ಬೆಂಗಳೂರು: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದು, ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಇರಾದೆ ಇಟ್ಟುಕೊಂಡಿದೆ.
ಡಿವಿಲಿಯರ್ಸ್ ಸೇರಿ ಯುಗಾದಿ ಹಬ್ಬಕ್ಕೆ ಶುಭಕೋರಿದ ಆರ್ಸಿಬಿ ಪ್ಲೇಯರ್ಸ್!
ಸಡಗರ ಸಂಭ್ರಮದಿಂದ ಯುಗಾದಿ ಹಬ್ಬದ ಆಚರಣೆ ಮಾಡಲಾಗುತ್ತಿದ್ದು, ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಯರ್ಸ್ ಕೂಡ ಹಬ್ಬದ ವಿಶ್ ಮಾಡಿದ್ದಾರೆ.
ಇದರ ಮಧ್ಯೆ ತಂಡದ ಪ್ಲೇಯರ್ಸ್ ಯುಗಾದಿ ಹಬ್ಬದ ಶುಭಾಶಯ ತಿಳಿಸಿದೆ. ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹೊಸ ವರುಷದ ಹೊಸ ಚೈತನ್ಯದಿಂದ ನಿಮ್ಮ ಬಾಳು ಹಸನಾಗಲಿ ಎಂದು ಟ್ವಿಟರ್ನಲ್ಲಿ ಆರ್ಸಿಬಿ ಬರೆದುಕೊಂಡಿದ್ದು, ಎಲ್ಲ ಪ್ಲೇಯರ್ಸ್ ಹಬ್ಬದ ಶುಭಾಶಯ ಕೋರಿರುವ ವಿಡಿಯೋ ಶೇರ್ ಮಾಡಿಕೊಂಡಿದೆ.
ವಿಡಿಯೋದಲ್ಲಿ ಕನ್ನಡಿಗನಾದ ದೇವದತ್ ಪಡಿಕ್ಕಲ್ ಸೇರಿದಂತೆ ಎಬಿ ಡಿವಿಲಿಯರ್ಸ್,ಡೇನಿಯಲ್ ಕ್ರಿಶ್ಚಿಯನ್,ಕೆ.ಎಸ್ ಭರತ್, ನವದೀಪ್ ಸೈನಿ,ವಾಷಿಂಗ್ಟನ್ ಸುಂದರ್ ಶುಭಾಶಯ ಕೋರಿದ್ದಾರೆ. ನಾಡಿನಾದ್ಯಂತ ಇಂದು ಸಡಗರ ಸಂಭ್ರಮದಿಂದ ಯುಗಾದಿ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಇದರ ಮಧ್ಯೆ ಆರ್ಸಿಬಿ ಪ್ಲೇಯರ್ಸ್ ವಿಶ್ ಮಾಡಿದ್ದಾರೆ.