ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಧೋನಿ ನಾಯಕತ್ವದ ಸಿಎಸ್ಕೆ ತಂಡ 45 ರನ್ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೆ ಪ್ರಮಖ ಕಾರಣ ರವೀಂದ್ರ ಜಡೇಜಾ ಅವರ ಅದ್ಭುತ ಆಲ್‌ರೌಂಡ್ ಪ್ರದರ್ಶನ.
ಬೌಲಿಂಗ್‌ನಲ್ಲಿ ಆರ್ಆರ್ ತಂಡದ ಪ್ರಮುಖ ಎರಡು ವಿಕೆಟ್ ಪಡೆದು ಮಿಂಚಿದರೆ, ಇತ್ತ ಫೀಲ್ಡಿಂಗ್‌ನಲ್ಲೂ 4 ಕ್ಯಾಚ್ ಮೂಲಕ ನಾನೊಬ್ಬ ಸಂಪೂರ್ಣ ಆಲ್ರೌಂಡರ್ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದರು. ರಾಜಸ್ಥಾನದ ಆರಂಭಿಕ ಆಟಗಾರ ಮನನ್ ವೊಹ್ರಾ, ರಿಯಾನ್ ಪರಾಗ್, ಕ್ರಿಸ್ ಮೋರಿಸ್ ಮತ್ತು ಜಯದೇವ್ ಉನಾದ್ಕತ್ ಅವರ ಕ್ಯಾಚ್ ಪಡೆದ ಜಡ್ಡು ಈ ದಾಖಲೆ ಬರೆದರು.