ಕರ್ನಾಟಕ

karnataka

ETV Bharat / sports

ಟಾಸ್​ ಗೆದ್ದ ಮಂಧಾನ ಬ್ಯಾಟಿಂಗ್​ ಆಯ್ಕೆ, ಆರ್​ಸಿಬಿಯಲ್ಲಿ ಒಂದು ಬದಲಾವಣೆ - ETV Bharath Kannada news

ಮಂಧಾನ ಅದೃಷ್ಠಶಾಲಿ ಎಂದ ಕೌರ್​ - ಟಾಸ್​​ ಗೆದ್ದು ಕೌರ್​ ಪಡೆಗೆ ಬೌಲಿಂಗ್​ ಆಹ್ವಾನ ನೀಡಿದ ಮಂಧಾನ - ಆರ್​ಸಿಬಿಗೆ ಶ್ರೇಯಾಂಕಾ ಪಾಟೀಲ್ ಹೊಸ ಸೇರ್ಪಡೆ

Mumbai Indians Women vs Royal Challengers Bangalore Women
ಟಾಸ್​ ಗೆದ್ದ ಮಂಧಾನ ಬ್ಯಾಟಿಂಗ್​ ಆಯ್ಕೆ, ಆರ್​ಸಿಬಿಯಲ್ಲಿ ಒಂದು ಬದಲಾವಣೆ

By

Published : Mar 6, 2023, 7:23 PM IST

ಮುಂಬೈ:ಇಲ್ಲಿನ ಬ್ರಬೋರ್ನ್ ಸ್ಟೇಡಿಯಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವುಮೆನ್ಸ್​ ಪ್ರೀಮಿಯರ್​ ಲೀಗ್​ನ ನಾಲ್ಕನೇ ಪಂದ್ಯದಲ್ಲಿ ಭಾರತ ನಾಯಕಿ ಮತ್ತು ಉಪನಾಯಕಿಯ ತಂಡ ಎದುರಾಗುತ್ತಿದೆ. ಮುಂಬೈ ಇಂಡಿಯನ್ಸ್ (ಎಂಐ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಖಾಮುಖಿಯಲ್ಲಿ ಟಾಸ್​ ಗೆದ್ದ ಮಂಧಾನ ಪಡೆ ಬ್ಯಾಟಿಂಗ್​ ಆಯ್ದು ಕೊಂಡಿದೆ. ಆರ್​ಸಿಬಿಯಲ್ಲಿ ಒಂದು ಬದಲಾವಣೆ ಮಾಡಿಕೊಂಡಿದ್ದು ಆಶಾ ಶೋಭನಾ ಬದಲಾಗಿ ಶ್ರೇಯಾಂಕಾ ಪಾಟೀಲ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು :ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ದಿಶಾ ಕಸತ್, ರಿಚಾ ಘೋಷ್ (ವಿಕೆಟ್​ ಕೀಪರ್​), ಹೀದರ್ ನೈಟ್, ಕನಿಕಾ ಅಹುಜಾ, ಮೇಗನ್ ಶುಟ್, ಶ್ರೇಯಾಂಕಾ ಪಾಟೀಲ್, ಪ್ರೀತಿ ಬೋಸ್, ರೇಣುಕಾ ಠಾಕೂರ್ ಸಿಂಗ್

ಮುಂಬೈ ಇಂಡಿಯನ್ಸ್: ಯಾಸ್ತಿಕಾ ಭಾಟಿಯಾ (ವಿಕೆಟ್​ ಕೀಪರ್​), ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವಾಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್

ಟಾಸ್​ ಗೆದ್ದು ಮಾತನಾಡಿದ ಮಂಧಾನ, "ನಾವು ಮೊದಲು ಬ್ಯಾಟ್ ಮಾಡಲು ಬಯಸುತ್ತೇವೆ. ಇದು ಬ್ಯಾಟಿಂಗ್ ಮಾಡಲು ಉತ್ತಮ ವಿಕೆಟ್ ತೋರುತ್ತಿದೆ ಮತ್ತು ಚೇಸಿಂಗ್ ಒತ್ತಡವನ್ನು ಹೆಚ್ಚಿಸುತ್ತದೆ. ಒಟ್ಟು ಮೊತ್ತದ ಬಗ್ಗೆ ಯೋಚಿಸುವುದು ಸಹಾಯ ಮಾಡುವುದಿಲ್ಲ, ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕು ಮತ್ತು ನಾವು ದೊಡ್ಡ ಮೊತ್ತವನ್ನು ಕಲೆಹಾಕಲು ಪ್ರಯತ್ನಿಸುತ್ತೇವೆ" ಎಂದಿದ್ದಾರೆ.

ಹರ್ಮನ್‌ಪ್ರೀತ್ ಕೌರ್ ಮಾತನಾಡಿ,"ಸ್ಮೃತಿ ನನಗಿಂತ ಸ್ವಲ್ಪ ಅದೃಷ್ಟಶಾಲಿ ಎಂದು ಟಾಸ್​ ಗೆದ್ದ ಬಗ್ಗೆ ಹೇಳಿದರು. ನಾವು ಮೊದಲು ಬೌಲ್ ಮಾಡಲು ಬಯಸಿದ್ದೆವು, ಟಾಸ್​ ಸೋತರೂ ಬೌಲಿಂಗ್​ ಅವಕಾಶ ಸಿಕ್ಕಿದೆ. ನಮ್ಮ ಬೌಲಿಂಗ್ ಪಡೆಯ ಮೇಲೆ ನಮಗೆ ಹೆಚ್ಚಿನ ವಿಶ್ವಾಸವಿದೆ. ಅದಕ್ಕಾಗಿಯೇ ನಾವು ಇಂದು ಬೌಲಿಂಗ್ ಮಾಡಲು ಬಯಸಿದ್ದೆವು. ಮೊದಲ ಪಂದ್ಯದ ತಂಡದೊಂದಿಗೆ ಮುಂದುವರೆಯುತ್ತೆವೆ" ಎಂದರು.

ಪಿಚ್​ ವರದಿ:ಸಂಜಯ್ ಮಂಜ್ರೇಕರ್ ತಮ್ಮ ಪಿಚ್ ವರದಿ ನೀಡಿದ್ದು, ಇದೊಂದು ವಿಶಿಷ್ಟವಾದ ಐಸಿಸಿ ಪಿಚ್ ಆಗಿದೆ, ತೆಳುವಾಗಿ ಹುಲ್ಲು ಇದ್ದು ಮೇಲ್ಮೈ ಗಟ್ಟಿಯಾಗಿದೆ. ಕೆಂಪು ಮಣ್ಣಿನ ಸದೃಢ ಪಿಚ್​. ವೇಗದ ಬೌಲರ್​ಗಳಿಗೆ ಮೊದಲ ಇನ್ನಿಂಗ್ಸ್​ನಲ್ಲಿ ಪರಿಣಾಮ ಬೀರಲು ಹೆಚ್ಚು ಸಹಕಾರಿ ಆಗಿರಲಿದೆ. ಸ್ವಲ್ಪ ತೇವಾಂಶ ಪಿಚ್​ ಮೇಲೆ ಬೀಳುತ್ತಿದ್ದಂತೆ ಸ್ಪಿನ್ನರ್‌ಗಳಿಗೂ ಸಹಾಯಕವಾಗಿರುತ್ತದೆ' ಎಂದಿದ್ದಾರೆ.

ಮೊದಲ ಪಂದ್ಯದಲ್ಲಿ ಸೋಲನುಭವಿಸಿದ ನಂತರ ಮಾತನಾಡಿದ್ದ ಆರ್​ಸಿಬಿ ನಾಯಕಿ ಮಂಧಾನ, "ನಾವು 20 ರಿಂದ 30 ಹೆಚ್ಚು ರನ್‌ಗಳನ್ನು ನೀಡಿದ್ದೇವೆ. ವೇಗದ ಬೌಲಿಂಗ್ ಘಟಕ ನಿರ್ವಹಣೆಯಲ್ಲಿ ಎಡವಿದ್ದೇವೆ. ನಾವು ಬ್ಯಾಕ್-ಟು-ಬ್ಯಾಕ್ ಆಟಗಳನ್ನು ಹೊಂದಿದ್ದೇವೆ, ಮುಂಬೈ ಎದುರಿನ ಪಂದ್ಯದಲ್ಲಿ ಗೆಲುವಿನ ಟ್ರ್ಯಾಕ್​ ಮರಳುತ್ತೇವೆ. ಮುಂದಿನ ಪಂದ್ಯದಲ್ಲಿ ಇನ್ನಷ್ಟೂ ಧನಾತ್ಮಕ ಅಂಶಗಳಿಂದ ಕಣಕ್ಕಿಳಿಯುತ್ತೇವೆ. ನಾವು ಉತ್ತಮ ಆರಂಭ ಕಂಡೆವು. ಆದರೆ ದೊಡ್ಡ ಇನ್ನಿಂಗ್ಸ್​ ಕಟ್ಟುವುದರಲ್ಲಿ ಎಡವಿದ್ದೇವೆ. ಅದೇ ಪಿಚ್​ನಲ್ಲಿ ಮುಂದಿನ ಪಂದ್ಯ ಆಡಲಿದ್ದು, ರನ್​ ಕಡಿವಾಣಕ್ಕೆ ಚಿಂತಿಸುವುದಾಗಿ" ಹೇಳಿದ್ದಾರೆ.

ಇದನ್ನೂ ಓದಿ:ಇಂದು ಕೌರ್​ vs ಮಂಧಾನ: ನಾಯಕಿ, ಉಪ ನಾಯಕಿ ನಡುವಣ ಕದನಕ್ಕೆ ಬ್ರಬೋರ್ನ್ ಸ್ಟೇಡಿಯಂ ಸಜ್ಜು

ABOUT THE AUTHOR

...view details