ಜೋಹಾನ್ಸ್ಬರ್ಗ್: ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ತಂಡದಿಂದ ಅವಕಾಶ ವಂಚಿತನಾಗಿರುವ ಆಲ್ರೌಂಡರ್ ಕ್ರಿಸ್ ಮೋರಿಸ್ ತಾವೂ ಭವಿಷ್ಯದಲ್ಲಿ ತಮ್ಮ ದೇಶದ ಪರ ಆಡುವುದು ಅಸಾಧ್ಯ ಎಂದು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕ ತಂಡಕ್ಕಾಗಿ ನನ್ನ ಆಡುವ ದಿನಗಳು ಮುಗಿದಿವೆ. ಇದರ ಬಗ್ಗೆ ಕ್ರಿಕೆಟ್ ದಕ್ಷಿಣ ಆಫ್ರಿಕಾಗೆ ಕೂಡ ಅರಿವಿದೆ. ನಾನು ಅಧಿಕೃತವಾಗಿ ನಿವೃತ್ತಿ ಹೇಳಿಲ್ಲವಾದರೂ ಅವರಿಗೆ ನಾನು ಈಗ ಯಾವ ಹಂತದಲ್ಲಿದ್ದೇನೆ ಎನ್ನುವುದು ತಿಳಿದಿದೆ. ನಾನು ಎಲ್ಲಿದ್ದೇನೆ ಎನ್ನುವುದು ನನಗೂ ಗೊತ್ತು . ಆದರೆ, ದಕ್ಷಿಣ ಆಫ್ರಿಕಾ ತಂಡಕ್ಕೆ ಆಡುವ ನನ್ನ ದಿನಗಳು ಮುಗಿದಿವೆ ಎಂದು ಮೋರಿಸ್ ಸ್ಪೋರ್ಟ್ಸ್ಕೀಡಾಗೆ ತಿಳಿಸಿದ್ದಾರೆ.
34 ವರ್ಷದ ಆಟಗಾರನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಯಾವಾಗ ಎಂದು ಕೇಳಿದ್ದಕ್ಕೆ, ತಮಗೆ ನಿವೃತ್ತಿ ಹೇಳುವುದಕ್ಕೆ ಇಷ್ಟವಿಲ್ಲ, ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ತಮ್ಮ ಪಾಲಿಗೆ ಮುಗಿದ ಅಧ್ಯಾಯ, ತಮ್ಮ ಗಮನ ಏನಿದ್ದರೂ ಡೊಮೆಸ್ಟಿಕ್ ಕ್ರಿಕೆಟ್ ಮತ್ತು ಟಿ-20 ಲೀಗ್ಗಳ ಕಡೆಗೆ ಎಂದು ಮೋರಿಸ್ ಹೇಳಿದ್ದಾರೆ.