ಮುಂಬೈ: ಜಯದೇವ್ ಉನಾದ್ಕಟ್ ಮತ್ತು ಮುಸ್ತಫಿಜುರ್ ರೆಹಮಾನ್ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ಗಳಲ್ಲಿ8 ವಿಕೆಟ್ ವಿಕೆಟ್ ಕಳೆದುಕೊಂಡು 147 ರನ್ಗಳಿಸಿದ್ದು, ಡೆಲ್ಲಿಗೆ 148ರನ್ಗಳ ಸಾಧಾರಣ ಗುರಿ ನೀಡಿದೆ.
ಟಾಸ್ ಗೆದ್ದ ರಾಜಸ್ಥಾನ್ ಫೀಲ್ಡಿಂಗ್ ಆಯ್ದುಕೊಂಡು ರಾಯಲ್ಸ್ ತಂಡದ ನಾಯಕ ಸಾಮ್ಸನ್ ಡೆಲ್ಲಿ ತಂಡಕ್ಕೆ ಬ್ಯಾಟಿಂಗ್ ಆಹ್ವಾನಿಸಿದರು. ಶ್ರೇಯಸ್ ಗೋಪಾಲ್ ಬದಲು ತಂಡ ಸೇರಿಕೊಂಡಿದ್ದ ಎಡಗೈ ವೇಗಿ ಜಯದೇವ್ ಉನಾದ್ಕಟ್ ತಮ್ಮ ಮೊದಲ ಮೂರು ಓವರ್ಗಳಲ್ಲಿ ಕ್ರಮವಾಗಿ ಪೃಥ್ವಿ ಶಾ(2), ಶಿಖರ್ ಧವನ್(9) ಮತ್ತು ಅಜಿಂಕ್ಯ ರಹಾನೆ(8) ವಿಕೆಟ್ ಪಡೆದು ಡೆಲ್ಲಿ ಆಘಾತ ನೀಡಿದರು.
ಇವರ ನಂತರ ದಾಳಿಗಿಳಿದ ಮುಸ್ತಫಿಜುರ್ ಖಾತೆ ತೆರೆಯುವ ಮುನ್ನವೇ ಮಾರ್ಕಸ್ ಸ್ಟೋಯ್ನಿಸ್ ವಿಕೆಟ್ ಪಡೆದರು. ತಂಡದ ಮೊತ್ತ 37ಕ್ಕೆ 4 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಬೀತಿಯಲ್ಲಿದ್ದ ಡೆಲ್ಲಿಗೆ ನಾಯಕ ಪಂತ್ ಮತ್ತು ಇಂದೇ ಪದಾರ್ಪಣೆ ಮಾಡಿದ ಲಲಿತ್ ಯಾದವ್ 5ನೇ ವಿಕೆಟ್ಗೆ 51 ರನ್ ಸೇರಿಸಿ ಚೇತರಿಕೆ ನೀಡಿದರು.