ಅಹ್ಮದಾಬಾದ್: ಮೊಟೇರಾ ಕ್ರೀಡಾಂಗಣದಲ್ಲಿ ಕೆಕೆಆರ್ ತಂಡದ ಶಿವಂ ಮಾವಿ ಎಸೆದ ಮೊದಲ ಓವರ್‌ನ 6 ಎಸೆತಗಳನ್ನೂ ಬೌಂಡರಿಗಟ್ಟುವ ಮೂಲಕ ದೆಹಲಿಯ ಬ್ಯಾಟ್ಸ್‌ಮನ್ ಪೃಥ್ವಿ ಶಾ ವಿಶೇಷ ದಾಖಲೆ ಬರೆದರು.
ಈ ಪಂದ್ಯದ ನಂತರ ಶಿವಂ ಮಾವಿ ಮತ್ತು ಪೃಥ್ವಿ ಶಾ ಮಧ್ಯೆ ತಮಾಷೆಯ ಘಟನೆಯೊಂದು ನಡೆಯಿತು. ಏಕೆಂದರೆ ಇಬ್ಬರು ಆಟಗಾರರು 2018 ಅಂಡರ್-19 ವಿಶ್ವಕಪ್ ತಂಡದ ಸದಸ್ಯರೂ ಕೂಡಾ ಹೌದು. ಆ ಸಂದರ್ಭದಲ್ಲಿ ತಂಡದ ಸಾರಥ್ಯವನ್ನು ಪೃಥ್ವಿ ಶಾ ವಹಿಸಿಕೊಂಡಿದ್ದರು. ಹಾಗಾಗಿ ಇಬ್ಬರ ನಡುವೆ ಒಳ್ಳೆಯ ಸ್ನೇಹವಿದೆ. ತನ್ನ ಓವರ್‌ನ 6 ಎಸೆತಗಳನ್ನೂ ಬೌಂಡರಿಗಟ್ಟಿದ ಸ್ನೇಹಿತನ ಕುತ್ತಿಗೆ ಹಿಂಭಾಗ ಹಿಡಿದು ಮಾವಿ ಜಗ್ಗಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.