ಲಾಹೋರ್: ತಮ್ಮ ಸಹೋದರ ಉಮರ್ ಅಕ್ಮಲ್ಗೆ ಪುನಶ್ಚೇತನಕ್ಕೆ ಅವಕಾಶ ಮಾಡಿಕೊಟ್ಟರೆ, ಅವನು ಕಟ್ಟಬೇಕಿರುವ ದಂಡದ ಮೊತ್ತವನ್ನು ನನ್ನ ಪಿಎಸ್‌ಎಲ್ ವೇತನದಲ್ಲಿ ನೀಡುತ್ತೇನೆ ಎಂದು ಪಾಕಿಸ್ತಾನದ ತಂಡದ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕಮ್ರನ್ ಅಕ್ಮಲ್ ಪಿಸಿಬಿಗೆ ಮನವಿ ಮಾಡಿದ್ದಾರೆ.
ಪಿಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಉಮರ್ ಅಕ್ಮಲ್ರನ್ನು ಫೆಬ್ರವರಿ 2020ರಂದು ಪಿಸಿಬಿ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿಷೇಧಿಸಿತ್ತು. ಇದೀಗ ಅವರ ನಿಷೇಧದ ಅವಧಿ ಮುಗಿದಿದ್ದು, ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲು ಅವರು ಅರ್ಹರಾಗಿದ್ದಾರೆ. ಆದರೆ ಅವರು ಪಿಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆ ಅಡಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಬೇಕಾದರೆ 42,50,000 ಪಾಕಿಸ್ತಾನ ರೂಪಾಯಿಗಳನ್ನು ತುಂಬಬೇಕಿದೆ.
ಆದರೆ ಉಮರ್ ತಾವೂ ತಂಡವನ್ನು ಕಟ್ಟಲು ಒಪ್ಪಿಗೆಯಿದೆ. ಆದರೆ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಿ ಎಂದು ಪಿಸಿಬಿಗೆ ಮನವಿ ಮಾಡಿದ್ದರು. ಇದೀಗ ಅವರ ಸಹೋದರ ಕಮ್ರನ್ ನೆರವಿಗೆ ಬಂದಿದ್ದು ತಾವು ದಂಡವನ್ನು ಕಟ್ಟಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.