ಕೇಪ್ಟೌನ್(ದಕ್ಷಿಣ ಆಫ್ರಿಕಾ): ವಿರಾಟ್ ಕೊಹ್ಲಿ ಟೀಂ ಇಂಡಿಯಾ ಟೆಸ್ಟ್ ನಾಯಕತ್ವ ಸ್ಥಾನ ತೊರೆಯುತ್ತಿದ್ದಂತೆ ನೂತನ ಕಪ್ತಾನ್ ರೇಸ್ನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಹೆಸರು ಮುಂಚೂಣಿಯಲ್ಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ನಾಳೆಯಿಂದ ಏಕದಿನ ಸರಣಿ ಆರಂಭಗೊಳ್ಳಲಿದ್ದು, ನಾಯಕನಾಗಿರುವ ಕೆ.ಎಲ್. ರಾಹುಲ್ ಸುದ್ದಿಗೋಷ್ಠಿಯಲ್ಲಿ ಭಾಗಿಯಾದರು. ಈ ವೇಳೆ ತಮ್ಮ ಅಭಿಪ್ರಾಯ ಹೊರಹಾಕಿರುವ ಅವರು, ಟೀಂ ಇಂಡಿಯಾ ಟೆಸ್ಟ್ ನಾಯಕನಾದರೆ ಅದೊಂದು ದೊಡ್ಡ ಜವಾಬ್ದಾರಿ ಹಾಗೂ ನನಗೆ ಸಿಗುವ ಗೌರವ ಎಂದಿದ್ದಾರೆ.
ಟೆಸ್ಟ್ ತಂಡದ ನಾಯಕನ ಹೆಸರು ಹೊರಬರುವವರೆಗೂ ನಾನು ಅದರ ಬಗ್ಗೆ ಯೋಚನೆ ಮಾಡಲ್ಲ. ನಿಸ್ಸಂಶಯವಾಗಿ ಜೋಹಾನ್ಸ್ಬರ್ಗ್ ಟೆಸ್ಟ್ನಲ್ಲಿ ತಂಡ ಮುನ್ನಡೆಸುವ ಅವಕಾಶ ಸಿಕ್ಕಿತು. ನಿಜಕ್ಕೂ ಅದು ವಿಶೇಷವಾಗಿತ್ತು. ಆದರೆ, ಫಲಿತಾಂಶ ನಮ್ಮ ಕೈಮೀರಿ ಹೋಯಿತು. ಇದೊಂದು ಉತ್ತಮ ಕಲಿಕೆಯಾಗಿದೆ. ಹೆಮ್ಮೆ ಪಡುವ ಸಂಗತಿಯೂ ಹೌದು ಎಂದರು.