ಕರ್ನಾಟಕ

karnataka

ETV Bharat / sports

ಬ್ಯಾಟ್‌ನಲ್ಲಿ ಧೋನಿ ಹೆಸರು ಬರೆದು ಅರ್ಧಶತಕ ಸಿಡಿಸಿ ಯುಪಿ ಗೆಲುವಿಗೆ ಕಾಣಿಕೆ ನೀಡಿದ ಕಿರಣ್‌! - ETV Bharath Kannada news

ಯುಪಿ ವಾರಿಯರ್ಸ್​​ ತಂಡದ ಆಟಗಾರ್ತಿ ಕಿರಣ್​ ಅವರ ಬ್ಯಾಟ್​ಗೆ ಸ್ಪಾನ್ಸರ್​ ಇರಲಿಲ್ಲ. ಹೀಗಾಗಿ 'ಎಂಎಸ್​ಡಿ 07' ಎಂದು ತಾವೇ ಬರೆದುಕೊಂಡು ಬ್ಯಾಟ್​ ಮಾಡಿ ಗಮನ ಸೆಳೆದರು.

kiran Prabhu navgire
ಕಿರಣ್ ನವಗಿರೆ

By

Published : Mar 6, 2023, 1:36 PM IST

ಮುಂಬೈ:ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಯುಪಿ ವಾರಿಯರ್ಸ್ ತನ್ನ ಮೊದಲ ಪಂದ್ಯದಲ್ಲೇ ಶುಭಾರಂಭ ಮಾಡಿದರೆ, ಗುಜರಾತ್​ ಜೈಂಟ್ಸ್​ ಎರಡನೇ ಪಂದ್ಯದಲ್ಲಿ ಮತ್ತೆ ಎಡವಿತು. ಬೆತ್ ಮೂನಿ ಅನುಪಸ್ಥಿತಿಯಲ್ಲಿ ಸ್ನೇಹ ರಾಣ ತಂಡ ಮುನ್ನಡೆಸಿದರು. ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡಿದ್ದರು. ಬೃಹತ್​ ರನ್ ಬೆನ್ನಟ್ಟುವಲ್ಲಿ ವಿಫಲವಾದ ಕಾರಣ ಈ ಸಲ ಬ್ಯಾಟಿಂಗ್​ ಮಾಡಿ 170 ರನ್​ ಕಲೆಹಾಕಿದರು. ಆದರೆ ಯುಪಿ ವಾರಿಯರ್ಸ್​ ಆಟಗಾರ್ತಿ ಗ್ರೇಸ್ ಹ್ಯಾರಿಸ್​ ಅವರ ಬ್ಯಾಟಿಂಗ್​ ಅಬ್ಬರಕ್ಕೆ ಗುಜರಾತ್​ ಮಣಿಯಲೇ ಬೇಕಾಯಿತು.

ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದ ಗುಜರಾತ್​ ಪುಟಿದೇಳುವ ಉತ್ಸಾಹದಿಂದ ಕಣಕ್ಕಿಳಿದು ಬಿರುಸಿನ ಬ್ಯಾಟಿಂಗ್​ ಮಾಡಿ 169 ರನ್ ಪೇರಿಸಿತು. ಕಿತ್ತಳೆ ತಂಡದ ಪರ ಹರ್ಲಿನ್​ ಡಿಯೋಲ್​ 46 ರನ್​ ಗಳಿಸಿ ತಂಡ 150+ ರನ್​ ಗಳಿಸುವಲ್ಲಿ ಉತ್ತಮ ಕೊಡುಗೆ ನೀಡಿದರು. 170 ರನ್​ ಗುರಿ ಬೆನ್ನತ್ತಿದ್ದ ಯುಪಿಗೆ ಕಿರಣ್ ನವಗಿರೆ ಮತ್ತು ಗ್ರೇಸ್ ಹ್ಯಾರಿಸ್​ ಅವರ ಅರ್ಧಶತಕ ಶಕ್ತಿ ತುಂಬಿತು.

15 ಓವರ್​ಗೆ 100 ರನ್​ ಗಳಿಸಿದ್ದ ಯುಪಿ ವಾರಿಯರ್ಸ್​ಗೆ ಗೆಲುವು ಕಬ್ಬಿಣ ಕಡಲೆಯೇ ಆಗಿತ್ತು. 30 ಎಸೆತಗಳಲ್ಲಿ 70 ರನ್​ ಅವಶ್ಯಕತೆ ಒಂದೆಡೆಯಾದರೆ, 6 ವಿಕೆಟ್​ ನಷ್ಟ ಮತ್ತೊಂದೆಡೆ ತಲೆನೋವು ತಂದಿತ್ತು. ಈ ಒತ್ತಡದ ನಡುವೆ ಗ್ರೇಸ್ ಹ್ಯಾರಿಸ್​ ಬಿರುಸಿನ ಬ್ಯಾಟಿಂಗ್​ ಮಾಡಿದರು. ಕೇವಲ 26 ಬಾಲ್​ ಎದುರಿಸಿದ ಅವರು 3 ಸಿಕ್ಸ್ ಮತ್ತು 7 ಬೌಂಡರಿಗಳಿಂದ 59 ರನ್​ ಚಚ್ಚಿದರು. ಇವರ ಅಮೋಘ ಆಟದಿಂದ ಯುಪಿ ಗೆಲುವು ಸಾಧಿಸಿತು.

ಆರಂಭದಲ್ಲಿ ಬಲ ತುಂಬಿದ ಕಿರಣ್​:170 ರನ್​ ಗುರಿ ಚೇಸ್ ಮಾಡುತ್ತಿದ್ದ ವಾರಿಯರ್ಸ್​ಗೆ ಕಿಮ್ ಗಾರ್ತ್ ಆರಂಭಿಕ ಆಘಾತ ನೀಡಿದರು. ಮೂರನೇ ಓವರ್​ ಮಾಡಿದ ಕಿಮ್ ಮೂರು ವಿಕೆಟ್​ಗಳನ್ನು ಒಮ್ಮೆಗೆ ಪಡೆದರು. ಈ ವೇಳೆ ತಂಡಕ್ಕೆ ಆಧಾರವಾಗಿ ನಿಂತವರು ಕಿರಣ್ ನವಗಿರೆ. ತಾಳ್ಮೆಯಿಂದ ಬ್ಯಾಟ್​ ಮಾಡಿದ ಕಿರಣ್​ ಎದುರಾಳಿ ಬೌಲರ್​ಗಳನ್ನು ಚಾಕಚಕ್ಯತೆಯಿಂದ ಎದುರಿಸಿ 53 ರನ್​ ಸಂಪಾದಿಸಿದರು. ಇವರ ಇನ್ನಿಂಗ್ಸ್‌ನಲ್ಲಿ​ 2 ಸಿಕ್ಸ್​ ಮತ್ತು 5 ಬೌಂಡರಿಗಳಿದ್ದವು.

ಗಮನ ಸೆಳೆದ ಕಿರಣ್ ಬ್ಯಾಟ್​:ತಂಡಕ್ಕೆ ಆಸರೆಯಾಗಿ ನಿಂತು ಬ್ಯಾಟ್​ ಮಾಡಿದ ಕಿರಣ್​ ನವಗಿರೆ ಅವರ ಬ್ಯಾಟ್​ನಲ್ಲಿ "ಎಂಎಸ್​ಡಿ07" ಎಂದು ಬರೆದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಸ್ಟಿಕ್ಕರ್‌ರಹಿತ ಬ್ಯಾಟ್​ನಲ್ಲಿ ಆಡುತ್ತಿರುವ ಕಿರಣ್​​, ಹಿಡಿಕೆಯ ಕೆಳಭಾಗದ ಬ್ಯಾಟ್​ನ ಹಿಂಬದಿಯಲ್ಲಿ ಮಾರ್ಕರ್​ನಲ್ಲಿ 'MSD07' ಎಂದು ಬರೆದುಕೊಂಡಿರುವುದು ಗೋಚರಿಸುತ್ತದೆ. ಧೋನಿ ಅವರ ಮೇಲಿನ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ ಅವರ ಅಮೂಲ್ಯ 50 ರನ್​ ಕೊಡುಗೆಗೂ ಹೊಗಳಿಕೆಗಳು ಬರುತ್ತಿವೆ.

ಮಹಾರಾಷ್ಟ್ರ ಮೂಲದ 28 ವರ್ಷದ ಕಿರಣ್ 2022 ಸೆಪ್ಟೆಂಬರ್ 10 ರಂದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಕಿರಣ್ ಮೊದಲ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಿದ್ದರು. ಆರು ಟಿ20ಗಳಲ್ಲಿ ನಾಲ್ಕು ಬಾರಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕರೂ ಮೋಡಿ ಮಾಡಿರಲಿಲ್ಲ. ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 17 ರನ್ ಗಳಿಸಿದ್ದಾರೆ. 10 ರನ್​ ಅವರ ಗರಿಷ್ಠ ಸ್ಕೋರ್ ಆಗಿದೆ. ಆದರೆ ಡಬ್ಲ್ಯುಪಿಎಲ್ ಮೊದಲ ಪಂದ್ಯದಲ್ಲೇ ತಮ್ಮ ಬ್ಯಾಟಿಂಗ್​ ಕೌಶಲ ತೋರಿಸಿದ್ದಾರೆ.

ಇದನ್ನೂ ಓದಿ:ಯುಪಿಗೆ ಜಯ ತಂದಿಟ್ಟ ಗ್ರೇಸ್ ಹ್ಯಾರಿಸ್‌ ಅದ್ಭುತ ಆಟ; ಗುಜರಾತ್‌ಗೆ 2ನೇ ಸೋಲು

ABOUT THE AUTHOR

...view details