ಕರ್ನಾಟಕ

karnataka

By ANI

Published : Sep 8, 2023, 4:27 PM IST

ETV Bharat / sports

ICC Cricket World Cup: ಬಿಸಿಸಿಐನಿಂದ ಸಚಿನ್ ತೆಂಡೂಲ್ಕರ್​ಗೆ ಗೋಲ್ಡನ್ ಟಿಕೆಟ್ ಉಡುಗೊರೆ

ಈ ಬಾರಿಯ ವಿಶ್ವಕಪ್‌ ಪಂದ್ಯಾವಳಿಯನ್ನು ಸ್ಮರಣೀಯಗೊಳಿಸುವ ಸಲುವಾಗಿ ಬಿಸಿಸಿಐ ಗೋಲ್ಡನ್ ಟಿಕೆಟ್ ಉಡುಗೊರೆಯಾಗಿ ನೀಡುವ ಯೋಜನೆ ಹಾಕಿಕೊಂಡಿದೆ. ಅದರಂತೆ ಇಂದು ಸಚಿನ್ ತೆಂಡೂಲ್ಕರ್‌ ಅವರಿಗೆ ಗೋಲ್ಡನ್ ಟಿಕೆಟ್ ಉಡುಗೊರೆಯಾಗಿ ನೀಡಲಾಯಿತು.

Jay Shah presents 'Golden Ticket' to Sachin Tendulkar for ICC Cricket World Cup
Jay Shah presents 'Golden Ticket' to Sachin Tendulkar for ICC Cricket World Cup

ನವದೆಹಲಿ:ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಗೋಲ್ಡನ್ ಟಿಕೆಟ್ ನೀಡಿ ವಿಶ್ವಕಪ್​ಗೆ ಆಹ್ವಾನ ನೀಡಿದರು. ಗೋಲ್ಡನ್ ಟಿಕೆಟ್ ಫಾರ್ ಇಂಡಿಯಾ ಐಕಾನ್ಸ್ ಯೋಜನೆಯಡಿ ಭಾರತದ ಹಲವು ಸಾಧಕರಿಗೆ ಈ ರೀತಿಯ ವಿಶೇಷ ಆಹ್ವಾನವನ್ನು ನೀಡಲಾಗುತ್ತಿದೆ. ಬಿಸಿಸಿಐ ಕೆಲವು ದಿನಗಳ ಹಿಂದೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ಈ ಗೋಲ್ಡನ್ ಟಿಕೆಟ್ ನೀಡಿತ್ತು. ಇದೀಗ ಸಚಿನ್ ತೆಂಡೂಲ್ಕರ್ ಅವರಿಗೆ ನೀಡಲಾಗಿದೆ. ಗೋಲ್ಡನ್ ಟಿಕೆಟ್ ನೀಡುತ್ತಿರುವ ಫೋಟೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ನಲ್ಲಿ (ಎಕ್ಸ್) ಪೋಸ್ಟ್ ಮಾಡಿದೆ.

''ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಗೋಲ್ಡನ್ ಟಿಕೆಟ್​ನ ಭಾಗವಾಗಿ ಕಾರ್ಯದರ್ಶಿ ಜಯ್ ಶಾ ಅವರು ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರಿಗೆ ಗೋಲ್ಡನ್ ಟಿಕೆಟ್ ನೀಡಿದರು. ಕ್ರಿಕೆಟ್​ ಮತ್ತು ಪ್ರತಿ ಕ್ರೀಡಾಭಿಮಾನಿಗಳಲ್ಲಿ ಇದೊಂದು ಹೆಮ್ಮೆಯ ಸಂಗತಿ. ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್​ ಪಯಣ ಎಲ್ಲರಿಗೂ ಸ್ಫೂರ್ತಿ ನೀಡಿದೆ. ಇದೀಗ ಅವರು 2023ರ ಏಕದಿನ ವಿಶ್ವಕಪ್​ನ​ ಭಾಗವಾಗುತ್ತಾರೆ'' ಎಂದು ಹಂಚಿಕೊಂಡ ಟ್ವೀಟ್​ಗೆ ಶೀರ್ಷಿಕೆ ಕೂಡ ಬರೆಯಲಾಗಿದೆ.

ಅಕ್ಟೋಬರ್ 5 ರಿಂದ ಪುರುಷರ ಏಕದಿನ ವಿಶ್ವಕಪ್ 2023 ಆರಂಭಗೊಳ್ಳಲಿದ್ದು, ಅದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭರ್ಜರಿ ತಯಾರಿ ನಡೆಸುತ್ತಿದೆ. ಈ ಬಾರಿಯ ಪಂದ್ಯಾವಳಿಯನ್ನು ಸ್ಮರಣೀಯಗೊಳಿಸುವ ಸಲುವಾಗಿ ಬಿಸಿಸಿಐ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಅದರಲ್ಲಿ ಗೋಲ್ಡನ್ ಟಿಕೆಟ್ ಫಾರ್ ಇಂಡಿಯಾ ಐಕಾನ್ಸ್ ಯೋಜನೆ ಒಂದಾಗಿದೆ. ಹತ್ತು ತಂಡಗಳು ಪಾಲ್ಗೊಳ್ಳಲಿದ್ದು, ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ 10 ಸ್ಥಳಗಳಲ್ಲಿ ಈ ಏಕದಿನ ವಿಶ್ವಕಪ್ ನಡೆಯಲಿದೆ. 46 ದಿನಗಳಲ್ಲಿ 48 ಪಂದ್ಯಗಳು ಮೈದಾನದಲ್ಲಿ ಕಾದಾಟ ನಡೆಸಲಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭಿಕ ಮತ್ತು ಫೈನಲ್ ಪಂದ್ಯ ನಡೆಯಲಿದೆ.

2011ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿರುವ ಸಚಿನ್ ತೆಂಡೂಲ್ಕರ್ ಏಕದಿನ ಅಂತಾರಾಷ್ಟ್ರೀಯ ಸ್ವರೂಪದಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. 463 ಪಂದ್ಯಗಳನ್ನು ಆಡಿರುವ ಅವರು 18,426 ರನ್ ಗಳಿಸಿದ್ದಾರೆ. ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನೂ ಅವರೇ ಹೊಂದಿದ್ದಾರೆ. ಆರು ವಿಶ್ವಕಪ್‌ಗಳಲ್ಲಿ 2,278 ರನ್‌ಗಳನ್ನು ಸಿಡಿಸಿದ್ದಾರೆ. 6 ಶತಕ ಮತ್ತು 15 ಅರ್ಧಶತಕಗಳೊಂದಿಗೆ 56.95 ಸರಾಸರಿಯೊಂದಿಗೆ ಈ ರನ್‌ಗಳನ್ನು ಗಳಿಸಿದ್ದು 152 ಅವರ ಅತ್ಯುತ್ತಮ ಸ್ಕೋರ್ ಆಗಿದೆ.

ಇದನ್ನೂ ಓದಿ:ಭಾನುವಾರ ಭಾರತ, ಪಾಕ್ ಸೂಪರ್​ಫೋರ್​​ ಕದನ: ಪಂದ್ಯದ ಬಗ್ಗೆ ಮಾಜಿ ಕ್ರಿಕೆಟರ್​ಗಳು ಹೇಳಿದ್ದೇನು ಗೊತ್ತಾ?

ABOUT THE AUTHOR

...view details