ನವದೆಹಲಿ:ಮುಂಬರುವ ಐಪಿಎಲ್ ಸೀಸನ್ನಲ್ಲಿ 10 ಟೀಮ್ಗಳು ಕಣದಲ್ಲಿರಲಿದೆ. ಇಂದು ಮತ್ತೆರಡು ತಂಡಗಳು ಐಪಿಎಲ್ ಕುಟುಂಬ ಸೇರಿಕೊಂಡಿವೆ. ಅಹಮದಾಬಾದ್ ಹಾಗೂ ಲಖನೌ ತಂಡಗಳು ಐಪಿಎಲ್ನಲ್ಲಿ 9 ಹಾಗೂ 10ನೇ ತಂಡವಾಗಿ ಸೇರಿಕೊಂಡಿವೆ.
ಇಂದು ದುಬೈನಲ್ಲಿರುವ ತಾಜ್ ಹೋಟೆಲ್ನಲ್ಲಿ ನಡೆದ ಬಿಡ್ಡಿಂಗ್ನಲ್ಲಿ ಸಾವಿರಾರು ಕೋಟಿ ರೂಪಾಯಿಗೆ ಈ ಎರಡು ತಂಡಗಳ ಖರೀದಿ ಯಶಸ್ವಿಯಾಗಿದೆ. ಆರ್ ಪಿ-ಸಂಜೀವ್ ಗೊಯೆಂಕಾ ಗ್ರೂಪ್ (ಆರ್ಪಿಎಸ್ಜಿ) (ಲಖನೌ) ಮತ್ತು ಸಿವಿಸಿ ಕ್ಯಾಪಿಟಲ್ ಪಾರ್ಟ್ನರ್ಸ್ (ಅಹಮದಾಬಾದ್) ಹೊಸ ಮಾಲೀಕರಾಗಿ ಐಪಿಎಲ್ ಸೇರಿಕೊಂಡಿದ್ದಾರೆ.
ಮೂಲಗಳ ಪ್ರಕಾರ ಲಖನೌ ತಂಡವನ್ನ ಎಸ್ಪಿಎಸ್ಜಿ ಸಂಸ್ಥೆಯು 7 ಸಾವಿರ ಕೋಟಿ ರೂಪಾಯಿಗೆ ಬಿಡ್ ಮಾಡಿದ್ದರೆ, ಇತ್ತ ಅಹಮದಾಬಾದ್ ತಂಡವನ್ನ ಸಿವಿಸಿ ಸುಮಾರು 5,200 ಕೋಟಿ ರೂಪಾಯಿಗೆ ಬಿಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ 12,200 ಕೋಟಿ ರೂಪಾಯಿ ಬಿಸಿಸಿಐಗೆ ಹರಿದು ಬಂದಿದೆ.
ಎರಡೂ ತಂಡಗಳು ಮುಂದಿನ ಸೀಸನ್ನಲ್ಲಿ ಕಣಕ್ಕಿಳಿಯಲಿವೆ. ಹೀಗಾಗಿ ಎಲ್ಲ ತಂಡಗಳಿಗೂ ಲೀಗ್ನಲ್ಲಿ ಪಂದ್ಯಗಳು ಹೆಚ್ಚಾಗಲಿದೆ. ಜೊತೆಗೆ ವೀಕ್ಷಕರ ಸಂಖ್ಯೆಯಲ್ಲೂ ಭಾರಿ ಏರಿಕೆಯಾಗುವ ನಿರೀಕ್ಷೆ ಹುಟ್ಟುಹಾಕಿದೆ.
ಇದನ್ನೂ ಓದಿ:ಅನಿರ್ದಿಷ್ಟಾವಧಿ ವಿರಾಮದ ಬಳಿಕ ಇಂಗ್ಲೆಂಡ್ ತಂಡಕ್ಕೆ ಸ್ಟೋಕ್ಸ್ ಆಗಮನ: ಆಶಸ್ ಸರಣಿಗೆ ಬೆನ್ ಲಭ್ಯ