ಕರ್ನಾಟಕ

karnataka

ETV Bharat / sports

IPL 2023: ಇದು ನನ್ನ ಮೊದಲ ಟೆಸ್ಟ್ ಗೆದ್ದಂತೆ - ಸೌರವ್​ ಗಂಗೂಲಿ

ಡೆಲ್ಲಿ ಕ್ಯಾಪಿಟಲ್ಸ್ ಗುರುವಾರ ಕೆಕೆಆರ್​ ವಿರುದ್ಧ 2023ನೇ ಆವೃತ್ತಿಯ ಮೊದಲ ಗೆಲುವು ದಾಖಲಿಸಿದೆ.

Sourav Ganguly talk about after Delhi Capitals first win
IPL 2023: ಇದು ನನ್ನ ಮೊದಲ ಟೆಸ್ಟ್ ಗೆದ್ದಂತೆ - ಸೌರವ್​ ಗಂಗೂಲಿ

By

Published : Apr 21, 2023, 5:44 PM IST

ನವದೆಹಲಿ: ಸತತ ಐದು ಸೋಲಿನ ನಂತರ ಆರನೇ ಪಂದ್ಯದಲ್ಲಿ ಗೆಲುವಿಗೆ ಮರಳಿರುವ ಡೆಲ್ಲಿ ಕ್ಯಾಪಿಟಲ್ಸ್​ ಅಂಕಪಟ್ಟಿಯಲ್ಲಿ ಎರಡು ಅಂಕಗಳ ಗಳಿಸಿದೆ. ಈ ಗೆಲುವಿನ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್​ ನಿದೇರ್ಶಕ ಸೌರವ್​ ಗಂಗೂಲಿ ಇದು ನನ್ನ ಮೊದಲ ಟೆಸ್ಟ್​ ಗೆದ್ದ ರೀತಿಯ ಭಾವನೆ ಇದೆ. ಆದರೆ ಬ್ಯಾಟಿಂಗ್​ನಲ್ಲಿ ಇನ್ನಷ್ಟೂ ಉತ್ತಮ ಪ್ರದರ್ಶನದ ಅಗತ್ಯ ಇದೆ ಎಂದು ಹೇಳಿದ್ದಾರೆ.

ಗುರುವಾರ ಡೆಲ್ಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ಎದುರಾಗಿದ್ದವು. ಮಳೆಯ ಕಾರಣ ಪಂದ್ಯ ತಡವಾದರೂ ಡೆಲ್ಲಿ ತನ್ನ ಈ ಆವೃತ್ತಿಯ ಮೊದಲ ಗೆಲುವು ದಾಖಲಿಸಿದೆ. ಟಾಸ್​ ಗೆದ್ದು ಬೌಲಿಂಗ್​ ತೆಗೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್​ ಕೋಲ್ಕತ್ತಾವನ್ನು ನಿಗದಿತ ಓವರ್​ನಲ್ಲಿ127ಕ್ಕೆ ಕಟ್ಟಿಹಾಕಿತು.

ಬೌಲಿಂಗ್​ನಲ್ಲಿ ಅಕ್ಷರ್ ಪಟೇಲ್ (2/13), ಕುಲದೀಪ್ ಯಾದವ್ (2/15) ಇಶಾಂತ್ ಶರ್ಮಾ (2/19) ಮತ್ತು ಅನ್ರಿಚ್ ನಾರ್ಟ್ಜೆ (2/20) ಅವರ ಉತ್ತಮ ಪ್ರದರ್ಶನ ನೀಡಿದರು. ಈ ಗುರಿಯನ್ನು ನಾಯಕ ಡೇವಿಡ್​ ವಾರ್ನರ್​ (41 ಬಾಲ್​ನಲ್ಲಿ 57) ಅವರ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್​ಗೆ ಸಾಧಿಸಿ ಮೊದಲ ಗೆಲುವನ್ನು ಬರೆಯಿತು.

"ಇದು ನನ್ನ ಮೊದಲ ಟೆಸ್ಟ್‌ನಂತೆ ಎಂದು ನಾನು ಭಾವಿಸುತ್ತಿದ್ದೆ. ಅಂಕಪಟ್ಟಿಯ ಮೊದಲ ಅಂಕದ ದಾಖಲಾದ ಬಗ್ಗೆ ಸಂತೊಷವಿದೆ. ನಾವು ಈ ಆವೃತ್ತಿಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದೇವೆ" ಎಂದು ಬೌಲಿಂಗ್​ ವಿಭಾಗದ ಬಗ್ಗೆ ಗಂಗೂಲಿ, ಕೆಕೆಆರ್​ ವಿರುದ್ಧದ ನಾಲ್ಕು ವಿಕೆಟ್‌ಗಳ ಗೆಲುವಿನ ನಂತರ ಹೇಳಿದರು.

ಆದರೆ, ಬ್ಯಾಟಿಂಗ್​ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಕೆಕೆಆರ್​ ನೀಡಿದ್ದ ಸರಳ ಮೊತ್ತವನ್ನು ಡೆಲ್ಲಿ ಕೊನೆಯ ನಾಲ್ಕು ಬಾಲ್​ಗಳನ್ನು ಉಳಿಸಿಕೊಂಡು ಗೆಲುವು ದಾಖಲಿಸಿತ್ತು. ಇದರ ಬಗ್ಗೆ ಮಾತನಾಡಿದ ಡಿಸಿ ನಿರ್ದೇಶಕ ಗಂಗೂಲಿ, "ಈ ಪಿಚ್​ ಉತ್ತಮವಾಗಿದೆ ಮತ್ತು ಔಟ್​ ಪೀಲ್ಡ್​ ವೇಗವಾಗಿದೆ. ಆದರೆ ನಮ್ಮ ಬ್ಯಾಟಿಂಗ್​ನಲ್ಲಿ ಸಮಸ್ಯೆ ಇದೆ. ನಾವು ಮತ್ತೆ ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ಬಗ್ಗೆ ಸರಿಯಾಗಿ ಚಿಂತಿಸಬೇಕಿದೆ. ಬೌಲಿಂಗ್​ ಅನ್ನು ಇಶಾಂತ್ ಶರ್ಮಾ, ಮುಖೇಶ್ ಕುಮಾರ್ ನಾರ್ಟ್ಜೆ ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಅಗತ್ಯವಿದೆ" ಎಂದಿದ್ದಾರೆ.

"ಅಂಕ ಪಟ್ಟಿಯಲ್ಲಿ ಎರಡು ಅಂಕ ಗಳಿಸಿದ್ದು ಸಂತೋಷವಾಗಿದೆ. ಬೌಲಿಂಗ್​ ವಿಭಾಗದ ಬಗ್ಗೆ ನನಗೆ ನಿಜವಾಗಿಯೂ ಹೆಮ್ಮೆ ಇದೆ. ನಾವು ಪವರ್​ ಪ್ಲೇಯಲ್ಲಿ ವಿಕೆಟ್​ ಪಡೆಯುವ ಬಗ್ಗೆ ಚಿಂತಿಸಿದ್ದೆವು, ಅದರಂತೆ ಬೌಲರ್​ಗಳು ವಿಕೆಟ್​ ಪಡೆದಿದ್ದಾರೆ. ಆದರೆ, ನಾವು ಸಹ ವಿಕೆಟ್​ಗಳನ್ನು ಆರಂಭದಲ್ಲಿ ಕಳೆದುಕೊಂಡೆವು, ನಾವು ಈ ಬಗ್ಗೆ ಡ್ರೆಸ್ಸಿಂಗ್​ ರೂಮ್​ನಲ್ಲಿ ಚರ್ಚಿಸಿದ್ದೇವೆ. ಇದು ನಮ್ಮ ಸಾಮಾನ್ಯ ಪ್ರದರ್ಶನವಾಗಿದೆ ಎಂದು ನಾಯಕ ಡೇವಿಡ್​ ವಾರ್ನರ್​ ಗೆಲುವಿನ ನಂತರ ಹೇಳಿಕೊಂಡಿದ್ದಾರೆ.

ಇದನ್ನ ಓದಿ:CSK vs SRH: ಮೂರನೇ ಸ್ಥಾನ ಉಳಿಸಿಕೊಳ್ಳುವತ್ತ ಧೋನಿ ಚಿತ್ತ.. ಗೆಲುವಿಗೆ ಮಾರ್ಕ್ರಾಮ್​ ತಂತ್ರವೇನು?

ABOUT THE AUTHOR

...view details