ಪಾರ್ಲ್(ದ.ಆಫ್ರಿಕಾ) : ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 9 ರನ್ಗಳಿಸುತ್ತಿದ್ದಂತೆ ಏಕದಿನ ಕ್ರಿಕೆಟ್ನಲ್ಲಿ ವಿದೇಶದಲ್ಲಿ ಹೆಚ್ಚು ರನ್ಗಳಿಸಿದ ಬ್ಯಾಟರ್ ಎಂಬ ವಿಶೇಷ ದಾಖಲೆಗೆ ಪಾತ್ರರಾದರು.
ನಾಯಕತ್ವ ಕಳೆದುಕೊಂಡ ನಂತರ ಮೊದಲ ಪಂದ್ಯವನ್ನಾಡುತ್ತಿರುವ ಕೊಹ್ಲಿ 9 ರನ್ಗಳಿಸಿದ್ದ ವೇಳೆ ವಿದೇಶದಲ್ಲಿ ಗರಿಷ್ಠ ರನ್ಗಳಿಸಿದ ಭಾರತದ ಬ್ಯಾಟರ್ ಎನಿಸಿಕೊಂಡರು. ಪ್ರಸ್ತುತ ಏಕದಿನ ಕ್ರಿಕೆಟ್ನಲ್ಲಿ 12185 ರನ್ಗಳಿಸಿದ್ದು, ಇದರಲ್ಲಿ ವಿದೇಶದ ಏಕದಿನ ಸರಣಿಯಲ್ಲಿ 5070 ರನ್ಗಳಿಸಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ 5065 ರನ್ಗಳಿಸಿ ಅಗ್ರಸ್ಥಾನದಲ್ಲಿದ್ದರು. ಇವರಿಬ್ಬರನ್ನು ಬಿಟ್ಟರೆ ಮಾಜಿ ನಾಯಕ ಎಂಎಸ್ ಧೋನಿ 3ನೇ ಸ್ಥಾನದಲ್ಲಿದ್ದು, 4520ರನ್ಗಳಿಸಿದ್ದಾರೆ. ರಾಹುಲ್ ದ್ರಾವಿಡ್(3998) ಮತ್ತು ಗಂಗೂಲಿ(3468) ರನ್ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.