ಕರ್ನಾಟಕ

karnataka

ETV Bharat / sports

ಐಪಿಎಲ್​ 2023: ನಿರೀಕ್ಷೆ ತಲುಪುವುದರಲ್ಲಿ ವಿಫಲರಾದ ಬ್ಯಾಟರ್​ಗಳಿವರು.. - ETV Bharath Kannada news

ಐಪಿಎಲ್​ 16ನೇ ಆವೃತ್ತಿಯಲ್ಲಿ ಕೆಲ ಯುವ ಆಟಗಾರರು ಮಿಂಚುತ್ತಿದ್ದರೆ, ನಿರೀಕ್ಷಿತ ಪ್ಲೇಯರ್​ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ ಅಂತಹವರ ಪಟ್ಟಿ ಇಲ್ಲಿದೆ.

worst performing players in this ipl season
ಐಪಿಎಲ್​ 2023: ನಿರೀಕ್ಷೆ ತಲುಪುವನ್ನು ವಿಫಲರಾದ ಬ್ಯಾಟರ್​ಗಳಿವರು..

By

Published : May 1, 2023, 11:06 PM IST

Updated : May 2, 2023, 7:32 AM IST

ಇಂಡಿಯನ್ ಪ್ರೀಮಿಯರ್​ಲೀಗ್​ನಲ್ಲಿ ಪ್ರತೀ ವರ್ಷ ಹೊಸತಾರೆಗಳು ಹುಟ್ಟಿಕೊಳ್ಳುತ್ತಾರೆ. ಈ ವರ್ಷ ಭಾರತದ ಯುವ ಆಟಗಾರರು ಐಪಿಎಲ್​ನಲ್ಲಿ ಮಿಂಚುತ್ತಿದ್ದಾರೆ. ಆದರೆ ಕೆಲ ಆಟಗಾರರ ಮೇಲೆ ಆವೃತ್ತಿ ಆರಂಭವಾದಾಗ ಹೆಚ್ಚಿನ ನಿರೀಕ್ಷೆಗಳಿರುತ್ತವೆ ಆದರೆ, ಸೀಸನ್ ಅರ್ಧದಷ್ಟಾದರೂ ಅವರಿಂದ ಉತ್ತಮ ಬ್ಯಾಟಿಂಗ್​ ಪ್ರದರ್ಶನ ಬರುತ್ತಿಲ್ಲ. ಅಂತಹ ಕೆಲ ಆಟಗಾಗರ ಪಟ್ಟಿ ಇಲ್ಲಿದೆ..

ಆಂಡ್ರೆ ರಸೆಲ್: ಕೋಲ್ಕತ್ತಾ ನೈಟ್ ರೈಡರ್ಸ್‌ನ ಆಂಡ್ರೆ ರಸೆಲ್ ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ ಕೇವಲ 142 ರನ್ ಗಳಿಸಿದ್ದಾರೆ. ಇದುವರೆಗೆ ಮ್ಯಾಚ್​ ಫಿನಿಶರ್​ ಆಗಿ ಯಾವುದೇ ಪಂದ್ಯದಲ್ಲೂ ಕೊಡುಗೆ ನೀಡಿಲ್ಲ. ಬೌಲಿಂಗ್​ನಲ್ಲಿ 12 ಓವರ್ ಮಾಡಿದ್ದು 73 ರನ್ ಕೊಟ್ಟು ಆರು ವಿಕೆಟ್ ಪಡೆದಿದ್ದಾರೆ, ಈ ಬಾರಿಯ ಐಪಿಎಲ್​ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ರಸೆಲ್​ ವಿಫಲರಾಗಿದ್ದಾರೆ. ಇನ್ನು ಮೇಲಾದರೂ ಘರ್ಜಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಪೃಥ್ವಿ ಶಾ:ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಆರಂಭಿಕರಾಗಿರುವ ಶಾ ಈ ಬಾರಿ ಡೆಲ್ಲಿಯಲ್ಲಿ ಸೈಲೆಂಟ್ ಆಗಿದ್ದಾರೆ. ಅವರ ಬ್ಯಾಟ್​ ರನ್​ಗಳಿಸಲು ಪರದಾಡುತ್ತಿದೆ. ಈ ಆವೃತ್ತಿಯಲ್ಲಿ ಆರು ಪಂದ್ಯಗಳಲ್ಲಿ ಶಾ ಕೇವಲ 47 ರನ್ ಗಳಿಸಿದ್ದಾರೆ. ಆರಂಭಿಕರಾಗಿ ಬಂದ ಪೃಥ್ವಿ ಕೇವಲ 8 ಬೌಂಡರಿಗಳನ್ನು ಬಾರಿಸಿದರು. ಸ್ಟ್ರೈಕ್ ರೇಟ್ (117.50) ಕೂಡ ಉತ್ತಮವಾಗಿಲ್ಲ.

ಮೊಯಿನ್ ಅಲಿ: ರುತುರಾಜ್ ಮತ್ತು ದೇವನ್ ಕಾನ್ವೇ ಅವರ ಅಬ್ಬರದ ನಡುವೆ ಮೊಯಿನ್ ಮಂಕಾಗಿದ್ದಾರೆ. ಸೆಕೆಂಡ್ ಡೌನ್‌ನಲ್ಲಿ ಬ್ಯಾಟಿಂಗ್‌ಗೆ ಬರುವ ಮೊಯಿನ್ ಅಲಿ ಋತುವಿನಲ್ಲಿ ಅವರು 8 ಪಂದ್ಯಗಳಲ್ಲಿ 7 ಇನ್ನಿಂಗ್ಸ್‌ಗಳಲ್ಲಿ ಕೇವಲ 107 ರನ್ ಗಳಿಸಿದ್ದಾರೆ. ಚೆನ್ನೈನಲ್ಲಿ ದುಬೆ ಸಹ ಮಿಂಚುತ್ತಿರುವುದರಿಂದ ಮೂರನೇ ಆಟಗರನಾಗಿ ಸ್ಥಾನ ಪಡೆದುಕೊಂಡಿದ್ದಾರೆ.

ಅಂಬಟಿ ರಾಯುಡು:ಕಳೆದ ಕೆಲ ಆವೃತ್ತಿಗಳಲ್ಲಿ ಸಿಎಸ್​ಕೆಯ ಸ್ಟಾರ್​ ಬ್ಯಾಟರ್​ ಆಗಿದ್ದ ಅಂಬಟಿ ರಾಯುಡು ಸಹ ಈ ವರ್ಷ ಘರ್ಜಿಸುತ್ತಿಲ್ಲ. ಅವರು 9 ಪಂದ್ಯಗಳಲ್ಲಿ 7 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿದ್ದು, 136.07 ಸ್ಟ್ರೈಕ್ ರೇಟ್‌ನೊಂದಿಗೆ ಕೇವಲ 83 ರನ್ ಗಳಿಸಿದ್ದಾರೆ.

ದಿನೇಶ್ ಕಾರ್ತಿಕ್: ಕಳೆದ ಋತುವಿನಲ್ಲಿ ಸೂಪರ್ 'ಫಿನಿಶರ್' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ದಿನೇಶ್ ಕಾರ್ತಿಕ್ ತಮ್ಮ ಕಳಪೆ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ವಿಫಲವಾಗಿ ಟೀಕೆಗೆ ಗುರಿಯಾಗಿದ್ದ ಡಿಕೆ ಮೇಲೆ ಆರ್‌ಸಿಬಿ ನಂಬಿಕೆ ಇಟ್ಟಿದ್ದರೂ ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತಿದ್ದಾರೆ. ಈ ಋತುವಿನಲ್ಲಿ ಅವರು 8 ಪಂದ್ಯಗಳಲ್ಲಿ 83 ರನ್ ಗಳಿಸಿದ್ದಾರೆ. ಐಪಿಎಲ್ 2022 ರ ಸೀಸನ್‌ನಲ್ಲಿ 200 ಸ್ಟ್ರೈಕ್ ರೇಟ್‌ನೊಂದಿಗೆ ಆಡಿದ ಡಿಕೆ ಅವರ ಸ್ಟ್ರೈಕ್ ರೇಟ್ ಈಗ 131.75 ಆಗಿದೆ ಎಂಬುದು ಗಮನಾರ್ಹ.

ಇವರ ಜೊತೆಗೆ ರಾಹುಲ್ ತ್ರಿಪಾಠಿ, ಮಯಾಂಕ್ ಅಗರ್ವಾಲ್ ಮತ್ತು ಏಡೆನ್ ಮಾರ್ಕ್ರಾಮ್ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ತ್ರಿಪಾಠಿ ಈ ಆವೃತ್ತಿಯಲ್ಲಿ 170 ರನ್​ ಕಲೆಹಾಕಿದ್ದಾರೆ. ಅವರಿಂದ ಮ್ಯಾಚ್​ ವಿನ್ನಿಂಗ್​ ಪ್ರದರ್ಶನ ಬಂದಿಲ್ಲ. ನಾಯಕ ಮಾರ್ಕ್ರಾಮ್ ಕೂಡ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗುತ್ತಿಲ್ಲ. ಅವರು ಏಳು ಪಂದ್ಯಗಳಲ್ಲಿ ಕೇವಲ 132 ರನ್ ಗಳಿಸಿದರು. ಮಯಾಂಕ್ ಅಗರ್ವಾಲ್ (169 ರನ್) ಅವರು ಅನುಭವದ ಅಡಿಯಲ್ಲಿ ಬ್ಯಾಟಿಂಗ್ ಮಾಡುತ್ತಿಲ್ಲ.

ಇದನ್ನೂ ಓದಿ:ಜಿಯೋ ಸಿನಿಮಾಗೆ ಐಪಿಎಲ್​ನಿಂದ ಭರ್ಜರಿ ಆದಾಯ: 26 ಸಂಸ್ಥೆಗಳಿಂದ ಜಾಹೀರಾತು

Last Updated : May 2, 2023, 7:32 AM IST

ABOUT THE AUTHOR

...view details