ಕರ್ನಾಟಕ

karnataka

ETV Bharat / sports

ಯುವರಾಜ್​ ಸಿಂಗ್ ಜೊತೆಗೆ ವಿಶೇಷ ದಾಖಲೆ ಹಂಚಿಕೊಂಡ ಮಿಚೆಲ್ ಮಾರ್ಷ್​, ಹೆಜಲ್​ವುಡ್!

ದುಬೈನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಕಿವೀಸ್ ನೀಡಿದ್ದ 173 ರನ್​ಗಳ ಗುರಿಯನ್ನು ಇನ್ನು 7 ಎಸೆತಗಳಿರುವಂತೆ ಚೇಸ್​ ಮಾಡಿ ಆಸ್ಟ್ರೇಲಿಯಾ ತಂಡ ತಲುಪಿ ಟಿ20 ವಿಶ್ವಕಪ್​ ಜಯಿಸಿತು. ಈ ಮೂಲಕ ತನ್ನ ಖಾತೆಗೆ 6 ನೇ ವಿಶ್ವಕಪ್​ ಸೇರಿಸಿಕೊಂಡಿತು.

Mitchell Marsh and Josh Hazlewood
Mitchell Marsh and Josh Hazlewood

By

Published : Nov 15, 2021, 5:21 AM IST

ದುಬೈ: ನ್ಯೂಜಿಲ್ಯಾಂಡ್ ಮಣಿಸಿ ಚೊಚ್ಚಲ ಟಿ20 ವಿಶ್ವಕಪ್( T20I World cup) ಎತ್ತಿ ಹಿಡಿಯುತ್ತಿದ್ದಂತೆ ಆಸ್ಟ್ರೇಲಿಯಾ(Australia) ತಂಡದ ವೇಗಿ ಜೋಶ್ ಹೇಜಲ್​ವುಡ್​( josh hazlewood) ಮತ್ತು ಆಲ್​ರೌಂಡರ್​ ಮಿಚೆಲ್ ಮಾರ್ಷ್​(Mitchell Marsh) ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ.

ದುಬೈನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಕಿವೀಸ್ ನೀಡಿದ್ದ 173 ರನ್​ಗಳ ಗುರಿಯನ್ನು ಇನ್ನು 7 ಎಸೆತಗಳಿರುವಂತೆ ಚೇಸ್​ ಮಾಡಿ ಆಸ್ಟ್ರೇಲಿಯಾ ತಂಡ ತಲುಪಿ ಟಿ20 ವಿಶ್ವಕಪ್​ ಜಯಿಸಿತು. ಈ ಮೂಲಕ ತನ್ನ ಖಾತೆಗೆ 6 ನೇ ವಿಶ್ವಕಪ್​ ಸೇರಿಸಿಕೊಂಡಿತು.

ಇದೇ ಸಂದರ್ಭದಲ್ಲಿ ಹೇಜಲ್​ವುಡ್​ ಮತ್ತು ಮಿಚೆಲ್ ಮಾರ್ಷ್ ಕೂಡ ಐಸಿಸಿಯ ಅಂಡರ್​ 19 ವಿಶ್ವಕಪ್(ICC U19 world cup), ಏಕದಿನ ವಿಶ್ವಕಪ್ ಮತ್ತು ಟಿ20 ವಿಶ್ವಕಪ್​ಗಳನ್ನು ಗೆದ್ದ ಸಾಧನೆಗೆ ಪಾತ್ರರಾದರು. ಇವರಿಬ್ಬರು 2010ರಲ್ಲಿ ಅಂಡರ್​ 19 ವಿಶ್ವಕಪ್​ ಗೆದ್ದ ಆಸೀಸ್ ತಂಡದಲ್ಲಿದ್ದರು. ಈ ತಂಡವನ್ನು ಮಾರ್ಷ್​ ಮುನ್ನಡೆಸಿದ್ದ ಮತ್ತೊಂದು ವಿಶೇಷ. ಇನ್ನು 2015ರಲ್ಲಿ ಮೈಕಲ್ ಕ್ಲಾರ್ಕ್ ​ನೇತೃತ್ವದಲ್ಲಿ ಗೆದ್ದ ಆಸೀಸ್​ ತಂಡದಲ್ಲೂ ಈ ಇಬ್ಬರಿದ್ದರು. ಇದೀಗ ಆಸ್ಟ್ರೇಲಿಯಾ ಗೆದ್ದ ಚೊಚ್ಚಲ ಟಿ20 ವಿಶ್ವಕಪ್​ ತಂಡ ಭಾಗವಾಗುವ ಮೂಲಕ ಭಾರತದ ಯುವರಾಜ್​ ಸಿಂಗ್ ನಂತರ ಮೂರು ವಿಶ್ವಕಪ್​ ಗೆದ್ದ ಆಟಗಾರರು ಎನಿಸಿಕೊಂಡಿದ್ದಾರೆ.

ಇಲ್ಲಿಯವರೆಗೆ ಭಾರತದ ಸ್ಟಾರ್ ಆಲ್​ರೌಂಡರ್​ ಮಾತ್ರ ಐಸಿಸಿಯ ಮೂರು ವಿಶ್ವಕಪ್​ ಪಂದ್ಯ ಗೆದ್ದ ಆಟಗಾರನಾಗಿದ್ದರು. ಅವರು 2000ದಲ್ಲಿ ಅಂಡರ್​ 19, 2007ರಲ್ಲಿ ಟಿ20 ಮತ್ತು 2011ರಲ್ಲಿ ಏಕದಿನ ವಿಶ್ವಕಪ್​ ಗೆದ್ದ ಟೀಮ್ ಇಂಡಿಯಾ ಭಾಗವಾಗಿದ್ದರು.

ಇದನ್ನೂ ಓದಿ:Zero to Hero: 'ಬಹುಪಾಲು ಆಸ್ಟ್ರೇಲಿಯಾ ಜನರು ನನ್ನನ್ನು ಧ್ವೇಷಿಸುತ್ತಾರೆ' ಎಂದಿದ್ದ ಮಾರ್ಷ್​ ಇಂದು ಆ ದೇಶಕ್ಕೆ ಹೀರೋ

ABOUT THE AUTHOR

...view details