ಕರ್ನಾಟಕ

karnataka

By

Published : Jan 17, 2022, 3:12 PM IST

ETV Bharat / sports

ತವರಿನಲ್ಲೇ ವೆಸ್ಟ್​ ಇಂಡೀಸ್​ಗೆ ಮುಖಭಂಗ;​ 2-1ರಲ್ಲಿ ಏಕದಿನ ಸರಣಿ ಗೆದ್ದ ಐರ್ಲೆಂಡ್​

ಜಮೈಕಾದ ಸಬಿನಾ ಪಾರ್ಕ್​​ ಕ್ರೀಡಾಂಗಣದಲ್ಲಿ ನಡೆದ ಸರಣಿ ನಿರ್ಣಯಿಸುವ ಕೊನೆಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಕೇವಲ 212 ರನ್​ಗಳಿಗೆ ಆಲೌಟ್​ ಆಗಿತ್ತು. ಜೇಸನ್​ ಹೋಲ್ಡರ್​ 44, ಶಾಯ್ ಹೋಪ್​ 53 ರನ್​, ಒಡೆನ್ ಸ್ಮಿತ್​ 20 ಹಾಗು ಅಕೀಲ್ ಹುಸೇನ್​ 23 ರನ್​ಗಳಿಸಿದ್ದರು.

Ireland Beat West Indies By 2 Wickets
Ireland Beat West Indies By 2 Wickets

ಜಮೈಕಾ: ವೆಸ್ಟ್ ಇಂಡೀಸ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ 2 ವಿಕೆಟ್​ಗಳ ರೋಚಕ ಜಯ ಸಾಧಿಸುವ ಮೂಲಕ ಐರ್ಲೆಂಡ್​ ಇದೇ ಮೊದಲ ಬಾರಿಗೆ ಐಸಿಸಿ ಸಂಪೂರ್ಣ ಸದಸ್ಯತ್ವ ಹೊಂದಿರುವ ರಾಷ್ಟ್ರದ ವಿರುದ್ಧ ಸರಣಿ ಜಯಿಸಿತು.

ಜಮೈಕಾದ ಸಬಿನಾ ಪಾರ್ಕ್​​ ಕ್ರೀಡಾಂಗಣದಲ್ಲಿ ನಡೆದ ಸರಣಿ ನಿರ್ಣಯಿಸುವ ಕೊನೆಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಕೇವಲ 212 ರನ್​ಗಳಿಗೆ ಆಲೌಟ್​ ಆಯಿತು. ಜೇಸನ್​ ಹೋಲ್ಡರ್​ 44, ಶಾಯ್ ಹೋಪ್​ 53 ರನ್​, ಒಡೆನ್ ಸ್ಮಿತ್​ 20 ಹಾಗು ಅಕೀಲ್ ಹುಸೇನ್​ 23 ರನ್​ಗಳಿಸಿದ್ದರು.

ನಾಯಕ ಕೀರನ್ ಪೊಲಾರ್ಡ್​(3), ಆಲ್​ರೌಂಡರ್ ರಾಸ್ಟನ್ ಚೇಸ್​(19), ಪೂರನ್​(2) ರಂತಹ ಪ್ರಮುಖ ಬ್ಯಾಟರ್​ಗಳೇ ಐರ್ಲೆಂಡ್​ ಬೌಲಿಂಗ್​ ಮುಂದೆ ರನ್​ಗಳಿಸಲಾಗದೆ ಪರದಾಡಿ ವಿಕೆಟ್ ಒಪ್ಪಿಸಿದರು.

ಐರ್ಲೆಂಡ್ ಪರ ಕ್ರೈಗ್​ ಯಂಗ್​ 43ಕ್ಕೆ3, ಆ್ಯಂಡಿ ಮೆಕ್​ಬ್ರೈನ್​ 28ಕ್ಕೆ4, ಕರ್ಟಿಸ್​ ಕ್ಯಾಂಫರ್​ ಮತ್ತು ಡಾಕ್ರೆಲ್ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು. 213 ರನ್ ಗುರಿ ಬೆನ್ನತ್ತಿದ ಐರ್ಲೆಂಡ್​ 44.5 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಐತಿಹಾಸಿಕ ಸರಣಿ ಜಯಿಸಿತು. ನಾಯಕ ಪಾಲ್​ ಸ್ಟಿರ್ಲಿಂಗ್​ 38 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್‌ಸಹಿತ 44, ಆ್ಯಂಡಿ ಮೆಕ್​ಬ್ರೈನ್​ 100 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 59, ಹ್ಯಾರಿ ಟೆಕ್ಟರ್​ 76 ಎಸೆತಗಳಲ್ಲಿ 52 ರನ್​ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ವಿಂಡೀಸ್ ಪರ ಚೇಸ್​ 44ಕ್ಕೆ 3, ಅಕೀಲ್ ಹುಸೇನ್ 59ಕ್ಕೆ 3, ಒಡೆನ್ ಸ್ಮಿತ್​ ಮತ್ತು ಅಲ್ಜಾರಿ ಜೋಸೆಫ್​ 35ಕ್ಕೆ1 ವಿಕೆಟ್ ಪಡೆದರು.

ಮೊದಲ ಪಂದ್ಯವನ್ನು ವಿಂಡೀಸ್​ ಗೆದ್ದರೆ, 2ನೇ ಮತ್ತು 3ನೇ ಪಂದ್ಯವನ್ನು ಐರ್ಲೆಂಡ್ ಗೆದ್ದು ಸರಣಿ ವಶಪಡಿಸಿಕೊಂಡಿತು.

ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 146 ರನ್​ಗಳ ಜಯ; 4-0 ಆ್ಯಶಸ್​ ಗೆದ್ದ ಕಮಿನ್ಸ್ ಪಡೆ

ABOUT THE AUTHOR

...view details