ಕರ್ನಾಟಕ

karnataka

ETV Bharat / sports

ಅರ್ಜುನ್ ತೆಂಡೂಲ್ಕರ್ ಈ ಬಾರಿ ಐಪಿಎಲ್ ಪ್ರವೇಶಿಸುತ್ತಾರಾ.. ರೋಹಿತ್ ಶರ್ಮಾ ಪ್ರತಿಕ್ರಿಯೆ ಹೀಗಿದೆ.. - Rohit sharma

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಐಪಿಎಲ್​ಗೆ ಎಂಟ್ರಿ ಕೊಡುವ ವಿಚಾರ ಚರ್ಚೆಗೆ ಗ್ರಾಸವಾಗುತ್ತಿದೆ. ಅರ್ಜುನ್ ತೆಂಡೂಲ್ಕರ್ ಈ ಬಾರಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಮುಂಬೈ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ.

arjun tendulkar
ರೋಹಿತ್ ಶರ್ಮಾ ಮತ್ತು ಅರ್ಜುನ್ ತೆಂಡೂಲ್ಕರ್

By

Published : Mar 30, 2023, 8:41 PM IST

ಇನ್ನೊಂದು ದಿನದಲ್ಲಿ ಭಾರತದಲ್ಲಿ ಕ್ರಿಕೆಟ್ ಹಬ್ಬ ಶುರುವಾಗಲಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಸೀಸನ್ ಆರಂಭವಾಗಲಿದೆ. ಎಲ್ಲಾ ಆಟಗಾರರು ಈಗಾಗಲೇ ಭರ್ಜರಿ ಅಭ್ಯಾಸ ಆರಂಭಿಸಿದ್ದಾರೆ. ಪಂದ್ಯಗಳನ್ನು ಆಡಲು ಸಿದ್ಧವಾಗಿದ್ದಾರೆ. ಆದರೆ, ಇತ್ತೀಚಿನ ನಡೆದ ಮೆಗಾ ಟೂರ್ನಮೆಂಟ್‌ಗೆ ಗಾಯಗಳಿಂದ ದೂರವಿರುವ ಅನೇಕ ಆಟಗಾರರಿದ್ದಾರೆ. ಇದರಿಂದ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ತೋರಲು ಉತ್ತಮ ಅವಕಾಶ ಲಭಿಸಿದಂತಾಗಿದೆ.

ಹೊಸಬರಿಗೆ ಎಷ್ಟು ಅವಕಾಶಗಳು ಬಂದಿವೆ ಎಂದು ಮೊದಲು ಯೋಚಿಸುವುದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಬಗ್ಗೆ. ಅವರು ಯಾವಾಗ ಐಪಿಎಲ್ ಎಂಟ್ರಿ ಕೊಡುತ್ತಾರೆ? ಅವರಿಗೆ ಯಾವಾಗ ಅವಕಾಶ ಸಿಗುತ್ತದೆ ಎಂಬ ಚರ್ಚೆ ನಡೆಯುತ್ತಲೇ ಇದೆ. ಆದರೆ, ಸದ್ಯ ಸಚಿನ್ ಮತ್ತು ಅರ್ಜುನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಲಭಿಸಿದೆ. ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಹೊರಗುಳಿದಿರುವುದು ಗೊತ್ತೇ ಇದೆ. ಇದೀಗ ಅರ್ಜುನ್‌ಗೆ ವರದಾನವಾಗಿ ಪರಿಣಮಿಸಲಿದೆ. ಏತನ್ಮಧ್ಯೆ, 2021ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡ ಅರ್ಜುನ್ ಇದುವರೆಗೆ ಒಂದೇ ಒಂದು ಪಂದ್ಯವನ್ನು ಆಡಿಲ್ಲ.

ಐಪಿಎಲ್​ನಲ್ಲಿ ಈಗಾಗಲೇ ಐದು ಟ್ರೋಫಿಗಳು ಮತ್ತು ಐದು ಪ್ರಶಸ್ತಿಗಳನ್ನು ಗೆದ್ದಿರುವ ಮುಂಬೈ ಇಂಡಿಯನ್ಸ್, ಕಳೆದ ಋತುವಿನಲ್ಲಿ ಅಭಿಮಾನಿಗಳನ್ನು ಗಂಭೀರವಾಗಿ ನಿರಾಸೆಗೊಳಿಸಿದೆ. ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಗಳಿಸಿತು. ಆದರೆ, ಈ ಬಾರಿ ತಂಡವು ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಆದರೆ, ಬ್ಯಾಟಿಂಗ್ ವಿಭಾಗ ಬಿಟ್ಟರೆ.. ಬೌಲಿಂಗ್ ವಿಭಾಗ ಕೊಂಚ ದುರ್ಬಲ. ಸ್ಟಾರ್ ವೇಗಿ ಬುಮ್ರಾ ಜೊತೆಗೆ ಆಸ್ಟ್ರೇಲಿಯಾದ ವೇಗದ ಬೌಲರ್ ಜೇ ರಿಚರ್ಡ್ಸನ್ ಅವರು ಇಡೀ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಇದರೊಂದಿಗೆ ಆಲ್ ರೌಂಡರ್ ಅರ್ಜುನ್ ತೆಂಡೂಲ್ಕರ್ ಹೆಸರನ್ನು ಪರಿಗಣಿಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಅರ್ಜುನ್ ಗೆ ಅವಕಾಶ ನೀಡುವ ಮೂಲಕ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲೂ ಬಲಿಷ್ಠವಾಗಲಿದೆ ಎಂದು ಟೀಮ್ ಮ್ಯಾನೇಜ್ ಮೆಂಟ್ ಭಾವಿಸಿರುವಂತಿದೆ. ಅವರು ಕ್ಯಾಮರೂನ್ ಗ್ರೀನ್ ಜೊತೆಗೆ ಆಲ್ ರೌಂಡರ್ ಆಗಿ ಆಡುವ ಸಾಧ್ಯತೆಯಿದೆ ಹೆಚ್ಚಿದೆ.

ರೋಹಿತ್ ಶರ್ಮಾ ಹೇಳಿದ್ದೇನು?:ಅರ್ಜುನ್ ಐಪಿಎಲ್ ಪ್ರವೇಶದ ಬಗ್ಗೆ ಮುಂಬೈ ನಾಯಕ ರೋಹಿತ್ ಶರ್ಮಾ, "ಅರ್ಜುನ್ ಈಗಾಗಲೇ ತಮ್ಮ ಬೌಲಿಂಗ್‌ನಿಂದ ಹಲವರನ್ನು ಆಕರ್ಷಿಸುತ್ತಿದ್ದಾರೆ. ಅವರು ಸದ್ಯ ಸಿದ್ಧರಿದ್ದರೆ, ನಾನು ಖಂಡಿತವಾಗಿಯೂ ಅವರ ಹೆಸರನ್ನು ಆಯ್ಕೆಗೆ ಪರಿಗಣಿಸುತ್ತೇನೆ. ಅವರು ಇತ್ತೀಚೆಗೆ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಅವರು ಕಳೆದ 6ರಿಂದ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅವರಿಗೆ ಅವಕಾಶ ಲಭಿಸಬಹುದು" ಎಂದು ಅವರು ಹೇಳಿದರು.

ಕೋಚ್ ಮಾರ್ಕ್ ಬೌಚರ್ ಮಾತಾಡಿದ್ದೇನು?:ಮುಂಬೈ ಇಂಡಿಯನ್ಸ್ ಕೋಚ್ ಮಾರ್ಕ್ ಬೌಚರ್ ಮಾತನಾಡಿ, ''ಗಾಯದಿಂದ ಚೇತರಿಸಿಕೊಂಡಿರುವ ಅರ್ಜುನ್ ಅಭ್ಯಾಸ ಪಂದ್ಯಕ್ಕೆ ಸಜ್ಜಾಗಿದ್ದು, ಈ ಪಂದ್ಯದಲ್ಲಿ ಫಿಟ್ ನೆಸ್ ಸಾಬೀತುಪಡಿಸಿ ಉತ್ತಮವಾಗಿ ಆಡಿದರೆ, ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯಿದ್ದು, ಬಳಿಕ ಅವರನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಅವರ ಬಗ್ಗೆ ಮ್ಯಾನೇಜ್‌ಮೆಂಟ್‌ನ ಗಮನಕ್ಕೆ ತರಲಾಗುವುದು. ನಾವು ಅವರನ್ನು ಈ ಲೀಗ್‌ನಲ್ಲಿ ಲಭ್ಯವಾಗುವಂತೆ ಮಾಡಿದರೆ, ಅದು ನಮಗೆ ತುಂಬಾ ಒಳ್ಳೆಯದು ಎಂದು ಅವರು ಹೇಳುತ್ತಾರೆ. ಅರ್ಜುನ್ ಈ ಬಾರಿಯಾದರೂ ಐಪಿಎಲ್​ಗೆ ಪಾದಾರ್ಪಣೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಅರ್ಜುನ್ ತೆಂಡೂಲ್ಕರ್​ಯಿಂದ ಉತ್ತಮ ಪ್ರದರ್ಶನ:ಇದೇ ವೇಳೆ ರಣಜಿ ಟ್ರೋಫಿಯಲ್ಲಿ ಗೋವಾ ಪರ ಆಡುತ್ತಿರುವ ಅರ್ಜುನ್ ರಣಜಿ ಪಂದ್ಯಗಳಲ್ಲಿ ಆಕರ್ಷಕ ಪ್ರದರ್ಶನ ನೀಡಿದ್ದಾರೆ. ಮೊದಲ ಪಂದ್ಯದಲ್ಲಿಯೇ ಶತಕ ಸಿಡಿಸಿದ್ದರು. ಇಲ್ಲಿಯವರೆಗೆ ಅವರು 7 ಲಿಸ್ಟ್-ಎ (25 ವಿಕೆಟ್) ಪಂದ್ಯಗಳನ್ನು ಆಡಿದ್ದಾರೆ. ಅವರು ಐದು ಪ್ರಥಮ ದರ್ಜೆ (9 ವಿಕೆಟ್) ಪಂದ್ಯಗಳನ್ನು ಮತ್ತು 9 ಟಿ-20 (12 ವಿಕೆಟ್)ಗಳನ್ನು ಆಡಿದ್ದಾರೆ.

ಇದನ್ನೂ ಓದಿ:ಐಪಿಎಲ್​ ಕ್ರಿಕೆಟ್​ಗೆ ಮರಳುವೆ: ಜಾಹೀರಾತು ವಿಡಿಯೋದಲ್ಲಿ ರಿಷಬ್​ ಪಂತ್​ ಹೇಳಿಕೆ

ABOUT THE AUTHOR

...view details