ಕರ್ನಾಟಕ

karnataka

ETV Bharat / sports

ಎಲಿಮಿನೇಟರ್​ ಪಂದ್ಯದಲ್ಲಿ ಟಾಸ್​ ಗೆದ್ದ ಯುಪಿ: ಮುಂಬೈಗೆ ಬ್ಯಾಟಿಂಗ್​ ಆಹ್ವಾನ ಇತ್ತ ಹೇಲಿ - ಮುಂಬೈಗೆ ಬ್ಯಾಟಿಂಗ್​ ಆಹ್ವಾನ ಇತ್ತ ಹೇಲಿ

ಚೊಚ್ಚಲ ವುಮೆನ್ಸ್​ ಪ್ರೀಮಿಯರ್​​ ಲೀಗ್​ನ ಎಲಿಮಿನೇಟರ್​ ಪಂದ್ಯ - ಮುಂಬೈ ಇಂಡಿಯನ್ಸ್​ ಮತ್ತು ಯುಪಿ ವಾರಿಯರ್ಸ್​ ಮುಖಾಮುಖಿ - ಟಾಸ್ ​ಗೆದ್ದ ಯುಪಿ ವಾರಿಯರ್ಸ್​ ಬೌಲಿಂಗ್​ ಆಯ್ಕೆ

Mumbai Indians vs UP Warriorz Eliminator
ಎಲಿಮಿನೇಟರ್​ ಪಂದ್ಯದಲ್ಲಿ ಟಾಸ್​ ಗೆದ್ದ

By

Published : Mar 24, 2023, 7:19 PM IST

Updated : Mar 24, 2023, 7:49 PM IST

ಮುಂಬೈ:ಮಹಿಳಾ ಪ್ರೀಮಿಯರ್​ ಲೀಗ್​ನ ಅಂತಿಮ ಘಟ್ಟಕ್ಕೆ ಹೆಜ್ಜೆ ಇಡಲು ಇರುವ ಕೊನೆಯ ಅವಕಾಶದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಯುಪಿ ವಾರಿಯರ್ಸ್​​ ಇಲ್ಲಿನ ಡಿವೈ ಪಾಟೀಲ್​ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿದ್ದು, ಟಾಸ್ ​ಗೆದ್ದ ಯುಪಿ ವಾರಿಯರ್ಸ್​ ನಾಯಕಿ ಅಲಿಸ್ಸಾ ಹೀಲಿ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್​ ಕೀಪರ್​), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಮೆಲಿ ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವಾಂಗ್, ಅಮನ್‌ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್

ಯುಪಿ ವಾರಿಯರ್ಜ್ ತಂಡ ಹೀಗಿದೆ.. ಅಲಿಸ್ಸಾ ಹೇಲಿ(ನಾಯಕಿ/ವಿಕೆಟ್​ ಕೀಪರ್​), ಶ್ವೇತಾ ಸೆಹ್ರಾವತ್, ಸಿಮ್ರಾನ್ ಶೇಖ್, ತಹ್ಲಿಯಾ ಮೆಗ್ರಾತ್, ಗ್ರೇಸ್ ಹ್ಯಾರಿಸ್, ಕಿರಣ್ ನವಗಿರೆ, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ಪಾರ್ಶವಿ ಚೋಪ್ರಾ, ಸೊಪ್ಪದಂಡಿ ಯಶಸ್ರಿ

ಟಾಸ್​ ನಂತರ ಮಾತನಾಡಿದ ಯುಪಿ ವಾರಿಯರ್ಸ್​ ನಾಯಕಿ ಹೀಲಿ,"ಟಾಸ್ ಗೆಲ್ಲಲು ಯಾವಾಗಲೂ ಸಂತೋಷವಾಗುತ್ತದೆ. ಇಂದು ಮೊದಲು ಬೌಲಿಂಗ್​ ಮಾಡುತ್ತೇವೆ. ಎರಡನೇ ಇನ್ನಿಂಗ್ಸ್​ ವೇಳೆಗೆ ಇಬ್ಬನಿ ಸಾಧ್ಯತೆ ಇದೆ. ಮೊದಲು ಬ್ಯಾಟಿಂಗ್ ಮಾಡಿ ಕೊನೆಯ ಕೆಲವು ತಂಡಗಳು ಪಂದ್ಯವನ್ನು ಕಳೆದುಕೊಂಡಿವೆ. ತಂಡದಲ್ಲಿ ಕೆಲ ಬದಲಾವಣೆ ಮಾಡಿಕೊಂಡಿದ್ದು ಗ್ರೇಸ್ ಹ್ಯಾರಿಸ್ ಮತ್ತೆ ತಂಡಕ್ಕೆ ಸೇರಿದ್ದಾರೆ, ಶಬ್ನಿಮ್ ತಂಡದಿಂದ ಹೊರಗುಳಿದಿದ್ದಾರೆ.

ಮುಂಬೈ ಇಂಡಿಯನ್ಸ್​ ನಾಯಕಿ ಕೌರ್,"ಕಳೆದ ಬಾರಿ ನಾವು ಆಡಿದಾಗ ಬ್ಯಾಟ್ ಮಾಡಲು ಉತ್ತಮ ವಿಕೆಟ್ ಆಗಿತ್ತು. ಚೇಸಿಂಗ್ ಎಲ್ಲವೂ ಆದ್ಯತೆಯ ವಿಷಯವಾಗಿದೆ, ಅದೇ ರೀತಿ ಮಾಡಿದ್ದೇನೆ. ಲೀಗ್​ ಆರಂಭದಲ್ಲಿ ಉತ್ತಮವಾಗಿ ಆಡಿದ್ದೆವು. ಎರಡು ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದ್ದೇವೆ. ಆದರೆ ನಾವು ಧನಾತ್ಮಕವಾಗಿರಲು ಬಯಸುತ್ತೇವೆ. ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ" ಎಂದಿದ್ದಾರೆ.

ರೆಸ್ಟ್​ ನಂತರ ತಂಡಕ್ಕೆ ಮರಳಿದ ಗ್ರೇಸ್ ಹ್ಯಾರಿಸ್:ಡೆಲ್ಲಿ ಎದುರಿನ ಕೊನೆಯ ಪಂದ್ಯದಲ್ಲಿ ಗ್ರೇಸ್ ಹ್ಯಾರಿಸ್​ಗೆ ವಿಶ್ರಾಂತಿ ನೀಡಲಾಗಿತ್ತು. ಅಲಿಸ್ಸಾ ಹೇಲಿ ಕಳೆದ ಪಂದ್ಯದ ಟಾಸ್​ ವೇಳೆ ಲೀಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಗ್ರೇಸ್ ಹ್ಯಾರಿಸ್ ವಿಶ್ರಾಂತಿ ನೀಡಿರುವುದಾಗಿ ತಿಳಿಸಿದ್ದರು. ಅದರಂತೆ ಮಹತ್ವದ ಎಲಿಮಿನೇಟರ್​ ಪಂದ್ಯಕ್ಕೆ ಮತ್ತೆ ಕರೆತಂದಿದ್ದಾರೆ.

ಎಂಐ-ಯುಪಿ ಮುಖಾಮುಖಿ: ಲೀಗ್​ ಹಂತದಲ್ಲಿ ಎರಡು ಬಾರಿ ತಂಡಗಳು ಮುಖಾಮುಖಿಯಾಗಿದ್ದು, ಒಂದು ಸೋಲು-ಒಂದು ಗೆಲುವು ಕಂಡಿದೆ. ಮಾರ್ಚ್​ 12ರಂದು ಬ್ರಬೋರ್ನ್ ಸ್ಟೇಡಿಯಂ ನಡೆದ ಸೆಣಸಾಟದಲ್ಲಿ ಯುಪಿ ವಾರಿಯರ್ಸ್​ ತಂಡ ನೀಡಿದ್ದ 159 ರನ್​ನ ಸಾಧಾರಣ ಗುರಿಯನ್ನು ಮುಂಬೈ ಇಂಡಿಯನ್ಸ್​ 17.3 ಓವರ್​ನಲ್ಲಿ 2 ವಿಕೆಟ್​ ನಷ್ಟದಲ್ಲಿ ಪೂರೈಸಿ ಗೆಲುವಿನ ನಗೆ ಬೀರಿತ್ತು.

ಮಾರ್ಚ್​ 18ರಂದು ಇಂದು ನಡೆಯುವ ಕ್ರಿಡಾಂಗಣದಲ್ಲಿ ನಡೆದ ಎರಡನೇ ಮುಖಾಮುಖಿಯಲ್ಲಿ ಟಾಸ್​ ಗೆದ್ದ ಯುಪಿ ವಾರಿಯರ್ಸ್​ ಎಂಐಗೆ ಬ್ಯಾಟಿಂಗ್​ ಆಹ್ವಾನ ನೀಡಿತ್ತು. ಮೊದಲು ಬ್ಯಾಟ್​ ಮಾಡಿದ ಮುಂಬೈ 20 ಓವರ್​ನಲ್ಲಿ 127ಕ್ಕೆ ಸರ್ವಪತನ ಕಂಡಿತ್ತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಬ್ಯಾಟಿಂಗ್​ ವೈಫಲ್ಯ ಎದುರಿಸಿದ್ದರು. ಈ ಗುರಿಯನ್ನು ಯುಪಿ ವಾರಿಯರ್ಸ್​ 3 ಬಾಲ್​ ಬಾಕಿ ಇರುವಂತೆ 5 ವಿಕೆಟ್​ಗಳಿಂದ ಗೆದ್ದುಕೊಂಡಿತ್ತು. ಮುಂಬೈ ಇಂಡಿಯನ್ಸ್​ಗೆ ಲೀಗ್​ನ ಮೊದಲ ಸೋಲು ಇದಾಗಿತ್ತು.

ಇದನ್ನೂ ಓದಿ:WPL: ಇಂದು ಸಂಜೆ ಮುಂಬೈ-ಯುಪಿ ಎಲಿಮಿನೇಟರ್​ ಫೈಟ್​: ಯಾರಿಗೆ ಫೈನಲ್ ಅವಕಾಶ?

Last Updated : Mar 24, 2023, 7:49 PM IST

ABOUT THE AUTHOR

...view details