ಹೈದರಾಬಾದ್:ಇಂಡಿಯನ್ ಪ್ರೀಮಿಯರ್ ಲೀಗ್ನ ನಿನ್ನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವಿನ ನಗೆ ಬೀರುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಲಗ್ಗೆ ಹಾಕಿ, ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ಆದರೆ, ಪಂದ್ಯದ ವೇಳೆ ನಡೆದ ಅಪರೂಪದ ಘಟನೆವೊಂದು ಪಂದ್ಯ ನೋಡಲು ಸೇರಿದ್ದ ಅನೇಕರಲ್ಲಿ ಹರ್ಷೋದ್ಗಾರಕ್ಕೆ ಕಾರಣವಾಗಿದೆ. ಅವರ ವಿಡಿಯೋ ತುಣುಕು ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಪಂದ್ಯದ ವೇಳೆ ಪ್ರೇಮ ನಿವೇದನೆ ಪ್ರಕರಣವೊಂದು ನಡೆದಿದೆ. ವಿಶೇಷವೆಂದರೆ ಸ್ಟೇಡಿಯಂನಲ್ಲಿ ಯುವತಿಯೊಬ್ಬಳು ತಮ್ಮ ಗೆಳೆಯನಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ.
ಆರ್ಸಿಬಿ ಜೆರ್ಸಿ ತೊಟ್ಟು ಪಂದ್ಯ ವೀಕ್ಷಣೆ ಮಾಡ್ತಿದ್ದ ಯುವಕನಿಗೆ ಪ್ರೇಮ ನಿವೇದನೆ ಮಾಡಿರುವ ಯುವತಿ ರಿಂಗ್ ಸಹ ತೊಡಿಸಿದ್ದಾರೆ. ಈ ವೇಳೆ, ಆಕೆಯ ಪ್ರೀತಿ ಒಪ್ಪಿಕೊಂಡಿರುವ ಯುವಕ ಪ್ರೀತಿಯಿಂದ ಅಪ್ಪಿಕೊಂಡಿದ್ದಾನೆ. ಈ ಸುಂದರ ಕ್ಷಣದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.