ಮುಂಬೈ:ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಈ ನಡುವೆ ಮುಂದಿನ ವರ್ಷ ಕೊನೆಯ ಪಂದ್ಯವನ್ನು ಚೆನ್ನೈನಲ್ಲೇ ಆಡುವುದಾಗಿಯೂ ತಿಳಿಸಿದ್ದಾರೆ.
ಇಂಡಿಯಾ ಸಿಮೆಂಟ್ನ 75ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಅವರ ಐಪಿಎಲ್ ಕೊನೆಯ ಪಂದ್ಯದ ಕುರಿತಂತೆಯೂ ಹೇಳಿದ್ದಾರೆ.
'ನನಗೆ ಸಿನಿಮಾ ಮಾಡುವ ಆಸಕ್ತಿ ಇಲ್ಲ. ಬಾಲಿವುಡ್ನ ನಟನೆ ನಿಜವಾಗಿಯೂ ನನ್ನ ಕ್ಷೇತ್ರವೇ ಅಲ್ಲ. ಜಾಹೀರಾತುಗಳನ್ನು ಮಾಡಲು ನನಗೆ ಹೆಚ್ಚು ಖುಷಿಯಾಗುತ್ತದೆ. ಆದರೆ ಸಿನಿಮಾ ಎಂದಾಗ ನಿಜವಾಗಿಯೂ ನನಗೆ ಕಷ್ಟ, ಇದು ಏನಿದ್ದರೂ ಸಿನಿಮಾ ಸ್ಟಾರ್ಗಳಿಗೆ ಸರಿಯಷ್ಟೇ. ಏಕೆಂದರೆ ಅವರು ಮಾತ್ರ ಅದಕ್ಕೆ ಅರ್ಹರು. ನಾನು ಕ್ರಿಕೆಟ್ನೊಂದಿಗೆ ಸಂಬಂಧ ಹೊಂದಿದ್ದು, ಜಾಹೀರಾತುಗಳಲ್ಲಿ ಸುಲಭವಾಗಿ ನಟಿಸಬಲ್ಲೆ' ಎಂದರು.
ಇತ್ತೀಚೆಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ‘ಫ್ರೆಂಡ್ಶಿಪ್’ ಎಂಬ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು. ಈ ಹಿಂದೆ ಅಜಯ್ ಜಡೇಜಾ, ಬ್ರೆಟ್ಲೀ ಮತ್ತು ವಿನೋದ್ ಕಾಂಬ್ಲಿ ಹಾಗೂ ಶ್ರೀಶಾಂತ್ ಸಿನಿಮಾಗಳಲ್ಲಿ ನಟಿಸಿದ್ದರು.