ಕರ್ನಾಟಕ

karnataka

ETV Bharat / sports

ಕೆಎಲ್ ರಾಹುಲ್ ಭಾರತ ಟೆಸ್ಟ್ ತಂಡದ ನಾಯಕನಾಗಬೇಕು : ಮಾಜಿ ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ

ಕೊಹ್ಲಿ ಟೆಸ್ಟ್​ ತಂಡದ ನಾಯಕತ್ವವನ್ನು ತ್ಯಜಿಸುತ್ತಿದ್ದಂತೆ ಹಲವಾರು ಕ್ರಿಕೆಟ್ ದಿಗ್ಗಜರು ತಮ್ಮದೇ ಆದ ಅಭಿಪ್ರಾಯಗಳೊಂದಿಗೆ ಕೆಲವು ಕ್ರಿಕೆಟಿಗರ ಹೆಸರನ್ನು ನಾಯಕತ್ವಕ್ಕೆ ಸೂಚಿಸುತ್ತಿದ್ದಾರೆ. ಇದೀಗ ಅವರ ಜಾಗಕ್ಕೆ ಸಂಜಯ್ ಜಗದಾಳೆ ಕೂಡ ಸೇರಿಕೊಂಡಿದ್ದಾರೆ. ಅವರು ಕನ್ನಡಿಗನ ಪರ ಬ್ಯಾಟಿಂಗ್ ಮಾಡಿದ್ದಾರೆ..

KL Rahul should be made Test skipper
ಕೆಎಲ್ ರಾಹುಲ್

By

Published : Jan 17, 2022, 3:41 PM IST

ಇಂದೋರ್ ​:ಆರಂಭಿಕ ಬ್ಯಾಟರ್​ ಕೆ ಎಲ್ ರಾಹುಲ್​ ಅವರನ್ನು ಭಾರತ ಟೆಸ್ಟ್​ ತಂಡದ ನಾಯಕನನ್ನಾಗಿ ನೇಮಿಸಬೇಕೆಂದು ಬಿಸಿಸಿಐ ಮಾಜಿ ಕಾರ್ಯದರ್ಶಿ ಸಂಜಯ್ ಜಗದಾಳೆ ಅಭಿಪ್ರಾಯಪಟ್ಟಿದ್ದಾರೆ. ರಾಹುಲ್​ಗೆ 29 ವರ್ಷಗಳಾಗಿವೆ. ಅವರು ದೀರ್ಘಕಾಲದವರೆಗೆ ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸಬಲ್ಲರು ಎಂದು ಪ್ರತಿಪಾದಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ದ 3 ಪಂದ್ಯಗಳ ಸರಣಿಯನ್ನ 1-2ರಲ್ಲಿ ಕಳೆದುಕೊಂಡ ನಂತರ ವಿರಾಟ್ ಕೊಹ್ಲಿ ಟೆಸ್ಟ್​ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. 2014ರಲ್ಲಿ ಧೋನಿ ನಾಯಕತ್ವವನ್ನು ತ್ಯಜಿಸಿದ ನಂತರ ಭಾರತ ತಂಡದ ಚುಕ್ಕಾಣಿ ಹಿಡಿದಿದ್ದ ದೆಹಲಿಯ ಆಟಗಾರ 68 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ 40ರಲ್ಲಿ ಗೆಲುವು ತಂದು ಕೊಡುವ ಮೂಲಕ ಭಾರತದ ಯಶಸ್ವಿ ನಾಯಕನಾಗಿ ತಮ್ಮ ಮುಂದಾಳತ್ವಕ್ಕೆ ತೆರೆ ಎಳೆದಿದ್ದಾರೆ.

ಕೊಹ್ಲಿ ಟೆಸ್ಟ್​ ತಂಡದ ನಾಯಕತ್ವವನ್ನು ತ್ಯಜಿಸುತ್ತಿದ್ದಂತೆ ಹಲವಾರು ಕ್ರಿಕೆಟ್ ದಿಗ್ಗಜರು ತಮ್ಮದೇ ಆದ ಅಭಿಪ್ರಾಯಗಳೊಂದಿಗೆ ಕೆಲವು ಕ್ರಿಕೆಟಿಗರ ಹೆಸರನ್ನು ನಾಯಕತ್ವಕ್ಕೆ ಸೂಚಿಸುತ್ತಿದ್ದಾರೆ. ಇದೀಗ ಅವರ ಜಾಗಕ್ಕೆ ಸಂಜಯ್ ಜಗದಾಳೆ ಕೂಡ ಸೇರಿಕೊಂಡಿದ್ದಾರೆ. ಅವರು ಕನ್ನಡಿಗನ ಪರ ಬ್ಯಾಟಿಂಗ್ ಮಾಡಿದ್ದಾರೆ.

"ದೀರ್ಘಾವಧಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತಹ ಆಟಗಾರ ಭಾರತದ ಮುಂದಿನ ನಾಯಕನಾಗಬೇಕೆಂದು ನಾನು ಭಾವಿಸುತ್ತೇನೆ. ಆ ಪ್ರಕಾರ ನಾನು ಟೆಸ್ಟ್ ತಂಡದ ನಾಯಕತ್ವಕ್ಕೆ ಕೆ ಎಲ್ ರಾಹುಲ್ ಹೆಸರನ್ನು ಶಿಫಾರಸು ಮಾಡುತ್ತೇನೆ. ಅವರು ಮೂರು ಮಾದರಿಯಲ್ಲೂ ಉತ್ತಮ ಪ್ರದರ್ಶನ ತೋರುವ ಆಟಗಾರ" ಎಂದು ಮಧ್ಯಪ್ರದೇಶದ ಪದಾಧಿಕಾರಿಯೂ ಆಗಿರುವ ಮಾಜಿ ಕ್ರಿಕೆಟಿಗ ಜಗದಾಳೆ ಪಿಟಿಐಗೆ ಹೇಳಿದ್ದಾರೆ.

ಇದನ್ನೂ ಓದಿ:ರೋಹಿತ್, ರಾಹುಲ್​, ಬುಮ್ರಾ ಅಲ್ಲ, ಕೊಹ್ಲಿ ಸ್ಥಾನಕ್ಕೆ ಯುವ ಆಟಗಾರನ ಹೆಸರು ಸೂಚಿಸಿದ ಗವಾಸ್ಕರ್

ABOUT THE AUTHOR

...view details