ್ಘಾನಿಸ್ತಾನ ತಂಡ ಬ್ಯಾಟಿಂಗ್​ ಮಾಡಲು ನಿರ್ಧರಿಸಿತು. ಆದರೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಪವರ್​ ಪ್ಲೇ ಮುಗಿಯುವುದರೊಳಗೆ ಆರಂಭಿಕರಾದ ಮೊಹಮ್ಮದ್ ಶಹಜಾದ್​(4), ಹಜರುತುಲ್ಲಾಝಾಜೈ(4) ಮತ್ತು ರಹ್ಮನುಲ್ಲಾ ಗುರ್ಬಾಜ್​(5) ವಿಕೆಟ್​ ಕಳೆದುಕೊಂಡು ಆಘಾತ ಅನುಭವಿಸಿತು.

ನಂತರ ಬಡ್ತಿ ಪಡೆದು ಬಂದ ಗುಲ್ಬದ್ದೀನ್ ನೈಬ್​(18) ಕುಸಿಯುತ್ತಿದ್ದ ಅಫ್ಘಾನಿಸ್ತಾನ ತಂಡವನ್ನು ಸ್ವಲ್ಪ ಸಮಯ ನಜೀಬುಲ್ಲಾ ಜೊತೆಗೂಡಿ ತಡೆದರು. ಈ ಜೋಡಿ 4ನೇ ವಿಕೆಟ್​ಗೆ 37 ರನ್​ ಜೊತೆಯಾಟ ನೀಡಿತು. ಆದರೆ ಈ ಹಂತದಲ್ಲಿ ದಾಳಿಗಿಳಿದಿ ಕಿವೀಸ್​ ಸ್ಟಾರ್​ ಸ್ಪಿನ್ನರ್ ಸೋಧಿ, 18ರನ್​ಗಳಿಸಿದ್ದ ನೈಬ್​ರನ್ನು​ ಬೌಲ್ಡ್​ ಮಾಡಿದರು.

56ಕ್ಕೆ 4 ವಿಕೆಟ್​ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಅಫ್ಘಾನಿಸ್ತಾನ ತಂಡಕ್ಕೆ ನಾಯಕ ನಬಿ ಮತ್ತು ನಜೀಬುಲ್ಲಾ 59 ರನ್​ಗಳ ಅಮೂಲ್ಯ ಜೊತೆಯಾಟ ನೀಡಿದರು. ನಬಿ 20 ಎಸೆತಗಳಲ್ಲಿ 14 ರನ್​ಗಳಿಸಿದರೆ, ನಜೀಬುಲ್ಲಾ 48 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್​ಗಳ ನೆರವಿನಿಂದ 73 ರನ್​ಗಳಿಸಿ ಬೌಲ್ಟ್​ಗೆ ವಿಕೆಟ್​ ಒಪ್ಪಿಸಿದರು.

ನ್ಯೂಜಿಲ್ಯಾಂಡ್​ ಪರ ಟ್ರೆಂಟ್ ಬೌಲ್ಟ್​ 17ಕ್ಕೆ 3 ವಿಕೆಟ್​ ಪಡೆದರೆ, ಟಿಮ್ ಸೌಥಿ 24ಕ್ಕೆ 2 , ಆ್ಯಡಂ ಮಿಲ್ನೆ 4 ಓವರ್​ಗಳಲ್ಲಿ ಕೇವಲ 17 ರನ್​ ನೀಡಿ 17ಕ್ಕೆ 1 ಹಾಗೂ ಇಶ್​ ಸೋಧಿ 2 ಓವರ್​ಗಳಲ್ಲಿ 13 ರನ್​ ನೀಡಿ 1 ವಿಕೆಟ್​ ಪಡೆದು ಅಫ್ಘಾನ್ ಬೃಹತ್​ ಮೊತ್ತದ ಕನಸಿಗೆ ತಣ್ಣೀರೆಚಿದರು.

ಇದನ್ನೂ ಓದಿ:ಮುಂದಿನ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯುವಲ್ಲಿ ವಿಂಡೀಸ್, ಲಂಕಾ ಫೇಲ್‌: ಬಾಂಗ್ಲಾ, ಅಫ್ಘಾನ್ ಪಾಸ್​

ABOUT THE AUTHOR

...view details